ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನೆಟ್ಟ ರವಿಚಂದ್ರನ್ ಅಶ್ವಿನ್..!
ರಾಂಚಿ(ಫೆ.25): ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ರಾಂಚಿ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ವೇಳೆ ಅಪರೂಪದ ಸಾಧನೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾನುವಾರವಾದ ಇಂದು ಇಂಗ್ಲೆಂಡ್ ಎದುರಿನ 4ನೇ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ರಾಂಚಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆಯಲ್ಲಿ ರವಿಚಂದ್ರನ್ ಅಶ್ವಿನ್ ಓಲಿ ಪೋಪ್ ವಿಕೆಟ್ ಕಬಳಿಸುತ್ತಿದ್ದಂತೆಯೇ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ಅಪರೂಪದ ದಾಖಲೆ ತಮ್ಮದಾಗಿಸಿಕೊಂಡರು.
ಹೌದು, ರವಿಚಂದ್ರನ್ ಅಶ್ವಿನ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನೆಲದಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿಯವರೆಗೂ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆ ಇದೀಗ ಅಶ್ವಿನ್ ಪಾಲಾಗಿದೆ.
ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ 1993ರಿಂದ 2008ರವರೆಗೆ ಭಾರತ ಪರ ತವರಿನಲ್ಲಿ 63 ಟೆಸ್ಟ್ ಪಂದ್ಯಗಳನ್ನಾಡಿ 350 ವಿಕೆಟ್ ಕಬಳಿಸಿದ್ದರು. ಅಶ್ವಿನ್ ಕಬಳಿಸಿದ 619 ವಿಕೆಟ್‌ಗಳ ಪೈಕಿ 350 ವಿಕೆಟ್‌ಗಳು ತವರಿನಲ್ಲಿಯೇ ಕಬಳಿಸಿದ್ದರು.
ಇದೀಗ ರವಿಚಂದ್ರನ್ ಅಶ್ವಿನ್ ತವರಿನಲ್ಲಿ 59 ಟೆಸ್ಟ್ ಪಂದ್ಯಗಳನ್ನಾಡಿ 354 ವಿಕೆಟ್ ಕಬಳಿಸುವ ಮೂಲಕ ಒಂದು ದಶಕದಿಂದ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಅಶ್ವಿನ್ ಪಾಲಾಗಿದೆ.
ರವಿಚಂದ್ರನ್ ಅಶ್ವಿನ್ ಇದುವರೆಗೂ 99 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಟ್ಟಾರೆ 507 ವಿಕೆಟ್ ಕಬಳಿಸಿದ್ದಾರೆ. ಅಶ್ವಿನ್ ಕಬಳಿಸಿದ ಒಟ್ಟಾರೆ ವಿಕೆಟ್‌ಗಳ ಪೈಕಿ ಶೇ 75% ಭಾರತದಲ್ಲೇ ಎನ್ನುವುದು ಮತ್ತೊಂದು ವಿಶೇಷ.