ಈ ಸಲದ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡ ಇದೇನಾ?
ಐಪಿಎಲ್ ತಂಡಗಳಲ್ಲಿ ಅಂತಿಮ ತಂಡದಲ್ಲಿ ಸ್ಥಾನಕ್ಕಾಗಿ ಆಟಗಾರರು ಹೆಚ್ಚಾಗಿ ಪೈಪೋಟಿ ನಡೆಸುವ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. ಮುಂಬೈ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಿಮ ತಂಡದ ನಿರೀಕ್ಷೆಗಾಗಿ ತೀವ್ರ ಪೈಪೋಟಿ ಇದೆ. ಮುಂಬೈ ಇಂಡಿಯನ್ಸ್ ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಇದರಿಂದ MI ತಂಡ ಹೇಗಿರುತ್ತದೋ ಎಂದು ಎದುರು ನೋಡುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2025 ಮಾರ್ಚ್ 22 ರಿಂದ ಅದ್ಧೂರಿಯಾಗಿ ಪ್ರಾರಂಭವಾಗುತ್ತದೆ. ಈ ಕ್ರಿಕೆಟ್ ಹಬ್ಬದಲ್ಲಿ 10 ತಂಡಗಳು ಸ್ಪರ್ಧಿಸಲಿವೆ. 13 ಕ್ರೀಡಾಂಗಣಗಳಲ್ಲಿ 74 ದಿನಗಳ ಕಾಲ ಈ ಐಪಿಎಲ್ 2025 ಕ್ರಿಕೆಟ್ ಹಬ್ಬ ನಡೆಯುತ್ತದೆ. ಈ ಸೀಸನ್‌ನಲ್ಲಿ 5 ಬಾರಿ ಕಪ್ ಗೆದ್ದ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡಗಳಲ್ಲಿ ಮುಂದಿದೆ.
ಅಂತಿಮ ತಂಡ
ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. MI ತಂಡ ತನ್ನ ಮೊದಲ ಪಂದ್ಯದಲ್ಲಿ ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಸೆಣಸಲಿದೆ. ಸಿಎಸ್‌ಕೆ ಕೋಟೆಯಾದ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ MI ತಂಡ ಹೇಗಿರುತ್ತದೋ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಎರಡನೇ ಬಾರಿ ಕ್ಯಾಪ್ಟನ್
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡನೇ ಸೀಸನ್‌ನಲ್ಲಿ ಆಡಲಿದೆ. ಆದರೆ, ಮೊದಲ ಪಂದ್ಯದಲ್ಲಿ ಹಾರ್ದಿಕ್ ಕಣಕ್ಕಿಳಿಯುವುದಿಲ್ಲ. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಾರೆ ಎಂದು ಘೋಷಿಸಿದ್ದಾರೆ. ಆದರೆ ಎರಡನೇ ಪಂದ್ಯದಿಂದ ಪಾಂಡ್ಯ ಎಲ್ಲಾ ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಇರುತ್ತಾರೆ. ಹಾರ್ದಿಕ್ ಉತ್ತಮ ಲೀಡರ್, ತಮ್ಮ ಕ್ಯಾಪ್ಟನ್ಸಿಯಲ್ಲಿ ಗುಜರಾತ್ ತಂಡಕ್ಕೆ ಟ್ರೋಫಿ ತಂದುಕೊಟ್ಟಿದ್ದಾರೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಉತ್ತಮ ನೈಪುಣ್ಯತೆ ಇದೆ. ಇದರಿಂದ ಹಾರ್ದಿಕ್ ತಂಡವನ್ನು ಮುಂದಾಳತ್ವ ವಹಿಸಿ ನಡೆಸುತ್ತಾರೆ ಎಂದು ಭಾವಿಸಲಾಗಿದೆ.
ಬಲಗಳು, ದೌರ್ಬಲ್ಯಗಳು
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಆರ್ಡರ್:
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ನೋಡಿದರೆ, ರೋಹಿತ್ ಶರ್ಮಾ ಜೊತೆಗೆ ರಿಯಾನ್ ರಿಕಲ್ಟನ್ ಓಪನರ್ ಆಗಿ ಬರುವ ಸಾಧ್ಯತೆ ಇದೆ. ಆ ನಂತರ 3ನೇ ಸ್ಥಾನದಲ್ಲಿ ತಿಲಕ್ ವರ್ಮಾ, 4ನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಮಿಡಲ್ ಆರ್ಡರ್‌ನಲ್ಲಿ ವಿಲ್ ಜಾಕ್ಸ್, ಹಾರ್ದಿಕ್ ಪಾಂಡ್ಯ ಇರುತ್ತಾರೆ. ಇವರು ಮ್ಯಾಚ್ ಫಿನಿಶ್ ದೊಡ್ಡ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ಬಾರಿ ಮಿಚೆಲ್ ಸ್ಯಾಂಟ್ನರ್ ತಂಡದಲ್ಲಿದ್ದಾರೆ, ಅವರು ಕೂಡ ಬಾಟಮ್ ಆರ್ಡರ್ ಸಾಲಿನಲ್ಲಿ ಬ್ಯಾಟಿಂಗ್ ಮಾಡಬಲ್ಲರು.
ಬೌಲಿಂಗ್
ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್:
MI ತಂಡದ ಬೌಲಿಂಗ್ ಬಗ್ಗೆ ಮಾತನಾಡಿದರೆ, ಟ್ರೆಂಟ್ ಬೌಲ್ಟ್, ದೀಪಕ್ ಚಹರ್ ಹೊಸ ಚೆಂಡನ್ನು ಹಂಚಿಕೊಳ್ಳುತ್ತಾರೆ. ಆದರೆ, ಜಸ್ಪ್ರೀತ್ ಬುಮ್ರಾ ಕೂಡ ಇದ್ದಾರೆ, ಆದರೆ ಗಾಯದ ಕಾರಣದಿಂದ ಅವರು ಮೊದಲ ಭಾಗದಲ್ಲಿ ಕೆಲವು ಪಂದ್ಯಗಳನ್ನು ಆಡುವುದಿಲ್ಲ. ಅವರ ಸ್ಥಾನದಲ್ಲಿ ರೀಸ್ ಟಾಪ್ಲಿ ಅಥವಾ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಇದೆ. ಇದು ಹೊರತುಪಡಿಸಿ, ಸ್ಪಿನ್ ಬೌಲಿಂಗ್ನೀಡಬಹುದು. ಹಾರ್ದಿಕ್ ಪಾಂಡ್ಯ ಕೂಡ ಆರಂಭಿಕ ಓವರ್‌ಗಳನ್ನು ಹಾಕುವ ಸಾಧ್ಯತೆ ನಲ್ಲಿ ಮಿಚೆಲ್ ಸ್ಯಾಂಟ್ನರ್, ಮುಜೀಬ್ ಉರ್ ರೆಹಮಾನ್, ಕರಣ್ ಶರ್ಮಾ ಕೂಡ ಇದ್ದಾರೆ.
ಇವರೇ ಇರಬಹುದೇನೋ..
ಮುಂಬೈ ಇಂಡಿಯನ್ಸ್ ಅಂತಿಮ ತಂಡದಲ್ಲಿ ಇರುವ ಆಟಗಾರರು
- ರೋಹಿತ್ ಶರ್ಮ
- ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್)
- ತಿಲಕ್ ವರ್ಮ
- ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್)
- ವಿಲ್ ಜಾಕ್ಸ್
- ಹಾರ್ದಿಕ್ ಪಾಂಡ್ಯ
- ನಮನ ಧೀರ್
- ಮಿಚೆಲ್ ಸ್ಯಾಂಟ್ನರ್
- ದೀಪಕ್ ಚಹರ್
- ಅರ್ಜುನ್ ತೆಂಡುಲ್ಕರ್
- ಕರಣ್ ಶರ್ಮ