ದುಬೈಗೆ ಹಾರಲು ರೆಡಿಯಾದ ಧೋನಿ ಬೆಳೆದ ತರಕಾರಿಗಳು..!
ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂ. ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕೃಷಿಯತ್ತ ಮುಖಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಕೆಲ ದಿನಗಳ ಹಿಂದಷ್ಟೇ ಕಡಕ್‌ನಾಥ್ ಕೋಳಿ ಸಾಕಾಣಿಕೆಯನ್ನು ಧೋನಿ ಆರಂಭಿಸಿದ್ದರು.ಆದರೆ ಇದೀಗ ಹೊಸ ವಿಷಯ ಏನಪ್ಪಾ ಅಂದ್ರೆ, ಧೋನಿ ತಮ್ಮ ತೋಟದಲ್ಲಿ ಬೆಳೆದ ಬೆಳೆಗಳನ್ನು ದುಬೈಗೆ ಕಳಿಸಲು ಮುಂದಾಗಿದ್ದಾರೆ. ಈ ಕುರಿತಂತೆ ಮಾತುಕತೆ ನಡೆಯುತ್ತಿದೆ. ಅಷ್ಟಕ್ಕೂ ಧೋನಿ ತಮ್ಮ ಫಾರ್ಮ್‌ನಲ್ಲಿ ಏನೆಲ್ಲಾ ಬೆಳೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಮಹೇಂದ್ರ ಸಿಂಗ್ ಧೋನಿ ಕೃಷಿ ಮೇಲಿನ ಪ್ರೀತಿಯ ಬಗ್ಗೆ ಯಾರಿಗೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇದೀಗ ಎಂ ಎಸ್ ಧೋನಿ ಹೌಸ್‌ನಲ್ಲಿ ಬೆಳೆದ ತರಕಾರಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಿದ್ದತೆಗಳು ನಡೆಯುತ್ತಿವೆ.

ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ವರದಿಯಾಗಿದೆ.

ಜಾರ್ಖಂಡ್‌ನ ಕೃಷಿ ಇಲಾಖೆ ಧೋನಿ ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ದುಬೈಗೆ ಕಳಿಸಿಕೊಡುವ ವಿಚಾರದಲ್ಲಿ ಏಜೆನ್ಸಿಗಳ ಜತೆ ಮಾತುಕತೆ ನಡೆಸುತ್ತಿದೆ.

ಎಂ ಎಸ್ ಧೋನಿ ಫಾರ್ಮ್ ಹೌಸ್ ಸುಮಾರು 43 ಎಕರೆಯಷ್ಟಿದ್ದು, ಈ ಪೈಕಿ 10 ಎಕರೆ ಜಾಗದಲ್ಲಿ ಧೋನಿ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

ಧೋನಿ 10 ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ, ಎಲೆಕೋಸ್, ಕೋಸುಗೆಡ್ಡೆ, ಬಟಾಣಿ, ಪಪ್ಪಾಯ, ಟಮ್ಯಾಟೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ವಿದೇಶಕ್ಕೆ ಧೋನಿ ಬೆಳೆದ ತರಕಾರಿಗಳು ರಫ್ತಾಗುವುದರ ಜತೆಗೆ ಜಾರ್ಖಂಡ್‌ನ ರೈತರಿಗೂ ವಿದೇಶದಲ್ಲಿ ಮಾರುಕಟ್ಟೆ ಲಭ್ಯವಾದಂತೆ ಆಗಲಿದೆ.

ಈ ಹಿಂದೆ ಧೋನಿ ಕಡಕ್‌ನಾಥ್ ಕೋಳಿ ಸಾಕಾಣಿಕೆ ಸುದ್ದಿಯೂ ಸಾಕಷ್ಟು ವೈರಲ್ ಆಗಿದ್ದನ್ನು ಸ್ಮರಿಸಬಹುದಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.