- Home
- Sports
- Cricket
- ಮೆಲ್ಬರ್ನ್ ಸ್ಟೇಡಿಯಂ ಸುತ್ತ ಬೆತ್ತಲೆಯಾಗಿ ನಡೀತೀನಿ ಎಂದ ಮ್ಯಾಥ್ಯೂ ಹೇಡನ್! ಮಗಳ ಕಮೆಂಟ್ ಸಿಕ್ಕಾಪಟ್ಟೆ ವೈರಲ್
ಮೆಲ್ಬರ್ನ್ ಸ್ಟೇಡಿಯಂ ಸುತ್ತ ಬೆತ್ತಲೆಯಾಗಿ ನಡೀತೀನಿ ಎಂದ ಮ್ಯಾಥ್ಯೂ ಹೇಡನ್! ಮಗಳ ಕಮೆಂಟ್ ಸಿಕ್ಕಾಪಟ್ಟೆ ವೈರಲ್
ಸಿಡ್ನಿ: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರಾಡಿದ ಬೆತ್ತಲೆಯಾಗಿ ಓಡಾಡ್ತೇನೆ ಎನ್ನುವ ಒಂದು ಮಾತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ನಡುವೆ ಹೇಡನ್ ಮಗಳ ಕಮೆಂಟ್ ಇದೀಗ ಮತ್ತಷ್ಟು ಸದ್ದು ಮಾಡ್ತಿದೆ.

ರೂಟ್ ಪರ ಬ್ಯಾಟ್ ಬೀಸಿದ ಹೇಡನ್
ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನ ಹಿರಿಯ ಆಟಗಾರ ಜೋ ರೂಟ್ ಶತಕ ಬಾರಿಸಲಿದ್ದಾರೆ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೇಡನ್ ಓಪನ್ ಚಾಲೆಂಜ್
ಒಂದು ವೇಳೆ ಈ ಬಾರಿಯ ಆ್ಯಷಸ್ ಟೆಸ್ಟ್ ಸರಣಿಯಲ್ಲಿ, ಇಂಗ್ಲೆಂಡ್ ದಿಗ್ಗಜ ಬ್ಯಾಟರ್ ಶತಕ ಬಾರಿಸದಿದ್ದರೇ ಬೆತ್ತಲೆಯಾಗಿ(ನಗ್ನವಾಗಿ) ನಡೆಯುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.
ಆಸ್ಟ್ರೇಲಿಯಾದಲ್ಲಿ ರೂಟ್ ಫೇಲ್
ಜಗತ್ತಿನ ನಾನಾ ಮೂಲೆಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ಜೋ ರೂಟ್, ಆಸ್ಟ್ರೇಲಿಯಾದಲ್ಲಿ ಮಾತ್ರ ಇದುವರೆಗೂ ಮೂರಂಕಿ ಮೊತ್ತ ದಾಖಲಿಸಲು ಸಾಧ್ಯವಾಗಿಲ್ಲ.
ನಗ್ನವಾಗಿ ನಡೆಯೋ ಚಾಲೆಂಜ್
ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಭಾಗವಹಿಸಿ ಮಾತನಾಡಿದ ಹೇಡನ್, ಈ ಬಾರಿಯ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಶತಕ ಸಿಡಿಸಲು ವಿಫವಾದರೆ ನಾನು ಮೆಲ್ಬರ್ನ್ ಕ್ರಿಕೆಟ್ ಮೈದಾನದ ಸುತ್ತ ನಗ್ನವಾಗಿ ನಡೆಯುತ್ತೇನೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ವೈರಲ್ ಆಗಿದೆ.
ತಂದೆ ಕಾಲೆಳೆದ ಮಗಳು
ಇನ್ನು ತಂದೆ ಹೇಡನ್ ಅವರನ್ನು ಕಾಲೆಳೆದಿರುವ ಮಗಳು ಗ್ರೇಸ್ ಹೇಡನ್, ಜೋ ರೂಟ್ ದಯವಿಟ್ಟು ಈ ಸಲ ಶತಕ ಸಿಡಿಸಿ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ಕೂಡಾ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಿಂಚುವ ಗ್ರೇಸ್
ಗ್ರೇಸ್ ಹೇಡನ್ ಕ್ರಿಕೆಟ್ ಕಾಮೆಂಟೇಟರ್/ಪ್ರಸೆಂಟರ್ ಆಗಿ ಗಮನ ಸೆಳೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ.
ಆಷಸ್ ಟೆಸ್ಟ್ ಸರಣಿ
ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನಡುವಿನ ಐತಿಹಾಸಿಕ ಆ್ಯಷಸ್ ಟೆಸ್ಟ್ ಸರಣಿಯು ಮುಂಬರುವ ನವೆಂಬರ್ 21ರಿಂದ ಆರಂಭವಾಗಲಿದ್ದು, ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.
ರೂಟ್ ಫಾರ್ಮ್
2021ರಿಂದೀಚೆಗೆ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಜೋ ರೂಟ್ 61 ಪಂದ್ಯಗಳನ್ನಾಡಿ 56.63ರ ಸರಾಸರಿಯಲ್ಲಿ 22 ಶತಕ ಹಾಗೂ 17 ಅರ್ಧಶತಕ ಸಹಿತ 5720 ರನ್ ಸಿಡಿಸಿದ್ದಾರೆ.
ಭಾರತ ಎದುರು ಭರ್ಜರಿ ಬ್ಯಾಟಿಂಗ್
ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ರೂಟ್ 5 ಪಂದ್ಯಗಳಿಂದ 3 ಶತಕ ಒಂದು ಅರ್ಧಶತಕ ಸಹಿತ 537 ರನ್ ಬಾರಿಸಿದ್ದರು.
ಆಸೀಸ್‌ನಲ್ಲಿ ಶತಕದ ಬರ
ಇನ್ನು ಆಸ್ಟ್ರೇಲಿಯಾದಲ್ಲಿ ಇದುವರೆಗೂ 14 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 35.68ರ ಬ್ಯಾಟಿಂಗ್ ಸರಾಸರಿಯಲ್ಲಿ 9 ಅರ್ಧಶತಕ ಸಹಿತ 892 ರನ್ ಬಾರಿಸಿದ್ದಾರೆ. 89 ರನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಜೋ ರೂಟ್ ಬಾರಿಸಿದ ಗರಿಷ್ಠ ವೈಯುಕ್ತಕ ಸ್ಕೋರ್ ಎನಿಸಿದೆ.