ಅಳಿಯ ಕೆಎಲ್ ರಾಹುಲ್‌ಗೆ 50 ಕೋಟಿಯ ಬಂಗಲೆ ಗಿಫ್ಟ್ ನೀಡಿದ ಸುನೀಲ್ ಶೆಟ್ಟಿ?
ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಜನವರಿ 23 ರಂದು ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ವಿವಾಹವಾದರು. ಈ ಸಂದರ್ಭದಲ್ಲಿ ಹಲವು ಬಾಲಿವುಡ್ ಗಣ್ಯರು ಹೊಸ ಜೋಡಿಯನ್ನು ಹರಸಿದ್ದಾರೆ. ಇನ್ನೂ ಕೆಲವರು ದುಬಾರಿ ಉಡುಗೊರೆ ನೀಡಿ ದಂಪತಿಗೆ ಆಶೀರ್ವಾದ ಮಾಡಿದ್ದಾರೆ.
ವರದಿಗಳನ್ನು ನಂಬುವುದಾದರೆ, ಆಥಿಯಾ ಶೆಟ್ಟಿ ಅವರ ತಂದೆ ಸುನೀಲ್ ಶೆಟ್ಟಿ ತನ್ನ ಮಗಳು ಹಾಗೂ ಅಳಿಯನಿಗಾಗಿ ಅತ್ಯಂತ ದುಬಾರಿಯಾದ ಉಡುಗೊರೆಯನ್ನು ನೀಡಿದ್ದಾರೆ. ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಇಬ್ಬರಿಗೂ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಈ ಬಂಗಲೆ ಮುಂಬೈನಲ್ಲಿಯೇ ಇದೆ ಎಂದು ಹೇಳಲಾಗಿದೆ.
ಸುನೀಲ್ ಶೆಟ್ಟಿ ಅವರ ವಿಶೇಷ ಸ್ನೇಹಿತ ಸಲ್ಮಾನ್ ಖಾನ್ ಅವರು ಅಥಿಯಾಗೆ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ ಸುಮಾರು 1.64 ಕೋಟಿ ಎಂದು ಹೇಳಲಾಗುತ್ತಿದೆ.
ಸುನೀಲ್ ಶೆಟ್ಟಿಯ ಮತ್ತೊಬ್ಬ ಸ್ನೇಹಿತ ಜಾಕಿ ಶ್ರಾಫ್ ಕೂಡ ಅಥಿಯಾಗೆ ಬೆಲೆಕಟ್ಟಲಾಗದ ಉಡುಗೊರೆ ನೀಡಿದ್ದಾರೆ. ಅವರಿಗೆ ಚೋಪಾರ್ಡ್ ವಾಚ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ವಿಸ್ ಐಷಾರಾಮಿ ವಾಚ್ ಗಳ ಬೆಲೆ ಸುಮಾರು 30 ಲಕ್ಷ ಎಂದು ಹೇಳಲಾಗಿದೆ.
‘ಮುಬಾರಕನ್’ ಚಿತ್ರದಲ್ಲಿ ಅಥಿಯಾ ಜೊತೆ ಕೆಲಸ ಮಾಡಿದ್ದ ನಟ ಅರ್ಜುನ್ ಕಪೂರ್, ಕೆಎಲ್ ರಾಹುಲ್‌ಗೂ ಉತ್ತಮ ಸ್ನೇಹಿತ. ವರದಿಗಳನ್ನು ನಂಬುವುದಾದರೆ, ಅವರು ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಬ್ರಾಸ್ಲೆಟ್‌ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್ನು ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಕೆಎಲ್ ರಾಹುಲ್ ಅವರ ಆಪ್ತ ಸ್ನೇಹಿತ ವಿರಾಟ್ ಕೊಹ್ಲಿ ಅಂದಾಜು 2.17 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಕಾರ್‌ಅನ್ನು ಹೊಸ ಜೋಡಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇದರ ನಡುವೆ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ವೇಳೆ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ 80 ಲಕ್ಷ ರೂಪಾಯಿ ಮೌಲ್ಯ ಕವಾಸಾಕಿ ನಿಂಜಾ ಬೈಕ್‌ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ಅಥಿಯಾ ಮತ್ತು ಕೆಎಲ್ ರಾಹುಲ್ ಪ್ರಸ್ತುತ ತಮ್ಮ ಬಾಕಿ ಇರುವ ಕೆಲಸಗಳಲ್ಲಿ ನಿರತರಾಗಿದ್ದಾರೆ. ಐಪಿಎಲ್ ನಂತರ ಮುಂಬೈನಲ್ಲಿ ಮದುವೆಯ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ ಎಂಬ ಸುದ್ದಿ ಇದೆ, ಸುಮಾರು 3,000 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಅಥಿಯಾ ಮತ್ತು ರಾಹುಲ್ 2019 ರಿಂದ ಡೇಟಿಂಗ್ ಪ್ರಾರಂಭಿಸಿದ್ದರು. ಜನವರಿ 23 ರಂದು ಸುನಿಲ್ ಶೆಟ್ಟಿ ಅವರ ಲೋಖಂಡವಾಲಾ ಫಾರ್ಮ್‌ಹೌಸ್‌ನಲ್ಲಿ ವಿವಾಹವಾದರು, ಇದರಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಎರಡೂ ಕಡೆಯ ಆಯ್ದ ಸ್ನೇಹಿತರು ಭಾಗವಹಿಸಿದ್ದರು.