- Home
- Sports
- Cricket
- 2024ರ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ: ಬುಮ್ರಾಗೆ ಅಡ್ಡಗಾಲು ಹಾಕ್ತಾರಾ ಈ ಆಸೀಸ್ ಆಟಗಾರ?
2024ರ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ: ಬುಮ್ರಾಗೆ ಅಡ್ಡಗಾಲು ಹಾಕ್ತಾರಾ ಈ ಆಸೀಸ್ ಆಟಗಾರ?
2024ರ ಐಸಿಸಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಜಸ್ಪ್ರೀತ್ ಬುಮ್ರಾ ನಾಮನಿರ್ದೇಶನಗೊಂಡಿದ್ದಾರೆ. ಈ ಪ್ರಶಸ್ತಿ ಪಡೆಯಲು ಆಸ್ಟ್ರೇಲಿಯಾದ ಈ ಸ್ಟಾರ್ ಬ್ಯಾಟರ್ ಅಡ್ಡಗಾಲು ಹಾಕುವ ಸಾಧ್ಯತೆಯಿದೆ.

2024ರ ಐಸಿಸಿ ವರ್ಷದ ಶ್ರೇಷ್ಠ ಆಟಗಾರರು ಯಾರು?
ವಿಶ್ವದ ನಂ. 1 ಬೌಲರ್ ಜಸ್ಪ್ರೀತ್ ಬುಮ್ರಾ 2024ರ ಐಸಿಸಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರ ಜೊತೆಗೆ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಇಂಗ್ಲೆಂಡ್‌ನ ಜೋ ರೂಟ್ ಕೂಡ ನಾಮನಿರ್ದೇಶನಗೊಂಡಿದ್ದಾರೆ. 2024 ಬುಮ್ರಾ ಅವರಿಗೆ ಅದ್ಭುತ ವರ್ಷವಾಗಿದೆ.
2024ರಲ್ಲಿ ಬುಮ್ರಾ 80 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 10 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಹ್ಯಾರಿ ಬ್ರೂಕ್ 1575 ರನ್ ಗಳಿಸಿದ್ದಾರೆ ಮತ್ತು 27 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಟ್ರಾವಿಸ್ ಹೆಡ್ 1398 ರನ್ ಗಳಿಸಿದ್ದಾರೆ, 9 ವಿಕೆಟ್ ಪಡೆದಿದ್ದಾರೆ ಮತ್ತು 11 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಜೋ ರೂಟ್ 1556 ರನ್ ಗಳಿಸಿದ್ದಾರೆ, 24 ಕ್ಯಾಚ್‌ಗಳನ್ನು ಮತ್ತು 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಟ್ರ್ಯಾವಿಸ್ ಹೆಡ್, ಟೀಂ ಇಂಡಿಯಾ ವೇಗಿಯ ಪ್ರಶಸ್ತಿ ಆಸೆಗೆ ಅಡ್ಡಗಾಲು ಹಾಕುವ ಸಾಧ್ಯತೆಯಿದೆ.
Jasprit Bumrah
ಇದಲ್ಲದೆ, 2024ರ ಶ್ರೇಷ್ಠ ಟೆಸ್ಟ್ ಆಟಗಾರ ಪ್ರಶಸ್ತಿಗೂ ಬುಮ್ರಾ ನಾಮನಿರ್ದೇಶನಗೊಂಡಿದ್ದಾರೆ. ಬುಮ್ರಾ ಜೊತೆಗೆ ಹ್ಯಾರಿ ಬ್ರೂಕ್, ಜೋ ರೂಟ್ ಮತ್ತು ಶ್ರೀಲಂಕಾದ ಕುಸಲ್ ಮೆಂಡಿಸ್ ಕೂಡ ನಾಮನಿರ್ದೇಶನಗೊಂಡಿದ್ದಾರೆ.2024ರಲ್ಲಿ ಬುಮ್ರಾ ಟೆಸ್ಟ್ ಪಂದ್ಯಗಳಲ್ಲಿ 65 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅರ್ಷದೀಪ್ ಸಿಂಗ್
ಬುಮ್ರಾ ಜೊತೆಗೆ ಭಾರತದ ಅರ್ಷದೀಪ್ ಸಿಂಗ್ 2024ರ ಶ್ರೇಷ್ಠ ಟಿ20 ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಟ್ರಾವಿಸ್ ಹೆಡ್, ಪಾಕಿಸ್ತಾನದ ಬಾಬರ್ ಆಜಮ್ ಮತ್ತು ಜಿಂಬಾಬ್ವೆಯ ಸಿಕಂದರ್ ರಾಜಾ ಕೂಡ ನಾಮನಿರ್ದೇಶನಗೊಂಡಿದ್ದಾರೆ. ಇದಲ್ಲದೆ, 2024ರ ಐಸಿಸಿ ಏಕದಿನ ಶ್ರೇಷ್ಠ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾರತದ ಸ್ಮೃತಿ ಮಂದಣ ನಾಮನಿರ್ದೇಶನಗೊಂಡಿದ್ದಾರೆ. 2024ರ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾರತದ ಶ್ರೇಯಾಂಕಾ ಪಾಟೀಲ್ ನಾಮನಿರ್ದೇಶನಗೊಂಡಿದ್ದಾರೆ.
ಫಲಿತಾಂಶ ಯಾವಾಗ?
ಪುರುಷರು ಮತ್ತು ಮಹಿಳೆಯರ ಕ್ರಿಕೆಟ್ ಸೇರಿ ಒಟ್ಟು 9 ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲೂ ತಲಾ 4 ಆಟಗಾರರು ಮತ್ತು ಆಟಗಾರ್ತಿಯರನ್ನು ನಾಮನಿರ್ದೇಶನ ಮಾಡಲಾಗಿದೆ. ಅಭಿಮಾನಿಗಳು ಐಸಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮಿಷ್ಟದ ಆಟಗಾರರು ಮತ್ತು ಆಟಗಾರ್ತಿಯರಿಗೆ ಮತ ಚಲಾಯಿಸಬಹುದು. ಈ ಮತದಾನದ ಆಧಾರದ ಮೇಲೆ 11 ದಿನಗಳ ನಂತರ ಐಸಿಸಿ ಶ್ರೇಷ್ಠ ಆಟಗಾರರನ್ನು ಘೋಷಿಸಿ ಪ್ರಶಸ್ತಿಗಳನ್ನು ನೀಡಲಿದೆ.
ಐಸಿಸಿ 2024ರ 9 ವಿಭಾಗಗಳ ನಾಮನಿರ್ದೇಶನ ಪಟ್ಟಿಯ ಸಂಪೂರ್ಣ ವಿವರ:
2024ರ ಶ್ರೇಷ್ಠ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರು: ಬುಮ್ರಾ, ಹ್ಯಾರಿ ಬ್ರೂಕ್, ಟ್ರಾವಿಸ್ ಹೆಡ್, ಜೋ ರೂಟ್.
ಶ್ರೇಷ್ಠ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶಿತರು: ಚಮರಿ ಅಟ್ಟಪಟ್ಟು (ಶ್ರೀಲಂಕಾ), ಅಮೆಲಿಯಾ ಕೆರ್ (ನ್ಯೂಜಿಲೆಂಡ್), ಅನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ಲಾರಾ ವೋಲ್ವಾರ್ಡ್ (ದಕ್ಷಿಣ ಆಫ್ರಿಕಾ)
ಶ್ರೇಷ್ಠ ಟೆಸ್ಟ್ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರು: ಬುಮ್ರಾ, ಹ್ಯಾರಿ ಬ್ರೂಕ್, ಕುಸಲ್ ಮೆಂಡಿಸ್, ಜೋ ರೂಟ್.
ಸ್ಮೃತಿ ಮಂದಣ
ಶ್ರೇಷ್ಠ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರು: ವನಿಂದು ಹಸರಂಗ (ಶ್ರೀಲಂಕಾ), ಕುಸಲ್ ಮೆಂಡಿಸ್ (ಶ್ರೀಲಂಕಾ), ಅಸ್ಮತುಲ್ಲಾ ಓಮರ್ಜೈ (ಅಫ್ಘಾನಿಸ್ತಾನ), ಶೆರ್ಫೇನ್ ರುದರ್ಫೋರ್ಡ್ (ವೆಸ್ಟ್ ಇಂಡೀಸ್)
ಶ್ರೇಷ್ಠ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶಿತರು: ಚಮರಿ ಅಟ್ಟಪಟ್ಟು (ಶ್ರೀಲಂಕಾ), ಸ್ಮೃತಿ ಮಂದಣ (ಭಾರತ), ಅಮೆಲಿಯಾ ಕೆರ್ (ನ್ಯೂಜಿಲೆಂಡ್), ಲಾರಾ ವೋಲ್ವಾರ್ಡ್ (ದಕ್ಷಿಣ ಆಫ್ರಿಕಾ)
ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರು: ಗಸ್ ಅಟ್ಕಿನ್ಸನ್ (ಇಂಗ್ಲೆಂಡ್), ಸೈಮ್ ಅಯೂಬ್ (ಪಾಕಿಸ್ತಾನ), ಶಮರ್ ಜೋಸೆಫ್ (ವೆಸ್ಟ್ ಇಂಡೀಸ್), ಕುಸಲ್ ಮೆಂಡಿಸ್ (ಶ್ರೀಲಂಕಾ)
ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶಿತರು: ಅನ್ನಾರಿ ಡೆರ್ಕ್ಸೆನ್ (ದಕ್ಷಿಣ ಆಫ್ರಿಕಾ), ಸಾಸ್ಕಿಯಾ ಹಾರ್ಲಿ (ಸ್ಕಾಟ್ಲೆಂಡ್), ಶ್ರೇಯಾಂಕಾ ಪಾಟೀಲ್ (ಭಾರತ), ಫ್ರೀಯಾ ಸಾರ್ಜೆಂಟ್ (ಐರ್ಲೆಂಡ್)