- Home
- Sports
- Cricket
- ಈ ಬಿಗ್ ಸ್ಟಾರ್ ಕೊಟ್ಟು ಸಂಜು ಸ್ಯಾಮ್ಸನ್ ಕರೆತರಲು ರೆಡಿಯಾದ ಚೆನ್ನೈ ಸೂಪರ್ ಕಿಂಗ್ಸ್! ಘೋಷಣೆಯೊಂದೇ ಬಾಕಿ?
ಈ ಬಿಗ್ ಸ್ಟಾರ್ ಕೊಟ್ಟು ಸಂಜು ಸ್ಯಾಮ್ಸನ್ ಕರೆತರಲು ರೆಡಿಯಾದ ಚೆನ್ನೈ ಸೂಪರ್ ಕಿಂಗ್ಸ್! ಘೋಷಣೆಯೊಂದೇ ಬಾಕಿ?
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಟ್ರೇಡ್ ವಿಂಡೋ ಓಪನ್ ಆಗಿದ್ದು, ಸಂಜು ಸ್ಯಾಮ್ಸನ್ ಅವರನ್ನು ಕರೆ ತರಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಶತಾಯಗತಾಯ ಪ್ರಯತ್ನದಲ್ಲಿದೆ. ಇದರ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.

ಗರಿಗೆದರಿದ ಐಪಿಎಲ್ ರೀಟೈನ್ ಕುತೂಹಲ
2026ರ ಐಪಿಎಲ್‌ಗೂ ಮುನ್ನ ಯಾವ ಫ್ರಾಂಚೈಸಿ ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ. ಯಾವ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಲಿದೆ ಎನ್ನುವ ಕುತೂಹಲ ಜೋರಾಗಿದೆ.
ಮತ್ತೆ ಚರ್ಚೆಗೆ ಬಂದ ಸಂಜು ಸ್ಯಾಮ್ಸನ್
ಇದೆಲ್ಲದರ ನಡುವೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಟ್ಟುಕೊಡಲು ರಾಯಲ್ಸ್ ಫ್ರಾಂಚೈಸಿ ಮುಂದಾಗಿದೆ ಎನ್ನುವ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಆಟಗಾರರ ರೀಟೈನ್‌ಗೆ ನವೆಂಬರ್ 15 ಡೆಡ್‌ಲೈನ್
ಐಪಿಎಲ್ ಆಟಗಾರರ ರೀಟೈನ್ಷನ್‌ಗೆ ನವೆಂಬರ್ 15ರಂದು ಡೆಡ್‌ಲೈನ್ ನೀಡಲಾಗಿದೆ. ಕಳೆದ ಜುಲೈನಿಂದಲೂ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡಿಂಗ್ ವಿಂಡೋ ಮೂಲಕ ಕರೆ ತರಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತೆರೆ ಮರೆಯ ಕಸರತ್ತು ನಡೆಸುತ್ತಿವೆ ಎಂದು ವರದಿಯಾಗಿದೆ.
ಸಂಜು ಸಿಎಸ್‌ಕೆ ಸೇರೋದು ಕನ್ಫರ್ಮ್?
ಇದೀಗ ಕೆಲವು ಕ್ರಿಕೆಟ್ ವೆಬ್‌ಸೈಟ್ ವರದಿ ಪ್ರಕಾರ ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್, ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಳ್ಳುವುದು ಬಹುತೇಕ ಖಚಿತ ಎನಿಸಿಕೊಂಡಿದೆ.
ಸಂಜುಗಾಗಿ ಸ್ಟಾರ್ ಆಟಗಾರನ ಬಿಟ್ಟುಕೊಡಲು ಚೆನ್ನೈ ರೆಡಿ
ಇದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಾರಾ ಆಟಗಾರನನ್ನು ರಾಜಸ್ಥಾನ ರಾಯಲ್ಸ್‌ಗೆ ಬಿಟ್ಟುಕೊಡಲು ಸಿಎಸ್‌ಕೆ ಫ್ರಾಂಚೈಸಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.
ರಾಜಸ್ಥಾನ ರಾಯಲ್ಸ್ ಪಾಲಾಗ್ತಾರಾ ಜಡೇಜಾ?
ಕೆಲವು ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ರಾಯಲ್ಸ್‌ಗೆ ನೀಡಿ ಸಂಜು ಕರೆ ತರಲು ಸಿಎಸ್‌ಕೆ ಫ್ರಾಂಚೈಸಿ ರಣತಂತ್ರ ಹೆಣೆದಿದೆ ಎನ್ನಲಾಗುತ್ತಿದೆ.
2026ರ ಐಪಿಎಲ್ ಆಡ್ತಾರೆ ಧೋನಿ
ಇನ್ನು 2026ರ ಐಪಿಎಲ್ ಟೂರ್ನಿಯಲ್ಲೂ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ಸಿಎಸ್‌ಕೆ ಫ್ರಾಂಚೈಸಿ ಖಚಿತಪಡಿಸಿದೆ.