ಐಪಿಎಲ್ ಮಿನಿ ಹರಾಜು: 4 ಆಲ್ರೌಂಡರ್ ಟಾರ್ಗೆಟ್, ಚೆನ್ನೈ ಸೂಪರ್ ಕಿಂಗ್ಸ್ ಮಾಸ್ಟರ್ ಪ್ಲಾನ್!
ಬೆಂಗಳೂರು: ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಒಂದು ಪಕ್ಕಾ ಪ್ಲಾನ್‌ನೊಂದಿಗೆ ಮುನ್ನುಗ್ಗುತ್ತಿದೆ. ಮುಂಬರುವ ಮಿನಿ ಹರಾಜಿನಲ್ಲಿ ಪ್ರಮುಖ ನಾಲ್ಕು ಆಲ್ರೌಂಡರ್ ಮೇಲೆ ಧೋನಿ ಪಡೆ ಕಣ್ಣಿಟ್ಟಿದೆ. ಯಾರವರು? ನೋಡೋಣ ಬನ್ನಿ.

ಸಿಎಸ್‌ಕೆಯಲ್ಲಿ ಭಾರೀ ಬದಲಾವಣೆಗಳು
ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2026ಕ್ಕೆ ಪಕ್ಕಾ ಪ್ಲಾನ್‌ನೊಂದಿಗೆ ಸಿದ್ಧವಾಗಿದೆ. ಕಳೆದ ಮೂರು ಸೀಸನ್‌ಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾದ ತಂಡ, ಈ ಬಾರಿ ಹರಾಜಿನಲ್ಲಿ ಪೂರ್ಣ ಶಕ್ತಿಯಿಂದ ಭಾಗವಹಿಸಲಿದೆ.
ಸಿಎಸ್‌ಕೆ ಪರ್ಸ್‌ನಲ್ಲಿ ಎಷ್ಟು ಹಣವಿದೆ?
ಸಿಎಸ್‌ಕೆ ಈ ಸೀಸನ್‌ಗೆ 16 ಆಟಗಾರರನ್ನು ಉಳಿಸಿಕೊಂಡಿದೆ. 9 ಆಟಗಾರರನ್ನು ಬಿಡುಗಡೆ ಮಾಡಿದ ನಂತರ, ತಂಡದ ಪರ್ಸ್‌ನಲ್ಲಿ 43.4 ಕೋಟಿ ಉಳಿದಿದೆ. ಸಿಎಸ್‌ಕೆ ಬಳಿ ಎರಡನೇ ಅತಿದೊಡ್ಡ ಪರ್ಸ್ ಇರುವುದರಿಂದ, ದೊಡ್ಡ ಆಟಗಾರರನ್ನು ಖರೀದಿಸಬಹುದು.
ಸ್ಯಾಮ್ ಕರನ್‌ಗೆ ಬದಲಿಯಾಗಿ ನಾಲ್ವರು ಸ್ಟಾರ್ ಆಲ್‌ರೌಂಡರ್‌ಗಳು
ಸ್ಯಾಮ್ ಕರನ್ ಬದಲಿಗೆ ಉತ್ತಮ ವಿದೇಶಿ ಆಲ್‌ರೌಂಡರ್ ಸಿಎಸ್‌ಕೆಗೆ ಬೇಕಾಗಿದ್ದಾರೆ. ತಂಡವು ಆಂಡ್ರೆ ರಸೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಕ್ಯಾಮರೋನ್ ಗ್ರೀನ್‌ರಂತಹ ಸ್ಟಾರ್ ಆಟಗಾರರನ್ನು ಟಾರ್ಗೆಟ್ ಮಾಡಿದೆ.
37 ವರ್ಷದ ರಸೆಲ್ ಮೇಲೆ ಸಿಎಸ್‌ಕೆ ಭಾರಿ ಬಿಡ್‌ಗೆ ಸಿದ್ಧ
ಕೆಕೆಆರ್ 11 ವರ್ಷಗಳ ನಂತರ ಆಂಡ್ರೆ ರಸೆಲ್ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್‌ನ ಅಪಾಯಕಾರಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಇವರಿಗಾಗಿ ಸಿಎಸ್‌ಕೆ ದೊಡ್ಡ ಮೊತ್ತದ ಬಿಡ್ ಮಾಡುವ ಸಾಧ್ಯತೆಯಿದೆ.
ಕುತೂಹಲ ಹೆಚ್ಚಿಸುತ್ತಿರುವ ಐಪಿಎಲ್ 2026 ಹರಾಜು
ಈ ಬಾರಿಯ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ಲಭ್ಯವಿರುವುದರಿಂದ ಐಪಿಎಲ್ 2026 ಮಿನಿ ಹರಾಜು ಹೆಚ್ಚು ಕುತೂಹಲ ಕೆರಳಿಸಿದೆ. ಸಿಎಸ್‌ಕೆ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ.
ಡಿಸೆಂಬರ್ 16ರಂದು ಐಪಿಎಲ್ ಮಿನಿ ಹರಾಜು
19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಮುಂಬರುವ ಡಿಸೆಂಬರ್ 16ರಂದು ನಡೆಯಲಿದ್ದು, ಯಾವ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.