- Home
- Sports
- Cricket
- ನೀತಾ ಅಂಬಾನಿ ಮಾಡಿದ ಒಂದೇ ತಪ್ಪಿಗೆ ಮುಂಬೈ ಕನಸಿನಲ್ಲೂ ಕಾಡಲು ರೆಡಿಯಾದ ಆರ್‌ಸಿಬಿ ಬಿಗ್‌ಹಿಟ್ಟರ್!
ನೀತಾ ಅಂಬಾನಿ ಮಾಡಿದ ಒಂದೇ ತಪ್ಪಿಗೆ ಮುಂಬೈ ಕನಸಿನಲ್ಲೂ ಕಾಡಲು ರೆಡಿಯಾದ ಆರ್‌ಸಿಬಿ ಬಿಗ್‌ಹಿಟ್ಟರ್!
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಆರ್‌ಸಿಬಿ ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದ್ದರೇ, ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹೊಸ್ತಿಲಲ್ಲಿದೆ. ಆದರೆ ಮುಂಬೈ ಮಾಡಿದ ಒಂದೇ ಒಂದು ಯಡವಟ್ಟು ಇದೀಗ ತಂಡವನ್ನು ಬೆಂಬಿಡದೇ ಕಾಡುತ್ತಿದೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟ ತಲುಪಿದೆ. ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿವೆ.
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯ ಬಾಕಿ ಇರುವಂತೆಯೇ ತನ್ನ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆರ್‌ಸಿಬಿ ಈ ಬಾರಿ ಅದ್ಭುತ ಪ್ರದರ್ಶನ ತೋರುತ್ತಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ.
ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ಉತ್ತಮ ಆರಂಭ ಪಡೆಯಲು ವಿಫಲವಾದರೂ, ಆ ಬಳಿಕ ಸತತ ಗೆಲುವುಗಳನ್ನು ದಾಖಲಿಸುವ ಮೂಲಕ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಮುಂಬೈ ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನಾಡುವುದು ಬಾಕಿ ಉಳಿದಿದ್ದು, ಎರಡು ಪಂದ್ಯ ಗೆದ್ದರೇ ಅನಾಯಾಸವಾಗಿ ಪ್ಲೇ ಆಫ್‌ಗೇರಲಿದೆ.
ಆದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹರಾಜಿನಲ್ಲಿ ಮಾಡಿದ ಮಹಾ ಯಡವಟ್ಟು ಇದೀಗ ನೀತಾ ಅಂಬಾನಿ ಪಡೆಯನ್ನು ಕನಸಿನಲ್ಲೂ ಕಾಡುವಂತೆ ಮಾಡಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಡಿದ ಮಿಸ್ಟೇಕ್ ಬೇರೆ ಯಾವುದೂ ಅಲ್ಲ, ಮ್ಯಾಚ್ ಫಿನಿಶರ್, ಬಿಗ್ ಹಿಟ್ಟರ್ ಟಿಮ್ ಡೇವಿಡ್ ಅವರನ್ನು ಕೈಬಿಟ್ಟಿದ್ದು.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2022ರ ಐಪಿಎಲ್ ಹರಾಜಿನಲ್ಲಿ ಟಿಮ್ ಡೇವಿಡ್ ಅವರನ್ನು 8.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಕಳೆದ ಮೂರು ಸೀಸನ್‌ನಲ್ಲಿ ಟಿಮ್ ಡೇವಿಡ್, ಮುಂಬೈ ಇಂಡಿಯನ್ಸ್ ಪರ 650ಕ್ಕೂ ಅಧಿಕ ರನ್ ಬಾರಿಸಿದ್ದರು.
Image Credit: ANI
ಇನ್ನು ಕಳೆದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಟಿಮ್ ಡೇವಿಡ್ ಅವರನ್ನು ಮುಂಬೈ ಫ್ರಾಂಚೈಸಿ ರಿಲೀಸ್ ಮಾಡಿತ್ತು. ಹರಾಜಿನಲ್ಲಿ ಟಿಮ್ ಡೇವಿಡ್ ಅವರನ್ನು ಕೇವಲ 3 ಕೋಟಿ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಮನಸ್ಸು ಮಾಡಲಿಲ್ಲ.
Tim David. (Photo- IPL)
ಟಿಮ್ ಡೇವಿಡ್ ಅವರನ್ನು ಕೈಬಿಟ್ಟು, ಇಂಗ್ಲೆಂಡ್ ಮೂಲದ ವಿಲ್ ಜ್ಯಾಕ್ಸ್ ಅವರನ್ನು 5.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಆರ್‌ಸಿಬಿ ತಂಡಕ್ಕೆ ಕೇವಲ 3 ಕೋಟಿಗೆ ಸೇರ್ಪಡೆಗೊಂಡ ಟಿಮ್ ಡೇವಿಡ್ ಅದ್ಭುತ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆಯುತ್ತಿದ್ದಾರೆ.
ಪ್ಲೇ ಆಫ್‌ನ ಎಲಿಮಿನೇಟರ್, ಕ್ವಾಲಿಫೈಯರ್ ಇಲ್ಲವೇ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದ್ದು, ಮುಂಬೈ ಪಾಲಿಗೆ ಟಿಮ್ ಡೇವಿಡ್ ಸಿಂಹಸ್ವಪ್ನವಾಗಿ ಕಾಡುವ ಸಾಧ್ಯತೆಯಿದೆ.