- Home
- Sports
- Cricket
- ಐಪಿಎಲ್ ಫೈನಲ್‌ಗೂ ಮುನ್ನ ಆರ್‌ಸಿಬಿಗೆ ಬಿಗ್ ಶಾಕ್! ಟ್ರೈನಿಂಗ್ ಸೆಷನ್‌ನಿಂದ ಈ ಸ್ಟಾರ್ ಅಟಗಾರ ನಾಪತ್ತೆ!
ಐಪಿಎಲ್ ಫೈನಲ್‌ಗೂ ಮುನ್ನ ಆರ್‌ಸಿಬಿಗೆ ಬಿಗ್ ಶಾಕ್! ಟ್ರೈನಿಂಗ್ ಸೆಷನ್‌ನಿಂದ ಈ ಸ್ಟಾರ್ ಅಟಗಾರ ನಾಪತ್ತೆ!
ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಆರ್‌ಸಿಬಿ ಪಾಳಯದಲ್ಲಿ ಢವ ಢವ ಶುರವಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

2025ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ.
ಆರ್‌ಸಿಬಿ ತಂಡವು ನಾಲ್ಕನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದರೇ, ಪಂಜಾಬ್ ಕಿಂಗ್ಸ್ ತಂಡವು ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಎರಡು ತಂಡಗಳು ಮೊದಲ ಸಲ ಐಪಿಎಲ್ ಟ್ರೋಫಿ ಜಯಿಸಲು ತುದಿಗಾಲಿನಲ್ಲಿ ನಿಂತಿವೆ.
ಆರ್‌ಸಿಬಿ ತಂಡವು ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರೇ, ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್, ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.
ಹೀಗಿರುವಾಗಲೇ ಆರ್‌ಸಿಬಿ ಪಾಳಯದಲ್ಲಿ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ಫೈನಲ್ ಪಂದ್ಯ ಆಡುವುದು ಅನುಮಾನ ಎನ್ನುವಂತಹ ಮಾತು ಕೇಳಿ ಬಂದಿದೆ.
ಹೌದು, ಆರ್‌ಸಿಬಿ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ಇಂದಿನ ಟ್ರೈನಿಂಗ್ ಸೆಷನ್ ನಿಂದ ನಾಪತ್ತೆ(ಗೈರು)ಯಾಗಿದ್ದಾರೆ. ಫಿಲ್ ಸಾಲ್ಟ್ ಫೈನಲ್ ಪಂದ್ಯವನ್ನು ಆಡುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಆರ್‌ಸಿಬಿ ಬಿಟ್ಟುಕೊಟ್ಟಿಲ್ಲ.
ಫಿಲ್ ಸಾಲ್ಟ್ ಅವರ ಪತ್ನಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ಫಿಲ್ ಸಾಲ್ಟ್ ಲಭ್ಯತೆ ಕುರಿತಂತೆ ಹೆಡ್ ಕೋಚ್ ಆಂಡಿ ಫ್ಲವರ್ ಕೂಡಾ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಫಿಲ್ ಸಾಲ್ಟ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಯ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದು, 387 ರನ್ ಸಿಡಿಸಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಎದುರೇ ಸಾಲ್ಟ್ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಫೈನಲ್‌ಗೇರಿಸಿದ್ದರು.
ಒಂದು ವೇಳೆ ಇಂದಿನ ಪಂದ್ಯಕ್ಕೆ ಫಿಲ್ ಸಾಲ್ಟ್ ಅಲಭ್ಯವಾದರೇ, ನ್ಯೂಜಿಲೆಂಡ್ ಮೂಲದ ಸ್ಪೋಟಕ ಬ್ಯಾಟರ್ ಟಿಮ್ ಸೈಫರ್ಟ್ ಆರ್‌ಸಿಬಿ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಸಾಲ್ಟ್ ಲಭ್ಯತೆ ಕುರಿತಂತೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.