Pat Cummins love story: ವೈರಿ ದೇಶದ ಹುಡುಗಿಯ ಹೃದಯ ಕದ್ದು ಮದುವೆಯಾಗದೆ ತಂದೆಯಾದ ಕ್ರಿಕೆಟರ್!
ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕ್ರಿಕೆಟ್ ತಂಡದ ಪ್ರಮುಖ
ಸದಸ್ಯರಾಗಿದ್ದಾರೆ. ಅವರು ತಮ್ಮ ವೇಗದ ಬೌಲಿಂಗ್ ಜೊತೆಗೆ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದಾರೆ. ಬುಧವಾರ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಈ ಆಟಗಾರ ಕೇವಲ 14
ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದರಿಂದಾಗಿ ಕೆಕೆಆರ್, ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಅವರ ಅದ್ಭುತ ಇನ್ನಿಂಗ್ಸ್‌ನ ನಂತರ, ಕಮಿನ್ಸ್‌ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ಯಾಟ್ ಕಮ್ಮಿನ್ಸ್, ಪರಮ ಶತ್ರು ದೇಶದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗದೆ ತಂದೆಯಾದ ಪ್ರೇಮಕಥೆ ಇಲ್ಲಿದೆ.
ಆಸ್ಟ್ರೇಲಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದ ಪರಮ ಶತ್ರು ಇಂಗ್ಲೆಂಡ್ ದೇಶದ ಹುಡುಗಿಗೆ ಹೃದಯ ನೀಡಿದರು. ಪ್ಯಾಟ್ ಕಮಿನ್ಸ್ ಅವರ ಗರ್ಲ್‌ಫ್ರೆಂಡ್ ಬೆಕಿ ಬಾಸ್ಟನ್ (Becky Boston) ಇಂಗ್ಲೆಂಡ್‌ನ ಯಾರ್ಕ್‌ಷೈರ್ ಮೂಲದವರು.
ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನವಿದ್ದಂತೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೂಡ ಪರಮ ವೈರಿಗಳು .2014ರಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲಿಯೇ ಕಮಿನ್ಸ್ ಬೆಕಿ ಬಾಸ್ಟನ್‌ಗೆ ತನ್ನ ಮನಸ್ಸು ನೀಡಿದ್ದರು ಮತ್ತು ಕ್ರಮೇಣ ಅವರಿಬ್ಬರ ಭೇಟಿ ಬೆಳೆಯಿತು ಮತ್ತು ಅವರ ಸ್ನೇಹ ಪ್ರೀತಿಗೆ ತಿರುಗಿತು.
ಬೆಕಿ ಮತ್ತು ಕಮಿನ್ಸ್ ನಡುವೆ ಕೇವಲ ಗಡಿಗಳ ವ್ಯತ್ಯಾಸವಲ್ಲ, ವಯಸ್ಸನಲ್ಲಿ ಕೂಡ ವ್ಯತ್ಯಾಸವಿದೆ. ಕಮ್ಮಿನ್ಸ್ ಗೆಳತಿ ಅವರಿಗಿಂತ 3 ವರ್ಷ ದೊಡ್ಡವರು. ಪ್ಯಾಟ್ ಕಮ್ಮಿನ್ಸ್ 8 ಮೇ 1993 ರಂದು ಜನಿಸಿದರೆ, ಅವರ ಫಿಯಾನ್ಸಿ 17 ನವೆಂಬರ್ 1990 ರಂದು ಜನಿಸಿದರು.
ಆಸ್ಟ್ರೇಲಿಯನ್ ಬೌಲರ್ ಪ್ಯಾಟ್ ಕಮಿನ್ಸ್, ಬೆಕಿ ಬಾಸ್ಟನ್ ಜೊತೆ 6 ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಪ್ಯಾಟ್ ಕಮಿನ್ಸ್ ಫೆಬ್ರವರಿ 2020 ರಲ್ಲಿ ತನ್ನ ಗೆಳತಿಗೆ ಮದುವೆಗೆ ಪ್ರಸ್ತಾಪಿಸಿದರು.
ವಾಸ್ತವವಾಗಿ, ಕಮಿನ್ಸ್ ಬೆಕಿ ಅವರನ್ನು ಪಿಕ್ನಿಕ್ ಸ್ಪಾಟ್‌ಗೆ ಕರೆದೊಯ್ದು ಶಾಂಪೇನ್ ಬಾಟಲಿಯನ್ನು ಹಿಡಿದು ಬಾಲಿವುಡ್ ಶೈಲಿಯಲ್ಲಿ ಮೊಣಕಾಲುಗಳ ಮೇಲೆ ಕುಳಿತು ಪ್ರಪೋಸ್ ಮಾಡಿದರು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಕೊರೊನಾ ವೈರಸ್‌ನಿಂದಾಗಿ, ಇಬ್ಬರೂ ಮದುವೆಯಾಗಲು ಸಾಧ್ಯವಾಗಲಿಲ್ಲ ಮತ್ತು ಅದಕ್ಕೂ ಮೊದಲು ಕಮಿನ್ಸ್ ತಂದೆಯಾಗುವ ಸಂತೋಷವನ್ನು ಪಡೆದರು. ಗೆಳತಿ ಅಕ್ಟೋಬರ್ 8 ರಂದು ಮಗನಿಗೆ ಜನ್ಮ ನೀಡಿದರು. ಮಗನಿಗೆ ಅಲ್ಬಿ ಬೋಸ್ಟನ್ ಕಮಿನ್ಸ್ ಎಂದು ಹೆಸರಿಸಿದ್ದಾರೆ.
ಪ್ಯಾಟ್ ಕಮಿನ್ಸ್ ಅವರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್‌ನಲ್ಲಿ KKR ಪರ ಆಡುತ್ತಿದ್ದಾರೆ ಮತ್ತು ತಮ್ಮ ಬಾಲ್‌ನ ಜೊತೆಗೆ ಬ್ಯಾಟ್‌ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
Pat Cummins
ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಅವರು ಕೇವಲ 14 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 56 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.