MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2022- ಪತ್ನಿ ಮತ್ತು ಮಗನ ಜೊತೆ Hardik Pandya ಗೆಲುವಿನ ಸೆಲೆಬ್ರೆಷನ್‌

IPL 2022- ಪತ್ನಿ ಮತ್ತು ಮಗನ ಜೊತೆ Hardik Pandya ಗೆಲುವಿನ ಸೆಲೆಬ್ರೆಷನ್‌

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಹಾರ್ದಿಕ್  ( Hardik Pandya) ಪ್ರಸ್ತುತ ಫುಲ್ ಫಾರ್ಮ್‌ನಲ್ಲಿದ್ದಾರೆ. ಅವರ ತಂಡ ಐಪಿಎಲ್‌ನಲ್ಲಿ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು ಎರಡನ್ನೂ ಗೆದ್ದಿದೆ. ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans ) ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಇದಾದ ಬಳಿಕ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬದೊಂದಿಗೆ ವಿಜಯೋತ್ಸವ ಆಚರಿಸಿದ್ದು ಕಂಡುಬಂದಿತು. Instagram ನಲ್ಲಿ, ಅವರು ತಮ್ಮ ಪತ್ನಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ (Natasa Stankovic) ಮತ್ತು ಮಗ ಅಗಸ್ತ್ಯ ಪಾಂಡ್ಯ (Agastya Pandya) ಅವರೊಂದಿಗೆ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 Min read
Author : Rashmi Rao
Published : Apr 04 2022, 06:39 PM IST
Share this Photo Gallery
  • FB
  • TW
  • Linkdin
  • Whatsapp
17

ಐಪಿಎಲ್ ಸಮಯದಲ್ಲಿ ಆಟಗಾರರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತಿದ್ದಾರೆ. ಈ ನಡವೆ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಭಾನುವಾರ ತಮ್ಮ ಎರಡನೇ ಗೆಲುವನ್ನು ತಮ್ಮ ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ.

27

ಹಾರ್ದಿಕ್ ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಮಗ ಅಗಸ್ತ್ಯ ಪಾಂಡ್ಯ ಅವರೊಂದಿಗಿನ ಎರಡು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು 'ಗೆಲುವು ಅಥವಾ ಸೋಲು, ಅವರು ಯಾವಾಗಲೂ ನನ್ನೊಂದಿಗೆ ಇರುತ್ತಾರೆ. ನನ್ನ ಸಪೋರ್ಟ್‌ ಸಿಸ್ಟಮ್‌ ಎಂದು ಕ್ಯಾಪ್ಷನ್‌ ನೀಡಿ ಇದರೊಂದಿಗೆ ರೆಡ್ ಹಾರ್ಟ್ ಎಮೋಜಿಯನ್ನೂ ಹಾಕಿದ್ದಾರೆ.

37

ಪಾಂಡ್ಯ ಕುಟುಂಬದ ಈ ಫೋಟೋವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ ಮತ್ತು 16 ಗಂಟೆಗಳಲ್ಲಿ 1.71k ಹೆಚ್ಚು ಜನರ ಲೈಕ್‌ ಗಳಿಸಿದೆ ಈ ಫೋಟೋಗಳು . ಅದೇ ಸಮಯದಲ್ಲಿ, ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಕೂಡ ಫೋಟೋಗೆ ಕೆಂಪು ಹೃದಯದ ಎಮೋಜಿಯನ್ನು ಕಾಮೆಂಟ್‌ ಮಾಡಿದ್ದಾರೆ.

47

ಮಿರರ್‌ ಸೆಲ್ಫಿಯಲ್ಲಿ, ನತಾಶಾ ಕಪ್ಪು ಬಣ್ಣದ ಟ್ರ್ಯಾಕ್‌ಸೂಟ್ ಧರಿಸಿ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಇದರೊಂದಿಗೆ, ನತಾಶಾ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ತನ್ನ ಮಗನ ಮುದ್ದಾದ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. 

57

ಹಾರ್ದಿಕ್ ಪಾಂಡ್ಯ ನಾಯಕನಾಗಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವುದು ಕಂಡುಬಂದಿದೆ ಮತ್ತು ಅವರ ತಂಡದಿಂದ ಇದುವರೆಗಿನ ಎರಡೂ ಪಂದ್ಯಗಳಲ್ಲಿ ಅದ್ಭುತ ಫಲಿತಾಂಶ ಹೊರಬಂದಿದೆ.


 

67

ಅದೇ ಸಮಯದಲ್ಲಿ, ಸ್ವಲ್ಪ ಸಮಯದವರೆಗೆ ಬೌಲಿಂಗ್ ಕೌಶಲ್ಯಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ಈ ಎರಡು ಪಂದ್ಯಗಳಲ್ಲಿ ಬೌಲರ್ ಆಗಿ ಅದ್ಭುತ ಪ್ರದರ್ಶನ ನೀಡಿದರು. ಅವರು 2 ಪಂದ್ಯಗಳಲ್ಲಿ 64 ರನ್ ಗಳಿಸಿದರು. ಅಲ್ಲದೆ   1 ವಿಕೆಟ್ ಪಡೆದರು.

77

ಗುಜರಾತ್ ಟೈಟಾನ್ಸ್ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಏಪ್ರಿಲ್ 8 ರಂದು ಎದುರಿಸಲಿದೆ. ಪಂಜಾಬ್ ಕಿಂಗ್ಸ್ ತಂಡ ಈ ಲೀಗ್‌ನಲ್ಲಿ ಇದುವರೆಗೆ 3 ಪಂದ್ಯಗಳನ್ನು ಆಡಿದೆ. ಇದರಲ್ಲಿ ಎರಡರಲ್ಲಿ ಗೆದ್ದು ಒಂದರಲ್ಲಿ ಸೋಲು ಎದುರಿಸಬೇಕಾಯಿತು. ಆದರೆ ಗುಜರಾತ್ ಟೈಟಾನ್ಸ್  ಇದುವರೆಗೆ ತನ್ನ ಎರಡೂ ಪಂದ್ಯಗಳನ್ನು ಗೆದ್ದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RR
Rashmi Rao
ಗುಜರಾತ್ ಟೈಟನ್ಸ್

Latest Videos
Recommended Stories
Recommended image1
Breaking: ಚಿನ್ನಸ್ವಾಮಿಗೆ ಐಪಿಎಲ್‌, ಬೆಂಗಳೂರಲ್ಲಿ ಐದು ಪಂದ್ಯ ಆಡಲು ಕೊನೆಗೂ ಒಪ್ಪಿದ RCB!
Recommended image2
ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಿಂದ ಬ್ಯಾನ್ ಆಗ್ತಾರಾ ಸಂಜು ಸ್ಯಾಮ್ಸನ್? ಶುರುವಾಯ್ತು ಹೊಸ ಭೀತಿ!
Recommended image3
ರಿಂಕು ಸಿಂಗ್ ಇದ್ದರೂ ಸಂಜು ಸ್ಯಾಮ್ಸನ್‌ಗೆ ಚಾನ್ಸ್ ಕೊಟ್ಟಿದ್ದೇಕೆ? ಇಲ್ಲಿದೆ 4 ಇಂಟ್ರೆಸ್ಟಿಂಗ್ ಕಾರಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved