ಧೋನಿ - ಹೆಟ್ಮೇಯರ್: ಟ್ರೆಂಡ್ ಆಗುತ್ತಿರುವ IPLಸ್ಟಾರ್ಸ್ ಹೊಸ ಹೇರ್‌ಸ್ಟೈಲ್!
IPL ವಿಶ್ವದ ಅತ್ಯಂತ ರೋಚಕ ಮತ್ತು ದೊಡ್ಡ T20 ಕ್ರಿಕೆಟ್ ಸ್ಪರ್ಧೆಯಾಗಿದೆ. ಆಟದ ಜೊತೆ ಈ ಟೂರ್ನಿಮೆಂಟ್ ಗ್ಲಾಮರ್‌ನಿಂದ ಕೂಡಿದೆ. ಕೇವಲ ಆಟಗಾರರ ಪತ್ನಿಯರು ಅಥವಾ ಅವರ ಗರ್ಲ್‌ಫ್ರೆಂಡ್ ಕಾರಣದಿಂದ ಮಾತ್ರ ಐಪಿಎಲ್‌ಗೆ ಗ್ಲಾಮರ್ ಸೇರಿಲ್ಲ. ಆಟಗಾರರು ಕೂಡ ಈ ಆಟದ ಗ್ಲಾಮರ್ ಹೆಚ್ಚಿಸುತ್ತಾರೆ. ಪ್ರತಿ ವರ್ಷ ಆಟಗಾರರು ಈ ಲೀಗ್ ಸಮಯದಲ್ಲಿ ಯೂನಿಕ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ದೋನಿ ಯಿಂದ (Dhoni) ಹೆಟ್ಮಿಯರ್ (Hetmeyer) ವರೆಗೆ ಹಲವು ಫೇಮಸ್ ಆಟಗಾರರು ಇದ್ದಾರೆ.

ಶಿಮ್ರಾನ್ ಹೆಟ್ಮಿಯರ್: ದೆಹಲಿ ಕ್ಯಾಪಿಟಲ್ಸ್ ಪವರ್ ಹೀಟರ್ ಶಿಮ್ರಾನ್ ಹೆಟ್ಮಿಯರ್ ಅವರ ಕೂದಲು ಈಗ ನಡೆಯುತ್ತಿರುವ ಐಪಿಎಲ್ ನಲ್ಲಿ ಹೆಚ್ಚು ಗಮನ ಸೆಳೆದಿದೆ. ಹೆಟ್ಮಿಯರ್ ತನ್ನ ಕೂದಲಿಗೆ ವಿಭಿನ್ನವಾಗಿ ಕಲರ್ ಮಾಡಲು ಇಷ್ಟಪಡುತ್ತಾರೆ ಐಪಿಎಲ್ 2021 ರ ಮೊದಲ ಸೀಸನ್ ನಲ್ಲಿ ಅವರ ಕೂದಲಿನ ಬಣ್ಣ ಗೋಲ್ಡನ್ ಆಗಿತ್ತು. ಈಗ ಅವರು ತಮ್ಮ ತಲೆ ಕೂದಲನ್ನು ನೀಲಿ ಬಣ್ಣ ಮಾಡಿಸಿಕೊಂಡು ತನ್ನ ಟೀಮ್ ದೆಹಲಿ ಕ್ಯಾಪಿಟಲ್ಸ್ ಜರ್ಸಿಯ ಕಲರ್‌ಗೆ ಮ್ಯಾಚ್ ಮಾಡಿಕೊಂಡಿದ್ದಾರೆ.
ಎಂಎಸ್ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್‌ನ ಪ್ರತಿ ಸೀಸನ್‌ನಲ್ಲೂ ಯೂನಿಕ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಐಪಿಎಲ್ 2021 ರ ಎರಡನೇ ಸಿಸನ್ ಆರಂಭಕ್ಕೆ ಕೆಲವು ವಾರಗಳ ಮೊದಲು ದೋನಿ ಸೆಲೆಬ್ರಿಟಿ ಕೇಶ ವಿನ್ಯಾಸಕಿ ಅಲೀಮ್ ಹಕೀಮ್ ಅವರಿಂದ ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಧೋನಿಯ ಹೊಸ ಕೇಶವಿನ್ಯಾಸ ಅಂತರ್ಜಾಲದಲ್ಲಿ ಹೊಸ ಹವಾ ಸೃಷ್ಟಿಸಿದೆ. ಆವರು ತನ್ನ ಕೂದಲಿಗೆ ಉಬರ್ ಕಟ್ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ: ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ಮತ್ತು ಮುಂಬೈ ಇಂಡಿಯನ್ಸ್‌ನ ಇನ್ನೊಬ್ಬ ಸ್ಟೈಲಿಶ್ ಕ್ರಿಕೆಟರ್. ಧೋನಿಯ ಕೇಶವಿನ್ಯಾಸ ಅಂತರ್ಜಾಲದಲ್ಲಿ ವೈರಲ್ ಆದ ತಕ್ಷಣ, ಹಾರ್ದಿಕ್ ಕೂಡ ಕೇಶ ವಿನ್ಯಾಸಕಿ ಅಲೀಮ್ ಹಕೀಂನಿಂದ ಹೇರ್‌ಕಟ್ ಮಾಡಿಸಿಕೊಂಡರು. ಗಾಯದ ಸಮಸ್ಯೆಯಿಂದ ಅವರು ಇನ್ನೂ ಮೈದಾನಕ್ಕೆ ಮರಳಿಲ್ಲವಾದರೂ, ಅವರ ಹೊಸ ಕೇಶವಿನ್ಯಾಸ ಮತ್ತು ಗಡ್ಡದ ನೋಟವು ಸಾಕಷ್ಟು ಜನಪ್ರಿಯವಾಗಿದೆ.
ಶ್ರೇಯಸ್ ಅಯ್ಯರ್: ದೆಹಲಿ ಕ್ಯಾಪಿಟಲ್ಸ್ ಮಾಜಿ ಕ್ಯಾಪ್ಟನ್ ಮತ್ತು ಭಾರತದ ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಗಾಯದ ಕಾರಣ ನಡೆಯುತ್ತಿರುವ ಐಪಿಎಲ್ ನ ಮೊದಲ ಸುತ್ತನ್ನು ಮಿಸ್ ಮಾಡಿಕೊಂಡಿದ್ದರು. ಆದಾಗ್ಯೂ ಅವರು ಎರಡನೇ ಹಂತದ ಮೊದಲು ಚೇತರಿಸಿಕೊಂಡಿದ್ದಾರೆ ಮತ್ತು ಲೀಗ್‌ನಲ್ಲಿ ಪುನರಾಗಮನವನ್ನು ಮಾಡಿದ್ದಾರೆ. ಇದರೊಂದಿಗೆ, ಅವರು ಹೊಸ ಹೇರ್‌ಸ್ಟೈಲ್ ಕೂಡ ಮಾಡಿಸಿದ್ದಾರೆ. ಅವರು ಮುಂಭಾಗದ ಕೂದಲನ್ನು ಬೂದು ಬಣ್ಣದಿಂದ ಹೈಲೈಟ್ ಮಾಡಿದ್ದಾರೆ.
ಅನುಷ್ಕಾ ಶರ್ಮಾ- ಧನಶ್ರೀ ವರ್ಮಾ:IPL ಆಟಗಾರರ ಪತ್ನಿಯರು ಎಷ್ಷು ಓದಿದ್ದಾರೆ ನೋಡಿ!
ಶುಭಮನ್ ಗಿಲ್: KKR (ಕೋಲ್ಕತಾ ನೈಟ್ ರೈಡರ್ಸ್) ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ಅತ್ಯಂತ ಪ್ರತಿಭಾವಂತ ಯುವ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಈ ಬಾರಿ ಅವರು ತಮ್ಮ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ಮತ್ತು ತಮ್ಮ ಕೂದಲನ್ನು ಶಾರ್ಟ್ ಮಾಡುವ ಮೂಲಕ ಮೇಲ್ಭಾಗಕ್ಕೆ ಗೋಲ್ಡನ್ ಬಣ್ಣವನ್ನು ನೀಡಿದ್ದಾರೆ.
ಅಂಡ್ರೆ ರಸೆಲ್: KKR ಸ್ಟಾರ್ ಆಟಗಾರ 'ರಸೆಲ್ ಮೈಸೆಲ್', ಆಂಡ್ರೆ ರಸೆಲ್ ಅವರ ಸ್ಟೈಲ್ ಯಾವಾಗಲೂ ವಿಭಿನ್ನವಾಗಿರುತ್ತದೆ. ಅವರು ಆಗಾಗ್ಗೆ ತನ್ನ ಕೇಶವಿನ್ಯಾಸವನ್ನು ಬದಲಾಯಿಸುತ್ತಾರೆ. ಸೆಪ್ಟೆಂಬರ್‌ನಲ್ಲಿ ಐಪಿಎಲ್‌ನ ಎರಡನೇ ಹಂತ ಆರಂಭದ ಮೊದಲು, ರಸೆಲ್ ಕೂದಲಿಗೆ ಹೊಂಬಣ್ಣವನ್ನು ಪಡೆದರು.
ನಿತೀಶ್ ರಾಣಾ: ಐಪಿಎಲ್ 2021, ರ ಎರಡನೇ ಹಂತದ ಮುನ್ನ, ಮತ್ತೊಬ್ಬ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಹೊಸ ಕೇಶವಿನ್ಯಾಸ ಮಾಡಿದ್ದಾರೆ. ಅವರು ತಮ್ಮ ತಲೆಯ ಹಿಂಭಾಗದಲ್ಲಿರುವ ಕೂದಲಿನಲ್ಲಿ ಹಾರ್ಟ್ ಶೇಪ್ ಮಾಡಿ ಕೊಂಡಿದ್ದಾರೆ ಮತ್ತು ಅದರ ಬಣ್ಣವು ಅವರ ಐಪಿಎಲ್ ಫ್ರಾಂಚೈಸಿ ಕೆಕೆಆರ್‌ನ ಜರ್ಸಿಯ ನೇರಳೆ ಮ್ಯಾಚ್ ಮಾಡಿಕೊಂಡಿದ್ದಾರೆ.
ಎಬಿ ಡಿ ವಿಲಿಯರ್ಸ್: RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಲೆಜೆಂಡ್ ಎಬಿ ಡಿವಿಲಿಯರ್ಸ್ ತನ್ನ ಲುಕ್‌ನಲ್ಲಿ ಯಾವುದೇ ಪ್ರಯೋಗ ಮಾಡುವುದಿಲ್ಲ. ಆದಾಗ್ಯೂ, ಈ ಬಾರಿ ಐಪಿಎಲ್‌ನಲ್ಲಿ ಅವರು ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪೋನಿಟೇಲ್ ಬೆಳೆಸಿಕೊಂಡಿದ್ದಾರೆ ಮತ್ತು ಎಬಿಡಿಯ ಹೊಸ ಹೇರ್‌ಸ್ಟೈಲ್‌ಗೆ ಆರ್‌ಸಿಬಿಯ ಅಭಿಮಾನಿಗಳು ಫಿದಾ ಆಗಿದ್ದಾರೆ
ಸಚಿನ್ ಬೇಬಿ: ಐಪಿಎಲ್ 2021 ರ ಎರಡನೇ ಹಂತದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಸಚಿನ್ ಬೇಬಿ ಅವರು ಹೆಟ್ಮಿಯರ್ ಮತ್ತು ನಿತೀಶ್ ರಾಣಾ ಅವರಂತಹ ಕೇಶವಿನ್ಯಾಸಗಳೊಂದಿಗೆ ತಮ್ಮ ತಂಡದ ಮೇಲೆನ ತಮ್ಮ ಪ್ರೀತಿಯನ್ನು ಹೇರ್ ಸ್ಟೈಲ್ ಮೂಲಕ ವ್ಯಕ್ತಪಡಿಸಿದ್ದಾರೆ. ಹೊಸ ಕೇಶವಿನ್ಯಾಸದಲ್ಲಿ ಅವರ ತಲೆ ಒಂದು ಬದಿಯಲ್ಲಿ 'RCB' ಎಂದು ಹೈಲೈಟ್ ಮಾಡಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.