ಕೆಲಸ ಬಿಟ್ಟು ಮಗನ ಜೊತೆನಿಂತ ತಂದೆ: ದೀಪಕ್ ಚಹಾರ್ ಕ್ರಿಕೆಟ್ ಜರ್ನಿ ಇದು
ಭಾರತೀಯ ತಂಡದ ಯುವ ಆಟಗಾರ ಮತ್ತು ಸಿಎಸ್‌ಕೆ ಸ್ಟಾರ್ ಕ್ರಿಕೆಟರ್ ದೀಪಕ್ ಚಹಾರ್ ಆಗಸ್ಟ್ 7 ರಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೀಪಕ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ರಾಜಸ್ಥಾನದಿಂದ ಆರಂಭಿಸಿದರು. 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಳು ರನ್ ಗೆ ಆರು ವಿಕೆಟ್ ಪಡೆದಿದ್ದಕ್ಕಾಗಿ ಬೆಸ್ಟ್ ಪಾರ್ಫಾರ್ಮರ್ ಆವಾರ್ಡ್ ಪಡೆದರು. ದೀಪಕ್ ಹಲವು ಸಂದರ್ಭಗಳಲ್ಲಿ ಭಾರತೀಯ ತಂಡದ ಮಾಜಿ ನಾಯಕ ಮತ್ತು CSKಯ ಕ್ಯಾಪ್ಟನ್ ಕೂಲ್ MS ಧೋನಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರು ಮಹಿಯ ನಾಯಕತ್ವದಲ್ಲಿ ಸಿಎಸ್‌ಕೆ ಪರ ಆಡುತ್ತಾರೆ. ಅವರ ಜನ್ಮದಿನದ ಸಮಯದಲ್ಲಿ ಚಹಾರ್‌ಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳ ಇಲ್ಲಿವೆ.

ದೀಪಕ್ ಲೋಕೇಂದ್ರ ಚಹರ್ 7 ಆಗಸ್ಟ್ 1992 ರಂದು ಆಗ್ರಾದಲ್ಲಿ ಜನಿಸಿದರು. ಅವರ ವೃತ್ತಿಜೀವನವು ರಾಜಸ್ಥಾನದ ಪರ ರಣಜಿ ಆಡುವ ಆರಂಭಿಸಿದರು.
ಬಲಗೈ ಮಧ್ಯಮ ವೇಗದ ಬೌಲರ್ ದೀಪಕ್ ಚಹಾರ್ ಅನೇಕ ಸಂದರ್ಭಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ಕೂಡ ಮಾಡಿದ್ದಾರೆ.
2008 ರಲ್ಲಿ ದೀಪಕ್ ಚಹಾರ್ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿಗೆ ಹೋದಾಗ, ತಂಡದ ಆಟಗಾರರಾಗಲು ಸಾಧ್ಯವಿಲ್ಲ ಎಂದು ಹೇಳಿ ಆಗಿನ ಭಾರತೀಯ ತಂಡದ ಮಾಜಿ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ತಿರಸ್ಕರಿಸಿದರು. ಸೋಲದ ದೀಪಕ್ ಕಠಿಣ ಪರಿಶ್ರಮದಿಂದ ನಂತರ ಟೀಮ್ ಇಂಡಿಯಾದ್ಲಲಿ ಸ್ಥಾನ ಪಡೆದರು.
ಅವರ ತಂದೆ ನಿವೃತ್ತ ವಾಯುಪಡೆಯ ಸಾರ್ಜೆಂಟ್ ಲೋಕೇಂದ್ರ ಸಿಂಗ್ ದೀಪಕ್ ಕ್ರಿಕೆಟಿಗರಾಗಲು ಸಂಪೂರ್ಣ ಬೆಂಬಲ ನೀಡಿದರು. ದೀಪಕ್‌ಗೆ 12 ವರ್ಷದವನಿದ್ದಾಗ, ಅವರ ತಂದೆ ಲೋಕೇಂದ್ರ ಸಿಂಗ್ ಆತನನ್ನು ಏರ್ ಫೋರ್ಸ್ ಕಾಂಪ್ಲೆಕ್ಸ್‌ಗೆ ಕ್ರಿಕೆಟ್ ಆಡಲು ಕರೆದುಕೊಂಡು ಹೋಗುತ್ತಿದ್ದರು ಸ್ವಲ್ಪ ಸಮಯದ ನಂತರ ಅವರು ಟ್ರಾನ್ಸ್‌ಫರ್ ಆದಾಗ ಮಗನಿಗೆ ತರಬೇತಿ ನೀಡಲು, ಅವನು ತನ್ನ ಕೆಲಸವನ್ನೇ ಬಿಟ್ಟರು. ನಂತರ ಕುಟುಂಬದೋಂದಿಗೆ ಆಗ್ರಾ ಬಂದು ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಿದರು.
ದೀಪಕ್ ಅವರ ಕಠಿಣ ಪರಿಶ್ರಮದ ನಂತರ, ದೀಪಕ್ ಚಹರ್ 2010 ರಲ್ಲಿ ರಣಜಿಗೆ ಆಯ್ಕೆಯಾದರು. ಇದರ ನಂತರ ಅವರು 2018 ರಲ್ಲಿ ಮೊದಲ ಏಕದಿನ ಪಂದ್ಯವನ್ನು ಆಡಿದರು. 8 ಜುಲೈ 2018 ರಂದು, ಅವರು ಭಾರತಕ್ಕಾಗಿ ತಮ್ಮ ಟಿ 20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದರು.
ಚಹರ್ ಅವರ ಅದ್ಭುತ ಸ್ವಿಂಗ್ ಬೌಲಿಂಗ್ ಅವರನ್ನು ಶೀಘ್ರದಲ್ಲೇ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಟಗಾರನನ್ನಾಗಿಸಿತು. 2018ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ ಚಹಾರ್.
'ಮಹಿ ಭಾಯಿ ನಾಯಕತ್ವದಲ್ಲಿ ಆಡುವುದು ಮೊದಲಿನಿಂದಲೂ ನನ್ನ ಕನಸಾಗಿತ್ತು. ಅವರ ನಾಯಕತ್ವದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ಅವರು ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ. ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕೆಂದು ಅವರು ನನಗೆ ಕಲಿಸಿದರು' ಎಂದು ಧೋನಿ ಬಗ್ಗೆ ಅವರು ಹೇಳುತ್ತಾರೆ.
ದೀಪಕ್ ಚಹರ್ ಟಿ 20 ಯಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಅವರು 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ನಾಗ್ಪುರ ಟಿ 20 ಯಲ್ಲಿ ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದರು. ಅವರು 3.2 ಓವರ್ ಗಳಲ್ಲಿ 7 ರನ್ ನೀಡಿ 6 ವಿಕೆಟ್ ಪಡೆದರು.
ಇದಲ್ಲದೇ, ಭಾರತದ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಭಾರತದ 7 ನೇ ಬೌಲರ್ ಕೂಡ ಆಗಿದ್ದಾರೆ.
ದೀಪಕ್ ಚಹಾರ್ ಸಹೋದರ ರಾಹುಲ್ ಚಹರ್ ಕೂಡ ಅವರೊಂದಿಗೆ ಕ್ರಿಕೆಟ್ ಆಡುತ್ತಾರೆ. ಚಹರ್ ಬ್ರದರ್ಸ್ ಎಂದು ಫೇಮಸ್ ಆಗಿರುವ ಇಬ್ಬರೂ ಸಹೋದರರು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳಿಗಾಗಿ ಆಡುತ್ತಾರೆ. ದೀಪಕ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದರೆ, ರಾಹುಲ್ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ.
ಇತ್ತೀಚೆಗೆ, ಶ್ರೀಲಂಕಾ ವಿರುದ್ಧ ಆಡಿದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ, ದೀಪಕ್ ಔಟಾಗದೆ 69 ರನ್ ಗಳಿಸಿ ಭಾರತಕ್ಕೆ ರೋಚಕ ಗೆಲುವು ನೀಡಿದರು. ಜೊತೆಗೆ 2 ವಿಕೆಟ್‌ಗಳನ್ನು ಪಡೆದರು.
ಇದುವರೆಗೆ ಟೀಮ್ ಇಂಡಿಯಾದ ಪರ 5 ಏಕದಿನ ಪಂದ್ಯಗಳಲ್ಲಿ 6 ವಿಕೆಟ್, 14 ಟಿ 20 ಪಂದ್ಯಗಳಲ್ಲಿ 20 ಮತ್ತು ಐಪಿಎಲ್ 55 ಪಂದ್ಯಗಳಲ್ಲಿ 53 ವಿಕೆಟ್ ಪಡೆದಿದ್ದಾರೆ ದೀಪಕ್ ಚಹಾರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.