Ind vs WI: ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾದ ರವೀಂದ್ರ ಜಡೇಜಾ..!
ಬಾರ್ಬಡಾಸ್(ಜು.29): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಕಪಿಲ್ ದೇವ್ ಹೆಸರಿನಲ್ಲಿರುವ ಅಪರೂಪದ ದಾಖಲೆ ಸರಿಗಟ್ಟಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಆಲ್ರೌಂಡ್ ಆಟದ ಮೂಲಕ ಭಾರತ ಕ್ರಿಕೆಟ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಜಡ್ಡು, ಬೌಲಿಂಗ್‌ನಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಬ್ಯಾಟಿಂಗ್‌ನಲ್ಲಿ ಅಜೇಯ 16 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ದಾಖಲೆಯ ಹೊಸ್ತಿಲಲ್ಲಿ ಜಡ್ಡು:
ರವೀಂದ್ರ ಜಡೇಜಾ, ಇದೀಗ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲೇ ಅಪರೂಪದ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಜಡ್ಡು ಇದೀಗ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ.
ಕಪಿಲ್ ದೇವ್ ದಾಖಲೆ ಬ್ರೇಕ್?
ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿರುವ ಜಡ್ಡು, ಇನ್ನುಳಿದ ಎರಡು ಪಂದ್ಯಗಳಿಂದ ಇನ್ನು ಕೇವಲ 6 ವಿಕೆಟ್ ಕಬಳಿಸಿದರೆ, ಕಪಿಲ್ ದೇವ್ ಹೆಸರಿನಲ್ಲಿರುವ ಅಪರೂಪದ ದಾಖಲೆ ಜಡ್ಡು ಸರಿಗಟ್ಟಲಿದ್ದಾರೆ..
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 2500+ ರನ್ ಹಾಗೂ 200+ ವಿಕೆಟ್ ಕಬಳಿಸಿದ ಭಾರತದ ಏಕೈಕ ಆಲ್ರೌಂಡರ್ ಎನ್ನುವ ಹೆಗ್ಗಳಿಕೆ ಕ್ರಿಕೆಟ್ ದಂತಕಥೆ ಕಪಿಲ್ ಹೆಸರಿನಲ್ಲಿದೆ. ದಶಕಗಳ ಕಾಲ ಕಪಿಲ್ ದೇವ್ ಹೆಸರಿನಲ್ಲಿರುವ ಈ ದಾಖಲೆ ಮುರಿಯಲು ಜಡ್ಡುಗೆ ಕೇವಲ 6 ವಿಕೆಟ್ ಅಗತ್ಯವಿದೆ.
ಜಡೇಜಾ ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ಟೀಂ ಇಂಡಿಯಾ ಪರ 2500+ ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಜಡ್ಡು ಇದುವರೆಗೂ ಏಕದಿನ ಕ್ರಿಕೆಟ್‌ನಲ್ಲಿ 194 ಬಲಿ ಪಡೆದಿದ್ದು, ಇನ್ನು 6 ವಿಕೆಟ್ ಕಬಳಿಸಿದರೆ, 200 ವಿಕೆಟ್ ಕಬಳಿಸಿದವರ ಕ್ಲಬ್ ಸೇರಲಿದ್ದಾರೆ.
ಇಂದೇ ಸರಣಿ ಗೆಲ್ಲುವ ವಿಶ್ವಾಸದಲ್ಲಿ ಭಾರತ
ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ 5 ಗೆಲುವು ಸಾಧಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದ್ದು, ಇದೀಗ ಎರಡನೇ ಪಂದ್ಯ ಗೆದ್ದು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳಲು ಎದುರು ನೋಡುತ್ತಿದೆ.