ಫೆ.5 ರಿಂದ ಭಾರತ-ಇಂಗ್ಲೆಂಡ್ ತವರಿನ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!
ಆಸ್ಟ್ರೇಲಿಯಾ ಪ್ರವಾಸ ಯಶಸ್ವಿಯಾಗಿ ಮುಗಿಸಿ ತವರಿಗೆ ವಾಪಸ್ ಆಗಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ದ ತವರಿನ ಸರಣಿಗೆ ಸಜ್ಜಾಗಿದೆ. ಜನವರಿ 27ಕ್ಕೆ ಉಭಯ ತಂಡದ ಆಟಗಾರರ ಚೆನ್ನೈಗೆ ಆಗಮಿಸಲಿದ್ದಾರೆ. ಫೆ.5 ರಿಂದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿ ಆರಂಭಗೊಳ್ಳಲಿದೆ. ತವರಿನ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ತವರಿನ ಸರಣಿಗೆ ತಯಾರಿ ಆರಂಭಿಸಿದೆ. ಜನವರಿ 27ಕ್ಕೆ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಬಯೋಬಬಲ್ ಒಳಗಡೆ ಸೇರಿಕೊಳ್ಳಬೇಕಿದೆ.
ಕೊರೋನಾ ವೈರಸ್ ಕಾರಣ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಬಯೋಬಲ್ ಅತ್ಯವಶ್ಯಕವಾಗಿದೆ. ಫೆಬ್ರವರಿ 5 ರಿಂದ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದೆ. ಆರಂಭಿಕ 2 ಪಂದ್ಯ ಚೆನ್ನೈನಲ್ಲಿ ಆಯೋಜಿಸಲಾಗಿದೆ. ಇನ್ನುಳಿದ 2 ಪಂದ್ಯ ಅಹಮ್ಮದಾಬಾದ್‌ನಲ್ಲಿ ಆಯೋಜಿಸಲಾಗಿದೆ
ಫೆ. 5ರಿಂದ 9 ರ ವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಇನ್ನು ಎರಡನೇ ಪಂದ್ಯ ಫೆ.13 ರಿಂದ 17ರ ವರೆಗೆ 2ನೇ ಟೆಸ್ಟ್ ಪಂದ್ಯ ನಡೆಯಲಿದೆ
3ನೇ ಪಂದ್ಯ ಫೆ.24 ರಿಂದ 28ರ ವರೆಗೆ ನಡೆಯಲಿದೆ. ಇನ್ನು 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 4 ರಿಂದ 8ರ ವರೆಗೆ ನಡೆಯಲಿದೆ. ಆಂತಿಮ ಎರಡು ಟೆಸ್ಟ್ ಪಂದ್ಯ ಅಹಮ್ಮದಾಬಾದ್‌ನಲ್ಲಿ ನಡೆಯಲಿದೆ
ಟೆಸ್ಟ್ ಸರಣಿ ಬಳಿಕ ಮಾರ್ಚ್ 12 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. 5 ಪಂದ್ಯದ ಟಿ20 ಸರಣಿಯನ್ನು ಅಹಮ್ಮದಾಬಾದ್‌ನಲ್ಲಿ ಆಯೋಜಿಸಲಾಗಿದೆ.
ಮಾರ್ಚ್ 12ಕ್ಕೆ 1ನೇ ಟಿ20, ಮಾ.14ಕ್ಕೆ 2ನೇ ಪಂದ್ಯ, ಮಾ.16ಕ್ಕೆ 3ನೇ ಪಂದ್ಯ, ಮಾ.18ಕ್ಕೆ 4ನೇ ಟಿ20 ಪಂದ್ಯ ಹಾಗೂ ಮಾರ್ಚ್ 29ಕ್ಕೆ 5ನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಮಾರ್ಚ್ 23 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ. ಏಕದಿನ ಪಂದ್ಯಗಳು ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ಮೂರು ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.
ಮಾ.23ಕ್ಕೆ ಮೊದಲ ಏಕದಿನ, ಮಾರ್ಚ್ 26ಕ್ಕೆ 2ನೇ ಏಕದಿನ ಹಾಗೂ ಮಾರ್ಚ್ 28ಕ್ಕೆ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯದೊಂದಿಗೆ ಭಾರತ ಇಂಗ್ಲೆಂಡ್ ಸರಣಿ ಅಂತ್ಯವಾಗಲಿದೆ.
ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ನಾಯಕ ವಿರಾಟ್ ಕೊಹ್ಲಿ, ಇಂಜುರಿಗೊಂಡಿದ್ದ ಹಾರ್ಧಿಕ್ ಪಾಂಡ್ಯ, ಇಶಾಂ್ ಶರ್ಮಾ ತಂಡ ಸೇರಿಕೊಂಡಿದ್ದಾರೆ
ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಭಾರತ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಶುಬ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ವೃದ್ಧಿಮಾನ್ ಸಾಹ, ಆರ್ ಅಶ್ವಿನ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್