- Home
- Sports
- Cricket
- ಭಾರತ vs ಇಂಗ್ಲೆಂಡ್ ಏಕದಿನ ಸರಣಿ: ಸಂಪೂರ್ಣ ವೇಳಾಪಟ್ಟಿ, ಎಲ್ಲಿ ನೋಡಬೇಕು? ಎಷ್ಟು ಗಂಟೆಯಿಂದ ಪಂದ್ಯ ಆರಂಭ?
ಭಾರತ vs ಇಂಗ್ಲೆಂಡ್ ಏಕದಿನ ಸರಣಿ: ಸಂಪೂರ್ಣ ವೇಳಾಪಟ್ಟಿ, ಎಲ್ಲಿ ನೋಡಬೇಕು? ಎಷ್ಟು ಗಂಟೆಯಿಂದ ಪಂದ್ಯ ಆರಂಭ?
ಭಾರತ-ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಶುರುವಾಗ್ತಿದೆ. ಪಂದ್ಯಗಳ ವೇಳಾಪಟ್ಟಿ, ಯಾವ ಚಾನೆಲ್‌ನಲ್ಲಿ ನೋಡಬಹುದು ಅನ್ನೋ ಪೂರ್ತಿ ಮಾಹಿತಿ ಇಲ್ಲಿದೆ.

ಭಾರತ-ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ಮುಗಿದಿದೆ. ಭಾರತ 4-1 ಅಂತರದಲ್ಲಿ ಸರಣಿ ಗೆದ್ದಿದೆ. ಮುಂದೆ 3 ಪಂದ್ಯಗಳ ಏಕದಿನ ಸರಣಿ ಇದೆ. ಮೊದಲ ಪಂದ್ಯ ಫೆಬ್ರವರಿ 6ಕ್ಕೆ ನಾಗ್ಪುರದಲ್ಲಿ ನಡೆಯಲಿದೆ. 2ನೇ ಏಕದಿನ ಫೆಬ್ರವರಿ 9ಕ್ಕೆ ಕಟಕ್‌ನಲ್ಲೂ, 3ನೇ ಏಕದಿನ ಫೆಬ್ರವರಿ 12ಕ್ಕೆ ಅಹಮದಾಬಾದ್‌ನಲ್ಲೂ ನಡೆಯಲಿವೆ.
'ಮಿನಿ ವಿಶ್ವಕಪ್' ಅಂತ ಕರೆಯಲ್ಪಡುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ನಡೆಯುವ ಈ ಸರಣಿ ಎರಡೂ ತಂಡಗಳಿಗೆ ಮುಖ್ಯ. ಏಕದಿನ ಸರಣಿ ಗೆದ್ದರೆ ಚಾಂಪಿಯನ್ಸ್ ಟ್ರೋಫಿಗೆ ಆತ್ಮವಿಶ್ವಾಸದಿಂದ ಸ್ಪರ್ಧಿಸಬಹುದು. ಭಾರತದ ಟಿ20 ತಂಡಕ್ಕೂ ಏಕದಿನ ತಂಡಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರಿಷಭ್ ಪಂತ್, ಕೆ.ಎಲ್.ರಾಹುಲ್ ಅನುಭವಿ ಆಟಗಾರರಿದ್ದಾರೆ. ಯಶಸ್ವಿ ಜೈಸ್ವಾಲ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡ್ತಿದ್ದಾರೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್‌ಗೆ ಕಮ್‌ಬ್ಯಾಕ್ ಮಾಡಲು ಈ ಸರಣಿ ಒಳ್ಳೆಯ ಅವಕಾಶ ಎನಿಸಿಕೊಂಡಿದೆ.
India vs Australia Test
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಆದರೆ ಇದೀಗ ತವರಿನಲ್ಲಿ ಇಂಗ್ಲೆಂಡ್ ಎದುರು ಭರ್ಜರಿ ಪ್ರದರ್ಶನ ತೋರಿ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಲು ಉಭಯ ತಂಡಗಳ ಆಟಗಾರರು ಎದುರು ನೋಡುತ್ತಿದ್ದಾರೆ.
Image Credit: Getty Images
ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಫಿಟ್ನೆಸ್ ಪರೀಕ್ಷಿಸಲು ಏಕದಿನ ಸರಣಿ ಸಹಾಯಕ. ಈಗಾಗಲೇ ಟಿ20 ಕ್ರಿಕೆಟ್‌ಗೆ ವರ್ಷದ ಬಳಿಕ ಕಮ್‌ಬ್ಯಾಕ್ ಮಾಡಿರುವ ಶಮಿ, ಇದೀಗ ಏಕದಿನ ಕ್ರಿಕೆಟ್ ಮಾದರಿಯಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಒಳ್ಳೆಯ ಅವಕಾಶ ಎನಿಸಿಕೊಂಡಿದೆ.
ಕುಲ್ದೀಪ್ ಯಾದವ್ ಅವರ ಸತ್ವಪರೀಕ್ಷೆಗೂ ಈ ಸರಣಿ ವೇದಿಕೆಯಾಗಿದೆ. ಇದರ ಜತೆಗೆ ಟಿ20 ಸರಣಿಯಲ್ಲಿ ಮಿಂಚಿರುವ ವರುಣ್ ಚಕ್ರವರ್ತಿಗೆ ಕೊನೆಯ ಕ್ಷಣದಲ್ಲಿ ಭಾರತ ತಂಡ ಕೂಡಿಕೊಂಡಿದ್ದು, ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಭಾರತೀಯ ಕಾಲಮಾನ ಮಧ್ಯಾಹ್ನ 1.30ರಿಂದ ಆರಂಭವಾಗಲಿದೆ. ಈ ಪಂದ್ಯಗಳನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇನ್ನು ಮೊಬೈನಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
Image Credit: Getty Images
ಇಂಗ್ಲೆಂಡ್ ತಂಡ:
ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಅಟ್ಕಿನ್ಸನ್, ಜೇಕೊಬ್ ಬೆಥೆಲ್, ಹ್ಯಾರಿ ಬ್ರೂಕ್, ಕಾರ್ಸೆ, ಬೆನ್ ಡಕೆಟ್, ಓವರ್ಟನ್, ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.