- Home
- Sports
- Cricket
- Ind vs SA ಗುವಾಹಟಿ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾ ಮಾಸ್ಟರ್ ಪ್ಲಾನ್; ತಂಡದಲ್ಲಿ ಮಹತ್ವದ ಬದಲಾವಣೆ!
Ind vs SA ಗುವಾಹಟಿ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾ ಮಾಸ್ಟರ್ ಪ್ಲಾನ್; ತಂಡದಲ್ಲಿ ಮಹತ್ವದ ಬದಲಾವಣೆ!
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಗುವಾಹಟಿ ಟೆಸ್ಟ್‌ಗೂ ಮುನ್ನ ನಾಯಕ ಶುಭಮನ್ ಗಿಲ್ ಫಿಟ್‌ನೆಸ್ ಬಗ್ಗೆ ಅನುಮಾನ ಮೂಡಿದೆ. ಆಟಗಾರ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಮರಳುತ್ತಿದ್ದಾರೆ. ಸರಣಿ ಸಮಬಲಗೊಳಿಸಲು ಭಾರತಕ್ಕೆ ಎರಡನೇ ಟೆಸ್ಟ್ ನಿರ್ಣಾಯಕವಾಗಿದೆ.

ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡ ಭಾರತ
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿ ಗುವಾಹಟಿಗೆ ತಲುಪಿದೆ. ಮೊದಲ ಟೆಸ್ಟ್ ಸೋತ ಭಾರತಕ್ಕೆ ಸರಣಿ ಸಮಬಲಗೊಳಿಸಲು ಈ ಪಂದ್ಯ ನಿರ್ಣಾಯಕ. ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ 30 ರನ್‌ಗಳ ಜಯ ಸಾಧಿಸಿತ್ತು.
ಶುಭ್‌ಮನ್ ಗಿಲ್ ಫಿಟ್ನೆಸ್ ಮೇಲೆ ಅನುಮಾನ
ಮೊದಲ ಟೆಸ್ಟ್‌ನಲ್ಲಿ ಕುತ್ತಿಗೆ ನೋವಿನಿಂದಾಗಿ ಗಿಲ್ ರಿಟೈರ್ಡ್ ಹರ್ಟ್ ಆಗಿದ್ದರು. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ. ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ, ಸಂಪೂರ್ಣ ಫಿಟ್ ಆಗಿಲ್ಲ ಎಂಬ ಅನುಮಾನವಿದೆ.
ಹೊಸ ಬ್ಯಾಟರ್ ಆಯ್ಕೆ ಮಾಡದ ಆಯ್ಕೆ ಸಮಿತಿ
ಸರಣಿ ನಿರ್ಣಾಯಕ ಹಂತದಲ್ಲಿದ್ದರೂ, ಆಯ್ಕೆ ಸಮಿತಿ ಹೊಸ ಬ್ಯಾಟರ್‌ನನ್ನು ಆಯ್ಕೆ ಮಾಡುವ ಯೋಚನೆಯಲ್ಲಿಲ್ಲ. ಈಗಾಗಲೇ ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್ ಅವರಂತಹ ಮೀಸಲು ಆಟಗಾರರು ತಂಡದಲ್ಲಿದ್ದಾರೆ.
ನಿತೀಶ್ ರೆಡ್ಡಿಗೆ ಬುಲಾವ್
ಇಂಡಿಯಾ ಎ ಏಕದಿನ ಸರಣಿಗೆ ಬಿಡುಗಡೆಯಾಗಿದ್ದ ನಿತೀಶ್ ರೆಡ್ಡಿಯನ್ನು ಮತ್ತೆ ಟೆಸ್ಟ್ ತಂಡಕ್ಕೆ ಕರೆಯಲಾಗಿದೆ. ಗಿಲ್ ಫಿಟ್‌ನೆಸ್ ಬಗ್ಗೆ ಅನಿಶ್ಚಿತತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗಿಲ್ ಅಲಭ್ಯರಾದರೆ ನಿತೀಶ್ ಆಡಬಹುದು.
ಎರಡನೇ ಟೆಸ್ಟ್ ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ
ಭಾರತ ಸದ್ಯ ಸರಣಿಯಲ್ಲಿ 0-1 ರಿಂದ ಹಿನ್ನಡೆಯಲ್ಲಿದೆ. ಗುವಾಹಟಿಯಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿಯಲು ಸಾಧ್ಯವಾಗುತ್ತದೆ.

