- Home
- Sports
- Cricket
- WPL 2026 ಮೆಗಾ ಹರಾಜಿನ ವೇಳಾಪಟ್ಟಿ ಪ್ರಕಟ; ಯಾವಾಗ? ಎಲ್ಲಿ? ಲೈವ್ ಸ್ಟ್ರೀಮಿಂಗ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
WPL 2026 ಮೆಗಾ ಹರಾಜಿನ ವೇಳಾಪಟ್ಟಿ ಪ್ರಕಟ; ಯಾವಾಗ? ಎಲ್ಲಿ? ಲೈವ್ ಸ್ಟ್ರೀಮಿಂಗ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಬೆಂಗಳೂರು: ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ಆರಂಭವಾಗಿವೆ. ಹೀಗಿರುವಾಗಲೇ WPL ಮೆಗಾ ಹರಾಜಿಗೆ ವೇಳಾಪಟ್ಟಿ ಫಿಕ್ಸ್ ಆಗಿದ್ದು, ಇದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

WPL ಹರಾಜಿಗೆ ಕ್ಷಣಗಣನೆ
ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜಿಗೆ ಇನ್ನೊಂದು ವಾರ ಬಾಕಿ ಉಳಿದಿದೆ. ಯಾವ ಆಟಗಾರ್ತಿ ಯಾವ ತಂಡಗಳನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ನವೆಂಬರ್ 27ರಂದು ಹರಾಜು
ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ವೇಳಾಪಟ್ಟಿ ಪ್ರಕಟವಾಗಿದ್ದು, ನವೆಂಬರ್ 27ರಂದು ಮಹಿಳಾ ಐಪಿಎಲ್ ಎಂದೇ ಕರೆಸಿಕೊಳ್ಳುವ WPL ಮೆಗಾ ಹರಾಜು ನಡೆಯಲಿದೆ.
ಪ್ರತಿ ತಂಡ 18 ಆಟಗಾರ್ತಿಯರನ್ನು ಹೊಂದಲು ಅವಕಾಶ
WPL ವೆಬ್‌ಸೈಟ್ ಪ್ರಕಾರ, ಪ್ರತಿ ಫ್ರಾಂಚೈಸಿಯು ಗರಿಷ್ಠ 18 ಆಟಗಾರ್ತಿಯರ ತಂಡವನ್ನು ಕಟ್ಟಲು ಅವಕಾಶವಿದೆ. ಈಗಾಗಲೇ ಎಲ್ಲಾ ಐದು ಫ್ರಾಂಚೈಸಿಗಳು ಮೆಗಾ ಹರಾಜಿಗೂ ಮೊದಲೇ ತಮಗೆ ಬೇಕಾದ ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿವೆ.
ಗರಿಷ್ಠ 73 ಆಟಗಾರ್ತಿಯರನ್ನು ಖರೀದಿಸಲು ಅವಕಾಶ
ಎಲ್ಲಾ 5 WPL ಫ್ರಾಂಚೈಸಿಗಳು 23 ವಿದೇಶಿ ಆಟಗಾರ್ತಿಯರು ಸೇರಿದಂತೆ ಗರಿಷ್ಠ 73 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. ಈ ಪೈಕಿ ಯುಪಿ ವಾರಿಯರ್ಸ್ ತಂಡವು ಗರಿಷ್ಠ ಪರ್ಸ್‌ನೊಂದಿಗೆ ಮೆಗಾ ಹರಾಜಿನಲ್ಲಿ ಭಾಗವಹಿಸಲು ರೆಡಿಯಾಗಿದೆ.
ಯಾವ ತಂಡದ ಪರ್ಸ್‌ನಲ್ಲಿ ಎಷ್ಟು ಹಣವಿದೆ?
ಡೆಲ್ಲಿ ಕ್ಯಾಪಿಟಲ್ಸ್ ಬಳಿ 5.7 ಕೋಟಿ ರುಪಾಯಿ ಪರ್ಸ್ ಇದ್ದರೇ, ಮುಂಬೈ ಇಂಡಿಯನ್ಸ್ ಬಳಿ 5.75 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 6.15 ಕೋಟಿ, ಗುಜರಾತ್ ಜೈಂಟ್ಸ್ ಬಳಿ 9 ಕೋಟಿ ಹಾಗೂ ಯುಪಿ ವಾರಿಯರ್ಸ್ ಬಳಿ 14.5 ಕೋಟಿ ರುಪಾಯಿ ಹಣವಿದೆ.
ಸ್ಟಾರ್ ಸ್ಪೋರ್ಟ್ಸ್-ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ
ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ನವೆಂಬರ್ 27ರಂದು ನವದೆಹಲಿಯಲ್ಲಿ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ಟಿವಿ ಚಾನೆಲ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಮೆಗಾ ಹರಾಜು ವೀಕ್ಷಿಸಬಹುದಾಗಿದೆ.