ಧೋನಿ, ಪಾಂಟಿಂಗ್ ದಾಖಲೆ ಪುಡಿ ಮಾಡಲು ಸಜ್ಜಾದ ವಿರಾಟ್ ಕೊಹ್ಲಿ!
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾಗೆ ಅತ್ಯಂತ ಪ್ರಮುಖವಾಗಿದೆ. ಇತ್ತ ನಾಯಕ ವಿರಾಟ್ ಕೊಹ್ಲಿಗೂ ಈ ಪಂದ್ಯ ಕೆಲ ಸ್ಮರಣೀಯ ನೆನಪು ಕಟ್ಟಿಕೊಡಲಿದೆ. ಕಾರಣ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲ ದಿಗ್ಗಜರ ದಾಖಲೆ ಪುಡಿಗಟ್ಟಲು ಸಜ್ಜಾಗಿದ್ದಾರೆ.
ಅಹಮ್ಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂಲಕ ನಾಯಕ ವಿರಾಟ್ ಕೊಹ್ಲಿ ಧೋನಿ ದಾಖಲೆ ಸರಿಗಟ್ಟಲು ಸಜ್ಜಾಗಿದ್ದಾರೆ. ಗರಿಷ್ಠ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಪಟ್ಟಿಯಲ್ಲಿ ಇದೀಗ ಧೋನಿ ಮೊದಲ ಸ್ಥಾನದಲ್ಲಿದ್ದಾರೆ
4ನೇ ಟೆಸ್ಟ್ ಪಂದ್ಯ ಟೆಸ್ಟ್ ನಾಯಕನಾಗಿ ಕೊಹ್ಲಿಗೆ 60 ಪಂದ್ಯವಾಗಿದೆ. ಈ ಮೂಲಕ ಧೋನಿ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಲಿದ್ದಾರೆ. 60 ಟೆಸ್ಟ್ ಪಂದ್ಯದಲ್ಲಿ ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.
ನಾಯಕನಾಗಿ 12,000 ರನ್ ಪೂರೈಸಲು ಕೊಹ್ಲಿಗೆ ಇನ್ನು 17 ರನ್ ಅವಶ್ಯಕತೆ ಇದೆ. ಈ ಮೂಲಕ ಕೊಹ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಲಿದ್ದಾರೆ. ನಾಯಕನಾಗಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ 15,440 ರನ್ ಹಾಗೂ ಸೌತ್ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ 14,878 ರನ್ ಸಿಡಿಸಿದ್ದಾರೆ.
ನಾಯಕನಾಗಿ ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ ಕೊಹ್ಲಿ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಶತಕ ಸಿಡಿಸದೆ ವರ್ಷಗಳೇ ಉರುಳಿವೆ. ಅಹಮ್ಮದಾಬಾದ್ ಪಂದ್ಯದಲ್ಲಿ ಸೆಂಚುರಿ ಸಿಡಿಸಿದರೆ, ಪಾಂಟಿಂಗ್ ನಾಯಕನಾಗಿ ಗರಿಷ್ಠ ಶತಕ ಸಿಡಿಸಿದ ದಾಖಲೆ ಪುಡಿಮಾಡಲಿದ್ದಾರೆ.
ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರವ 4ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೆ, ನಾಯಕನಾಗಿ ಕೊಹ್ಲಿ 42 ಶತಕ ಪೂರೈಸಿದ ಸಾಧನೆ ಮಾಡಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ದಿಗ್ಗದ ಕ್ಲೈವ್ ಲಾಯ್ಡ್ ಅವರ 36 ಟೆಸ್ಟ್ ಗಲುವಿನ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಗೆಲುವು ಭಾರತ ತಂಡದ ಟೆಸ್ಟ್ ಚಾಂಪಿಯನ್‌ಶಿಪ್ ಅರ್ಹತೆಯನ್ನು ಖಚಿತಪಡಿಸಲಿದೆ. ಹೀಗಾಗಿ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ