T20 World Cup ಟೀಂ ಇಂಡಿಯಾ ಸೆಮೀಸ್ ಸೋಲಿಗೆ ಕಾರಣವೇನು?
ಬೆಂಗಳೂರು(ನ.11): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲೇ ತಮ್ಮ ಅಭಿಯಾನ ಮುಗಿಸಿದೆ. ಇಂಗ್ಲೆಂಡ್ ಎದುರು ಟೀಂ ಇಂಡಿಯಾ 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಟೀಂ ಇಂಡಿಯಾ ಸೋಲಿಗೆ ಕಾರಣವೇನು ಎನ್ನುವುದನ್ನು ನೋಡುವುದಾದರೇ..
1. ಎರಡೂ ಇನ್ನಿಂಗ್ಸ್‌ಗಳ ಪವರ್-ಪ್ಲೇ ಪಂದ್ಯದ ಫಲಿತಾಂಶ ನಿರ್ಧರಿಸಿತು. ಭಾರತ 6 ಓವರಲ್ಲಿ 1 ವಿಕೆಟ್‌ಗೆ 38 ರನ್ ಗಳಿಸಿದರೆ, ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 63 ರನ್ ಚಚ್ಚಿತು.
2. ಭಾರತದ ಅಗ್ರ 3 ಬ್ಯಾಟರ್‌ಗಳಿಂದ ಮೊದಲ 73 ಎಸೆತಗಳಲ್ಲಿ 82 ರನ್ ದಾಖಲಾದರೆ, ಇಂಗ್ಲೆಂಡ್ 73 ಎಸೆತಗಳಲ್ಲಿ 125 ರನ್ ಸಿಡಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
3. ಸೂರ್ಯಕುಮಾರ್ ಯಾದವ್ ವಿರುದ್ಧ ರಶೀದ್‌ರನ್ನು ದಾಳಿಗಿಳಿಸುವ ಪ್ರಯೋಗ ಯಶಸ್ವಿ. ನಿಧಾನಗತಿಯ ಎಸೆತಕ್ಕೆ ಬಲಿಯಾದ ಸೂರ್ಯ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದು ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
4. ಮೊದಲ 15 ಓವರಲ್ಲಿ ಕೇವಲ 2 ಸಿಕ್ಸರ್ ಗಳಿಸಿದ ಭಾರತ. ಪಿಚ್‌ನ ಎರಡೂ ಕಡೆಗಳಲ್ಲಿ ಸಣ್ಣ ಬೌಂಡರಿಗಳಿದ್ದರೂ ಲಾಭವೆತ್ತುವಲ್ಲಿ ವಿಫಲ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಲು ವಿಫಲ
5. ಜೋರ್ಡನ್‌ರ ಯಾರ್ಕರ್‌ಗಳು ಪರಿಣಾಮಕಾರಿ. ನಿರ್ಣಾಯಕ ಹಂತಗಳಲ್ಲಿ ರೋಹಿತ್, ಕೊಹ್ಲಿ ವಿಕೆಟ್ ಕಿತ್ತ ಜೋರ್ಡನ್ ಇಂಗ್ಲೆಂಡ್‌ಗೆ ಮೇಲುಗೈ. ಮಾರ್ಕ್ ವುಡ್ ಅನುಪಸ್ಥಿತಿಯಲ್ಲಿ ಕ್ರಿಸ್ ಜೋರ್ಡನ್ 3 ವಿಕೆಟ್ ಕಬಳಿಸಿ ಮಿಂಚಿದ್ದು, ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.