ವಿಶ್ವಕಪ್ ಲೀಗ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್, ಬೌಲರ್ ಯಾರು? ಭಾರತೀಯ ಆಟಗಾರರ ಸ್ಥಾನದ ಮಾಹಿತಿ ಇಲ್ಲಿದೆ ನೋಡಿ!
ಐಸಿಸಿ ವಿಶ್ವಕಪ್ 2023 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ನವೆಂಬರ್ 15 ರಿಂದ ಸೆಮಿಫೈನಲ್ ಪಂದ್ಯ ಆರಂಭಗೊಳ್ಳುತ್ತಿದೆ. ಆದರೆ, ಅದಕ್ಕೂ ಮೊದಲು ಲೀಗ್ ಹಂತದಲ್ಲಿ ಅತಿಹೆಚ್ಚು ಸ್ಕೋರರ್, ಅತಿಹೆಚ್ಚು ವಿಕೆಟ್, ಅತಿಹೆಚ್ಚು ಸೆಂಚುರಿ ಹೊಡೆದವರಾರು ಎಂಬ ಮಾಹಿತಿ ಇಲ್ಲಿದೆ ನೋಡಿ..
ವಿಶ್ವಕಪ್ ಟೂರ್ನಿಯ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೊಹ್ಲಿ 594 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ 591 ರನ್‌ಗಳ ಮೂಲಕ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ದ್ವಿತೀಯ ಸ್ಥಾನದಲ್ಲಿದ್ದಾರೆ. ನಂತರ ರಚಿನ್ ರವೀಂದ್ರ (565), ರೋಹಿತ್ ಶರ್ಮ (503) ಹಾಗೂ ಡೇವಿಡ್ ವಾರ್ನರ್ (499) ನಂತರ ಸ್ಥಾನದಲ್ಲಿದ್ದಾರೆ.
ಟೂರ್ನಿಯ ಲೀಗ್ ಹಂತದಲ್ಲಿ ಆಸ್ಟ್ರೇಲಿಯಾದ ಆಡಂ ಜಂಪಾ 9 ಪಂದ್ಯಗಳಲ್ಲಿ 22 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಸೆಮೀಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾದ ಮಧುಸಂಕಾ (21) ಇದ್ದಾರೆ. ಇನ್ನು ಭಾರತದ ಜಸ್ಪ್ರೀತ್ ಬುಮ್ರಾ 17 ವಿಕೆಟ್‌ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಲೀಗ್‌ನಲ್ಲಿ ಒಂದು ಪಂದ್ಯದಲ್ಲಿ ಅತಿಹೆಚ್ಚು ರನ್ ಬಾರಿಸಿದವರ ಪೈಕಿ ಗ್ಲೆನ್ ಮ್ಯಾಕ್ಸ್‌ವೆಲ್ 201 ರನ್ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಉಳಿದಂತೆ ಮಿಚೆಲ್ ಮಾರ್ಷ್ 177, ಕ್ವಿಂಟಾನ್ ಡಿಕಾಕ್ 174, ಡೇವಿಡ್ ವಾರ್ನರ್ 163 ಹಾಗೂ ಕಾನ್ವೇ 152 ರನ್ ಅಗ್ರ 5 ಸ್ಥಾನಗಳನ್ನು ಪಡೆದಿದ್ದಾರೆ. ಒಂದು ಪಂದ್ಯದಲ್ಲಿ ಅತಿಹೆಚ್ಚು ರನ್ ಬಾರಿಸಿದವರ ಅಗ್ರ ಐವರ ಪಟ್ಟಿಯಲ್ಲಿ ಭಾರತೀಯರು ಸ್ಥಾನ ಪಡೆದಿಲ್ಲ.
ವಿಶ್ವಕಪ್ ಟೂರ್ನಿಯ ಲೀಗ್‌ನಲ್ಲಿ ಅತಿಹೆಚ್ಚು ಶತಕಗಳನ್ನು ಬಾರಿಸಿದವರ ಪೈಕಿ ಕ್ವಿಂಟನ್ ಡಿಕಾಕ್ 4 ಶತಕ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ನಂತರ ಸ್ಥಾನದಲ್ಲಿ ರಚಿನ್ ರವೀಂದ್ರ 3, ಡೇವಿಡ್ ವಾರ್ನರ್ 2, ಮ್ಯಾಕ್ಸ್‌ವೆಲ್ 2, ವಾನ್‌ಡೆರ್ ಸನ್ 2, ವಿರಾಟ್ ಕೊಹ್ಲಿ 2 ಶತಕ ಬಾರಿಸಿ ನಂತರ ಸ್ಥಾನದಲ್ಲಿದ್ದಾರೆ.
ಮತ್ತೊಂದೆಡೆ ವಿಶ್ವಕಪ್ ಲೀಗ್‌ನಲ್ಲಿ ಬೆಸ್ಟ್ ಬ್ಯಾಟಿಂಗ್ ಸರಾಸರಿ ಕಾಯ್ದುಕೊಂಡ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರ ಬ್ಯಾಟಿಂಗ್ ಸರಾಸರಿ 99 ಇದೆ. ನಂತರ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್ 93, ಗ್ಲೆನ್ ಮ್ಯಾಕ್ಸ್ 73 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ವಿಶ್ವಕಪ್ ಟೂರ್ನಿಯ ಲೀಗ್‌ನಲ್ಲಿ ಮೊದಲೆರಡು ಪಂದ್ಯಗಳಿಂದ ಹೊರಗಿಡಲಾಗಿದ್ದ ಮೊಹಮ್ಮದ್ ಶಮಿ ಅವರು ಒಂದು ಪಂದ್ಯದಲ್ಲಿ 18 ರನ್ ನೀಡಿ 5 ವಿಕೆಟ್ ಪಡೆದು ಬೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ನಂತರ ಸ್ಥಾನದಲ್ಲಿ ರವೀಂದ್ರ ಜಡೇಜಾ 33 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.