Happy Birthday SKY: ಬರ್ತ್ ಡೇ ಬಾಯ್ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು
ಬೆಂಗಳೂರು: ಭಾರತದ ಮಿಸ್ಟರ್ 360 ಖ್ಯಾತಿಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಸೆಪ್ಟೆಂಬರ್ 14ರಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೂರ್ಯ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಈ ಸಂದರ್ಭದಲ್ಲಿ, ಸೂರ್ಕುಮಾರ್ ಯಾದವ್ ಅವರ ಅಪರೂಪದ ರೆಕಾರ್ಡ್, ಹಾಗೂ ವೈಯುಕ್ತಿಕ ಬದುಕಿನ ಲವ್ ಸ್ಟೋರಿಯನ್ನು ನೋಡೋಣ ಬನ್ನಿ.
33 ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್:
ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಗುರುವಾರವಾದ ಇಂದು 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸೂರ್ಯ ಸದ್ಯ ಐಸಿಸಿ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಆಟಗಾರ ಎನಿಸಿಕೊಂಡಿದ್ದಾರೆ
ಏಷ್ಯಾಕಪ್ ಹಾಗೂ ವಿಶ್ವಕಪ್ ತಂಡದಲ್ಲಿ ಸ್ಥಾನ:
ಸೂರ್ಯಕುಮಾರ್ ಯಾದವ್ ಸದ್ಯ ಲಂಕಾದಲ್ಲಿ ಏಷ್ಯಾಕಪ್ ಆಡುತ್ತಿರುವ ಭಾರತ ತಂಡದಲ್ಲಿದ್ದಾರೆ. ಆದರೆ ಇದುವರೆಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನು ಸೂರ್ಯ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತದ 15 ಆಟಗಾರರ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
2023ರ ಐಪಿಎಲ್‌ನಲ್ಲಿ 200+ ಸ್ಟ್ರೈಕ್‌ರೇಟ್‌ನಲ್ಲಿ 4 ಅರ್ಧಶತಕ ಚಚ್ಚಿದ್ದ ಸೂರ್ಯ:
ಐಪಿಎಲ್‌ನ ಆವೃತ್ತಿಯೊಂದರಲ್ಲಿ 200+ ಸ್ಟ್ರೈಕ್‌ರೇಟ್‌ನಲ್ಲಿ 4 ಅರ್ಧಶತಕ ಚಚ್ಚಿದ ಏಕೈಕ ಬ್ಯಾಟರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯನಿಂದ ಈ ಪ್ರದರ್ಶನ ಮೂಡಿ ಬಂದಿತ್ತು.
ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿದ ಆರಂಭಿಕನಲ್ಲದ ಏಕೈಕ ಬ್ಯಾಟರ್
ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3 ಶತಕ ಬಾರಿಸಿದ್ದು, ಈ ಸಾಧನೆ ಮಾಡಿದ ಏಕೈಕ ಆರಂಭಿಕನಲ್ಲದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ವರ್ಷವೊಂದರಲ್ಲಿ 1000+ ಅಂತಾರಾಷ್ಟ್ರೀಯ ರನ್ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್
2022ರಲ್ಲಿ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000+ ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.
ಸೂರ್ಯ-ದೇವಿಶಾ ಲವ್ ಸ್ಟೋರಿ:
ಕಾಲೇಜು ಗೆಳತಿ ದೇವಿಶಾ ಶೆಟ್ಟಿ ಈಗ ಸೂರ್ಯಕುಮಾರ್ ಯಾದವ್ ಮನೆ-ಮನದೊಡತಿ. ಸೂರ್ಯ-ದೇವಿಶಾ ಜುಲೈ 7, 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.