Happy Birthday Shafali Verma: 'ಲೇಡಿ ಸೆಹ್ವಾಗ್' ಶೆಫಾಲಿ ವರ್ಮಾಗಿಂದು ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ (Indian Women's Cricket Team) ಸ್ಪೋಟಕ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ(Shafali Verma) ಶುಕ್ರವಾರ(ಜ.28) ತಮ್ಮ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಶಫಾಲಿ ವರ್ಮಾ ಅವರ ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಕುರಿತಾದ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
ಶಫಾಲಿ ವರ್ಮಾ ಜನವರಿ 28, 2004ರಲ್ಲಿ ಹರ್ಯಾಣದ ರೋಹ್ಟಕ್‌ನಲ್ಲಿ ಜನಿಸಿದರು. ಕೇವಲ 15 ವರ್ಷದವರಾಗಿದ್ದಾಗಲೇ ಶಫಾಲಿ ವರ್ಮಾ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದರು.
ಶಫಾಲಿ ವರ್ಮಾ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಲೇಡಿ ಸೆಹ್ವಾಗ್ ಎಂದು ಗುರುತಿಸಿಕೊಂಡಿದ್ದಾರೆ. ಮೈದಾನದಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಎದುರಾಳಿ ಬೌಲರ್‌ಗಳನ್ನು ತಬ್ಬಿಬ್ಬು ಮಾಡುವುದು ಸಾಮಾನ್ಯ ಎನಿಸಿದೆ.
ಶಫಾಲಿ ವರ್ಮಾ 9 ವರ್ಷದವರಾಗಿದ್ದಾಗ(ನವೆಂಬರ್ 2013) ಡೆಹಲಿಯ ಸಮೀಪದಲ್ಲಿರುವ ರೋಹ್ಟಕ್‌ನಲ್ಲಿ ತಮ್ಮ ತಂದೆಯ ಜತೆ ಸಚಿನ್ ತೆಂಡುಲ್ಕರ್ ಆಡಿದ ಕೊನೆಯ ರಣಜಿ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸಿದ್ದರು. ಸಚಿನ್ ಮುಂಬೈ ತಂಡಕ್ಕೆ ಗೆಲುವು ತಂದುಕೊಟ್ಟ ರೀತಿಯಿಂದ ಪ್ರಭಾವಿತರಾಗಿ ಕ್ರಿಕೆಟರ್ ಆಗಲು ಶಫಾಲಿ ಮುಂದಾದರು.
ಶಫಾಲಿ ವರ್ಮಾ ತಮ್ಮ ಅಂತಾರಾಷ್ಟ್ರೀಯ ಪಾದಾರ್ಪಣೆ ಪಂದ್ಯದಲ್ಲೇ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ವೆಸ್ಟ್ ಇಂಡೀಸ್ ವಿರುದ್ದ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಮೊದಲ ಪಂದ್ಯದಲ್ಲೇ ಶಫಾಲಿ 49 ಎಸೆತಗಳಲ್ಲಿ 73 ರನ್ ಬಾರಿಸಿದ್ದರು.
ಶಫಾಲಿ ವರ್ಮಾ 30 ವರ್ಷಗಳಿಂದ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕುವಲ್ಲಿ ಸಹ ಯಶಸ್ವಿಯಾಗಿದ್ದಾರೆ. ಶಫಾಲಿ ವರ್ಮಾ 15 ವರ್ಷ 285ನೇ ದಿನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ್ದರು. ಇನ್ನು ಸಚಿನ್ 16 ವರ್ಷ 214 ದಿನಗಳಿದ್ದಾಗ ಮೊದಲ ಶತಕ ಬಾರಿಸಿದ್ದರು.
ಶಫಾಲಿ ವರ್ಮಾ ಸೀಮಿತ ಓವರ್‌ಗಳ ಕ್ರಿಕೆಟ್ ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲೂ ಮಿಂಚಿನ ಪ್ರದರ್ಶನ ತೋರಿದ್ದಾರೆ. ಇದುವರೆಗೂ 4 ಟೆಸ್ಟ್ ಪಂದ್ಯವನ್ನಾಡಿರುವ ಶಫಾಲಿ ವರ್ಮಾ ಒಟ್ಟು 242 ರನ್ ಬಾರಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳಿ ಸೇರಿವೆ.
ಲೀಲಾಜಾಲವಾಗಿ ಸಿಕ್ಸರ್ ಬಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಶಫಾಲಿ ವರ್ಮಾ, ಇದುವರೆಗೂ 28 ಪಂದ್ಯಗಳನ್ನಾಡಿ 687 ರನ್ ಸಿಡಿಸಿದ್ದಾರೆ. ಇದರಲ್ಲಿ ವಿಶೇಷವೆಂದರೆ, ಶಫಾಲಿ ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ 33 ಸಿಕ್ಸರ್ ಚಚ್ಚಿದ್ದಾರೆ.