MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕುಟುಂಬ ತನಗಾಗಿ ಮಾಡಿದ ತ್ಯಾಗಕ್ಕೆ IPL 2026 ಟೂರ್ನಿಯಿಂದ ಬಂದ ₹2.60 ಕೋಟಿ ಹಣದಲ್ಲಿ ಮನೆಯ ಸಾಲ ತೀರಿಸಿದ ಈ ಕ್ರಿಕೆಟಿಗ!

ಕುಟುಂಬ ತನಗಾಗಿ ಮಾಡಿದ ತ್ಯಾಗಕ್ಕೆ IPL 2026 ಟೂರ್ನಿಯಿಂದ ಬಂದ ₹2.60 ಕೋಟಿ ಹಣದಲ್ಲಿ ಮನೆಯ ಸಾಲ ತೀರಿಸಿದ ಈ ಕ್ರಿಕೆಟಿಗ!

Mukul Chaudhary Family Debt Repaid 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೊಮ್ಮೆ ಯುವ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಿದೆ. ಈ ಪೈಕಿ ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರನೊಬ್ಬ, ತಮ್ಮ ಕುಟುಂಬ ತನಗಾಗಿ ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ಕುಟುಂಬದ ಸಾಲ ಚುಕ್ತಾ ಮಾಡಿದ್ದಾರೆ. 

2 Min read
Author : Naveen Kodase
Published : Jun 03 2026, 03:19 PM IST
Share this Photo Gallery
  • FB
  • TW
  • Linkdin
  • Whatsapp
16
ಮುಕುಲ್ ಚೌಧರಿ ಬದುಕು ಬದಲಿಸಿದ ಐಪಿಎಲ್
Image Credit : Social Media

ಮುಕುಲ್ ಚೌಧರಿ ಬದುಕು ಬದಲಿಸಿದ ಐಪಿಎಲ್

ಅದೆಷ್ಟೋ ಪ್ರತಿಭಾನ್ವಿತ ಕ್ರಿಕೆಟಿಗರ ಪಾಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅದೃಷ್ಟದ ಬಾಗಿಲು ತೆರೆಯುವಂತೆ ಮಾಡಿದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುಕುಲ್ ಚೌಧರಿ ಕೂಡಾ ಸಂಕಷ್ಟದಲ್ಲಿದ್ದ ತಮ್ಮ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಮುಕುಲ್ ಚೌಧರಿಯನ್ನು 2.60 ಕೋಟಿ ರುಪಾಯಿಗೆ ಖರೀದಿಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮುಕುಲ್ ಚೌಧರಿ ಕ್ರಿಕೆಟಿಗರನ್ನಾಗಿ ಮಾಡಲು ತ್ಯಾಗ ಮಾಡಿದ ಕುಟುಂಬ
Image Credit : Social Media

ಮುಕುಲ್ ಚೌಧರಿ ಕ್ರಿಕೆಟಿಗರನ್ನಾಗಿ ಮಾಡಲು ತ್ಯಾಗ ಮಾಡಿದ ಕುಟುಂಬ

ಮುಕುಲ್ ಚೌಧರಿಯನ್ನು ಶತಾಯಗತಾಯ ಕ್ರಿಕೆಟಿಗರನ್ನಾಗಿ ಮಾಡಲೇಬೇಕೆಂದು ಅವರ ಕುಟುಂಬದವರು ಇದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದರು. ಇನ್ನು ಮುಕುಲ್ ಕ್ರಿಕೆಟ್ ಬೆಳವಣಿಗೆಗೆ ಅವರ ತಾತಾ ಕೂಡಾ ದೊಡ್ಡ ಮಟ್ಟದ ಹಣಕಾಸಿನ ಸಹಾಯ ಮಾಡಿದ್ದರು. ಇದಷ್ಟು ಸಾಕಾಗದಿದ್ದಾಗ ಅವರ ಚಿಕ್ಕಪ್ಪನಿಂದಲೂ ಸಾಲವನ್ನು ಪಡೆದಿದ್ದರು. ಇದಷ್ಟೇ ಅಲ್ಲದೇ ಕ್ರಿಕೆಟ್ ತರಬೇತಿ ಇನ್ನಿತರ ಖರ್ಚುಗಳಿಗಾಗಿ ಮುಕುಲ್ ಚೌಧರಿ ಬ್ಯಾಂಕ್‌ನಲ್ಲಿಯೂ ಸಾಲ ಮಾಡಿದ್ದರು.

Related Articles

Related image1
IPL 2026 ಟೂರ್ನಿಯ ಸರ್ವಶ್ರೇಷ್ಠ ತಂಡ ಪ್ರಕಟ; ಸಾಯಿ ಸುದರ್ಶನ್, ಶುಭ್‌ಮನ್ ಗಿಲ್‌ಗಿಲ್ಲ ಸ್ಥಾನ!
Related image2
IPL 2026 ಟೂರ್ನಿಯಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್‌ಗಳಿವರು! ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ
36
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮುಕುಲ್ ಚೌಧರಿ ಕುಟುಂಬ
Image Credit : ANI

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮುಕುಲ್ ಚೌಧರಿ ಕುಟುಂಬ

ಹೀಗಾಗಿ ಮುಕುಲ್ ಚೌಧರಿ ಕುಟುಂಬದವರು ಒಂದು ರೀತಿ ಬೀದಿಗೆ ಬಂದಂತೆ ಆಗಿದ್ದರು. ಪ್ರತಿಬಾರಿಯು ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಶಿಫ್ಟ್ ಆಗಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಇಷ್ಟೆಲ್ಲ ಸಂಕಷ್ಟದ ಹೊರತಾಗಿಯೂ ಮುಕುಲ್ ಚೌಧರಿ, ಕ್ರಿಕೆಟಿಗನಾಗುವ ಸಂಕಲ್ಪದಿಂದ ಕದಲಲಿಲ್ಲ.

46
ಐಪಿಎಲ್ ಹರಾಜಿನಲ್ಲಿ ಮುಕುಲ್ ಚೌಧರಿಗೆ ಜಾಕ್‌ಪಾಟ್
Image Credit : ANI

ಐಪಿಎಲ್ ಹರಾಜಿನಲ್ಲಿ ಮುಕುಲ್ ಚೌಧರಿಗೆ ಜಾಕ್‌ಪಾಟ್

ಕಡೆಗೂ ಕಳೆದ ವರ್ಷ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಮುಕುಲ್ ಚೌಧರಿಯವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 2.60 ಕೋಟಿ ರುಪಾಯಿ ಖರೀದಿಸಿತು. ಇದು ಮುಕುಲ್ ಚೌಧರಿಯ ಬದುಕು ಬದಲಿಸುವಂತೆ ಮಾಡಿತು.

56
ಕೆಕೆಆರ್ ಎದುರು ಅಬ್ಬರದ ಪ್ರದರ್ಶನ ತೋರಿ ಲಖನೌ ತಂಡ ಗೆಲ್ಲಿಸಿದ ಮುಕುಲ್ ಚೌಧರಿ
Image Credit : X@IPL

ಕೆಕೆಆರ್ ಎದುರು ಅಬ್ಬರದ ಪ್ರದರ್ಶನ ತೋರಿ ಲಖನೌ ತಂಡ ಗೆಲ್ಲಿಸಿದ ಮುಕುಲ್ ಚೌಧರಿ

ಮುಕುಲ್ ಚೌಧರಿ ಕೆಕೆಆರ್ ಎದುರಿನ ಪಾದಾರ್ಪಣೆ ಪಂದ್ಯದಲ್ಲಿ ಲಖನೌ ಕೊನೆಯ 3 ಓವರ್‌ಗಳಲ್ಲಿ ಗೆಲ್ಲಲು ಬರೋಬ್ಬರಿ 43 ರನ್‌ಗಳ ಅಗತ್ಯವಿತ್ತು. ಈ ವೇಳೆ ಬ್ಯಾಟಿಂಗ್ ಮಾಡಲಿಳಿದ ಮುಕುಲ್ ಚೌಧರಿ ಕೊನೆಯ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಜತೆಗೆ ಫ್ರಾಂಚೈಸಿ ತಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳುವಲ್ಲೂ ಯಶಸ್ವಿಯಾಗಿದ್ದರು. ಆ ಪಂದ್ಯದಲ್ಲಿ ಮುಕುಲ್ 27 ಎಸೆತಗಳಲ್ಲಿ 57 ರನ್ ಚಚ್ಚಿದ್ದರು.

66
ಕುಟುಂಬದ ಸಾಲ ತೀರಿಸಿದ ಮುಕುಲ್ ಚೌಧರಿ
Image Credit : Social Media

ಕುಟುಂಬದ ಸಾಲ ತೀರಿಸಿದ ಮುಕುಲ್ ಚೌಧರಿ

ಇದೀಗ ಐಪಿಎಲ್ ಮುಕ್ತಾಯದ ಬಳಿಕ ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದ ಬಗ್ಗೆ ಮಾತನಾಡಿರುವ ಮುಕುಲ್, 'ಈಗ ನಮ್ಮ ಎಲ್ಲಾ ಸಾಲವೂ ತೀರಿಸಿದ್ದೇನೆ. ನಾನು ನನ್ನ ಕುಟುಂಬಕ್ಕೆ ನೆರವಾಗಿದ್ದರ ಬಗ್ಗೆ ಖುಷಿಯಿದೆ. ಐಪಿಎಲ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಲಕ್ನೋ ಸೂಪರ್ ಜೈಂಟ್ಸ್
Latest Videos
Recommended Stories
Recommended image1
ಸತತ 2ನೇ ಐಪಿಎಲ್‌ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿಗೆ ಶಾಕ್‌, ನಿವೃತ್ತಿ ಪ್ರಕಟಿಸಿದ ಸ್ಟಾರ್‌
Recommended image2
'ವಿರಾಟ್ ಕೊಹ್ಲಿಯಲ್ಲ...!': ಅನುಷ್ಕಾ ಶರ್ಮಾ ಮೊಬೈಲ್ ಸ್ಕ್ರೀನ್‌ ವಾಲ್‌ ಪೇಪರ್‌ ಫೋಟೋ ವೈರಲ್..!
Recommended image3
ರೋ-ಕೊ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರೋಬ್ಬರಿ 7 ವರ್ಷಗಳ ನಂತರ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ ಟೀಂ ಇಂಡಿಯಾ!
Related Stories
Recommended image1
IPL 2026 ಟೂರ್ನಿಯ ಸರ್ವಶ್ರೇಷ್ಠ ತಂಡ ಪ್ರಕಟ; ಸಾಯಿ ಸುದರ್ಶನ್, ಶುಭ್‌ಮನ್ ಗಿಲ್‌ಗಿಲ್ಲ ಸ್ಥಾನ!
Recommended image2
IPL 2026 ಟೂರ್ನಿಯಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್‌ಗಳಿವರು! ವೈಭವ್ ಸೂರ್ಯವಂಶಿಗಿಲ್ಲ ಸ್ಥಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved