ಯುವಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್: ಮತ್ತೆ ಮೈದಾನಕ್ಕಿಳಿಯಲು ಸಿಕ್ಸರ್‌ ಕಿಂಗ್ ರೆಡಿ..!

First Published 9, Sep 2020, 11:20 AM

ಮೆಲ್ಬರ್ನ್‌: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌, ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಇದೀಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಉತ್ಸುಕರಾಗಿದ್ದಾರೆ. ಟೀಂ ಇಂಡಿಯಾ 2 ವಿಶ್ವಕಪ್(ಟಿ20&ಏಕದಿನ) ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಯುವಿ ಕೆನಡಾದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಇದೀಗ ಯುವಿ ಆಸ್ಟ್ರೇಲಿಯಾದ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ತಯಾರಿ ನಡೆಸುತ್ತಿದ್ದಾರೆ.

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮತ್ತೆ ಮೈದಾನಕ್ಕಿಳಿಯಲು ಚಿಂತನೆ ನಡೆಸುತ್ತಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಯುವರಾಜ್‌ ಸಿಂಗ್ ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಪಡೆದಿರುವ ಯುವರಾಜ್‌ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಸಿಸಿಐನ ಅನುಮತಿ ಪಡೆಯಬೇಕಿಲ್ಲ.

ಹೀಗಾಗಿ, ಕ್ರಿಕೆಟ್‌ ಆಸ್ಪ್ರೇಲಿಯಾ ಸಹ ಯುವಿಯನ್ನು ಲೀಗ್‌ಗೆ ಸೇರಿಸಿಕೊಳ್ಳಲು ಉತ್ಸುಕಗೊಂಡಿದ್ದು, ಅವರಿಗೆ ಯಾವ ತಂಡದಲ್ಲಿ ಜಾಗ ಮಾಡುವುದು ಎನ್ನುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಡಿಸೆಂಬರ್ 3ರಿಂದ ಟೂರ್ನಿ ಆರಂಭಗೊಳ್ಳಲಿದೆ. ಈ ವರೆಗೂ ಬಿಗ್‌ಬ್ಯಾಶ್‌ನಲ್ಲಿ ಭಾರತದ ಯಾವುದೇ ಆಟಗಾರ ಪಾಲ್ಗೊಂಡಿಲ್ಲ. ಯುವಿ ಒಂದು ವೇಳೆ ಈ ಟೂರ್ನಿಯಲ್ಲಿ ಪಾಲ್ಗೊಂಡರೆ ಹೊಸ ಇತಿಹಾಸ ನಿರ್ಮಾಣವಾದಂತೆ ಆಗಲಿದೆ.

ಯುವರಾಜ್ ಸಿಂಗ್ ಟೀಂ ಇಂಡಿಯಾ ಪರ 304 ಏಕದಿನ ಪಂದ್ಯಗಳನ್ನಾಡಿ 8701 ರನ್ ಹಾಗೂ 111 ಉಪಯುಕ್ತ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದಷ್ಟೇ ಅಲ್ಲದೇ ಭಾರತ ಪರ 40 ಟೆಸ್ಟ್ ಹಾಗೂ 58 ಟಿ20 ಪಂದ್ಯಗಳನ್ನು ಆಡಿ ಯುವಿ ಸೈ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯ ಶೇನ್ ವಾಟ್ಸನ್, ಭಾರತೀಯ ಕ್ರಿಕೆಟಿಗರು ಬಿಗ್‌ಬ್ಯಾಶ್ ಟೂರ್ನಿ ಆಡಿದರೆ ಅದ್ಭುತವಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

38 ವರ್ಷದ ಯುವರಾಜ್‌ ಸಿಂಗ್ ಕಳೆದ ವರ್ಷ ಕೆನಡಾದ ಗ್ಲೋಬಲ್‌ ಟಿ20 ಟೂರ್ನಿಯಲ್ಲಿ ಆಡಿದ್ದರು.

loader