ವಾಸೀಂ ಜಾಫರ್ ಕನಸಿನ ಏಕದಿನ ತಂಡ ಪ್ರಕಟ, ಧೋನಿಗೆ ನಾಯಕ ಪಟ್ಟ.!

First Published 4, Apr 2020, 6:33 PM

ಭಾರತ ದೇಸಿ ಕ್ರಿಕೆಟ್ ಲೆಜೆಂಡ್ ವಾಸೀಂ ಜಾಫರ್ ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಇದೀಗ ತಮ್ಮ ಕನಸಿಕ ಸಾರ್ವಕಾಲಿಕ ಏಕದಿನ ತಂಡವನ್ನು ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ.
ವಾಸೀಂ ಜಾಫರ್ ಸಾರ್ವಕಾಲಿಕ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಅಚ್ಚರಿಯ ರೀತಿಯಲ್ಲಿ ಜಾಫರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಜಾಫರ್‌ರೊಂದಿಗೆ ಇನಿಂಗ್ಸ್ ಆರಂಭಿಸುತ್ತಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್‌ಗೆ ಜಾಫರ್ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆಸೀಸ್ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ವಾಸೀಂ ಜಾಫರ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ಸಚಿನ್ ತೆಂಡುಲ್ಕರ್: ಕ್ರಿಕೆಟ್ ದಂತಕಥೆ, ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್

2. ರೋಹಿತ್ ಶರ್ಮಾ: ಆಧುನಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ರೋಹಿತ್ ಹೆಸರಿನಲ್ಲಿದೆ.

3. ವೀವ್ ರಿಚರ್ಡ್ಸ್: ಕೆರಿಬಿಯನ್ ಲೆಜೆಂಡ್, ಸ್ಪೋಟಕ ಬ್ಯಾಟಿಂಗ್ ಮೂಲಕ ರಂಜಿಸುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಆಟಗಾರ

4. ವಿರಾಟ್ ಕೊಹ್ಲಿ: ಆಧುನಿಕ ಕ್ರಿಕೆಟ್‌ನ ರನ್ ಮಷೀನ್. ಪ್ರಸ್ತುತ ಏಕದಿನ ಕ್ರಿಕೆಟ್‌ನ ನಂ.1 ಬ್ಯಾಟ್ಸ್‌ಮನ್

5. ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಖ್ಯಾತಿಯ ಸೂಪರ್‌ಸ್ಟಾರ್ ಕ್ರಿಕೆಟಿಗ. ಜಗತ್ತಿನಾದ್ಯಂತ ತನ್ನದೇ ಅಭಿಮಾನಿ ಬಳಗ ಹೊಂದಿರುವ ಬ್ಯಾಟ್ಸ್‌ಮನ್

6. ಬೆನ್ ಸ್ಟೋಕ್ಸ್: ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರ

7. ಎಂ ಎಸ್ ಧೋನಿ(ನಾಯಕ&ವಿಕೆಟ್ ಕೀಪರ್): ಕೂಲ್ ಕ್ಯಾಪ್ಟನ್, ಚಾಣಾಕ್ಷ ವಿಕೆಟ್ ಕೀಪರ್, ಗ್ರೇಟ್ ಫಿನೀಶರ್

8.ವಾಸೀಂ ಅಕ್ರಂ: ಪಾಕ್ ಯಾರ್ಕರ್ ಸ್ಪೆಷಲಿಸ್ಟ್, 90ರ ದಶಕವನ್ನಾಳಿದ ಮಾರಕ ವೇಗಿ

9. ಶೇನ್ ವಾರ್ನ್/ಸಕ್ಲೈನ್ ಮುಷ್ತಾಕ್: ವಾರ್ನರ್ ಹಾಗೂ ಮುಷ್ತಾಕ್ 90ರ ದಶಕ ಕಂಡ ಪ್ರಚಂಡ ಸ್ಪಿನ್ನರ್‌ಗಳು

10. ಜೊಯಲ್ ಗಾರ್ನರ್: ಕೆರಿಬಿಯನ್ ಮಾರಕ ವೇಗಿ, 1979ರ ವಿಶ್ವಕಪ್ ಹೀರೊ, 2 ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಡೆಡ್ಲಿಯೆಸ್ಟ್ ಬೌಲರ್

11. ಗ್ಲೆನ್ ಮೆಗ್ರಾಥ್: ಆಸೀಸ್ ದಿಗ್ಗಜ ವೇಗಿ, ಕರಾರುವಕ್ಕಾದ ದಾಳಿಗೆ ಹೆಸರುವಾಸಿಯಾದ ವೇಗಿ

12. ರಿಕಿ ಪಾಂಟಿಂಗ್: ಆಸೀಸ್ ಮಾಜಿ ನಾಯಕ, ದಶಕಗಳ ಕಾಲ ಕಾಂಗರೂ ಪಡೆಯ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡ ಕ್ರಿಕೆಟಿಗ

loader