- Home
- Sports
- Cricket
- ಸೂರ್ಯಕುಮಾರ್, ಸ್ಯಾಮ್ಸನ್ ಕೈಬಿಟ್ಟವರಿಗೆ ಗಂಭೀರ್ ತೆಗೆಯಲು ಆಗಲಿಲ್ಲವೇ, Ex ಆಯ್ಕೆ ಸಮಿತಿ ಮುಖ್ಯಸ್ಥ ಗರಂ
ಸೂರ್ಯಕುಮಾರ್, ಸ್ಯಾಮ್ಸನ್ ಕೈಬಿಟ್ಟವರಿಗೆ ಗಂಭೀರ್ ತೆಗೆಯಲು ಆಗಲಿಲ್ಲವೇ, Ex ಆಯ್ಕೆ ಸಮಿತಿ ಮುಖ್ಯಸ್ಥ ಗರಂ
ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಕೈಬಿಡುವ ಮಹತ್ ನಿರ್ಧಾರ ಮಾಡಿದವರಿಗೆ ಕೋಚ್ ಗೌತಮ್ ಗಂಭೀರ್ ತೆಗೆಯಲು ಆಗಲಿಲ್ಲವೇ ಎಂದು ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಕ್ರಿಸ್ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ಗೌತಮ್ ಗಂಭೀರ್, ಟೀಂ ಇಂಡಿಯಾ ವಿರುದ್ಧ ವಾಗ್ದಾಳಿ
ಇಂಗ್ಲೆಂಡ್ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ 125 ರನ್ ಸೋಲು ಟೀಂ ಇಂಡಿಯಾ ಸಂಕಷ್ಟ ಹೆಚ್ಚಿಸಿದೆ. ತಂಡದ ವಿರುದ್ದ, ಪ್ರದರ್ಶನ ವಿರುದ್ದ ಟೀಕೆ ಕೇಳಿ ಬರುತ್ತಿದೆ. ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್, ಟೀಂ ಇಂಡಿಯಾ ಕಳಪೆ ಪದರ್ಶನ, ನಾಯಕ ಶ್ರೇಯಸ್ ಅಯ್ಯರ್, ಕೋಚ್ ಗೌತಮ್ ಗಂಭೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಡೂಲ್‌ನ್ಯೂಸ್ ವರದಿ ಮಾಡಿದೆ.
ಸೂರ್ಯಕುಮಾರ್, ಸಂಜು ಸ್ಯಾಮ್ಸನ್ ಕೈಬಿಡಲು ಆಗಿದೆ
ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಕೈಬಿಡಲಾಯಿತು, ಸಂಜು ಸ್ಯಾಮ್ಸ್ ಪ್ಲೇಯಿಂಗ್ 11ನಿಂದ ಹೊರಗುಳಿಯಲು ಸೂಚಿಸಲಾಯಿತು. ಇಷ್ಟಾಗಿ ಸಾಧಿಸಿದ್ದೇನು? ಐರ್ಲೆಂಡ್ ವಿರುದ್ಧ ಸರಣಿ ಸೋಲು, ಇಂಗ್ಲೆಂಡ್ ವಿರುದ್ಧ ಸರಣಿ ಸೋಲು. ಪ್ರಮುಖರನ್ನು ಕೈಬಿಡುವ ನಿರ್ಧಾರ ಮಾಡಿದವರಿಗೆ ಕೋಚ್ ಗೌತಮ್ ಗಂಭೀರ್ ಕೈಬಿಡಲು ಸಾಧ್ಯವಾಗಲಿಲ್ಲವೇ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಪ್ರಶ್ನಿಸಿದ್ದಾರೆ.
ಕೋಚ್ ಗಂಭೀರ್ ಕಿತ್ತು ಹಾಕಿ
ಕೋಚ್ ಗಂಭೀರ್, ಟೀಂ ಮ್ಯಾನೇಜ್ಮೆಂಟ್ ತಂಡದ ಆಯ್ಕೆಗೆ ಭಿನ್ನ ಮಾನದಂಡ ಪರಿಗಣಿಸಿದ್ದಾರೆ. ಕೆವಲ ಒಂದೆರೆಡು ಪಂದ್ಯದಲ್ಲಿ ವಿಫಲರಾದರೆ ಬದಲಾಯಿಸುತ್ತಾರೆ. ಸೂರ್ಯಕುಮಾರ್ ಮೂರು ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆಲ್ಲಿಸಿದ್ದರು. ಸಂಜು ಶತಕ ಸಿಡಿಸಿ ಅಬ್ಬರಿಸುತ್ತಿದ್ದರು. ಇವರಿಬ್ಬರನ್ನು ಕೈಬಿಡಲಾಗಿದೆ. ಇದರ ಬದಲು ಕೋಚ್ ಗೌತಮ್ ಗಂಭೀರ್ ಕಿತ್ತುಹಾಕಬೇಕು ಎಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.
ಬ್ಯಾಟಿಂಗ್ ಆರ್ಡರ್ ಬದಲಾವಣೆ ಯಾಕೆ
ಪದೇ ಪದೇ ತಂಡದ ಬ್ಯಾಟಿಂಗ್ ಆರ್ಡರ್ ಬದಲಾಯಿಸುತ್ತಿದ್ದಾರೆ.ಇದರಿಂದ ಆಟಗಾರರಿಗೂ ಸಮಸ್ಯೆಯಾಗುತ್ತಿದೆ. ತಂಡದ ಆಯ್ಕೆಯಲ್ಲಿ ಆಗುತ್ತಿರುವ ಗೊಂದಲ, ಭಿನ್ನ ಮಾನದಂಡಗಳೇ ಈ ಸಮಸ್ಯೆಗೆ ಕಾರಣವಾಗಿದೆ. ಸಂಜು ಸ್ಯಾಮ್ಸನ್ ಹೊರಗಿಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಯಿತು. ಪರಿಣಾಮ ಏನಾಯಿತು ಏಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.
ಆಟಗಾರರ ಬಲಿಪಶು ಮಾಡಬೇಡಿ
ತಂಡದ ಕಳಪೆ ಪ್ರದರ್ಶನ, ಸೋಲಿಗೆ ಆಟಗಾರರ ಬಲಿಪಶು ಮಾಡಬೇಡಿ. ಇದಕ್ಕೆ ಕೋಚ್ ಗೌತಮ್ ಗಂಭೀರ್ ನಿರ್ಧಾರಗಳೇ ಮುಖ್ಯ ಕಾರಣ ಎಂದಿದ್ದಾರೆ. ಆಟಗಾರರ ಬದಲಿಸುವ ಬದಲು ಕೋಚ್ ಬದಲಿಸುವುದೇ ಉತ್ತಮ. ಶ್ರೀಕಾಂತ್ ಮಾತುಗಳು ಬಿಸಿಸಿಐಗೂ ತಲೆನೋವಾಗಿ ಪರಿಣಿಸಿದೆ. ಇತ್ತ ಶ್ರೀಕಾಂತ್ ಮಾತಿಗೆ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

