ಭಾರತದಲ್ಲಿ ನಡೆಯಬೇಕಿದ್ದ ಮತ್ತೊಂದು ಮಹತ್ವದ ಕ್ರಿಕೆಟ್ ಸರಣಿ ರದ್ದು..!

First Published 8, Aug 2020, 1:14 PM

ನವ​ದೆ​ಹ​ಲಿ: ಕೊರೋನಾ ಮಾಡುತ್ತಿರುವ ಅವಾಂತರ ಒಂದೆರಡಲ್ಲ. ಕೊರೋನಾ ಹೆಮ್ಮಾರಿ ಜನಸಾಮಾನ್ಯರು ಮಾತ್ರವಲ್ಲ, ಕ್ರೀಡಾ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಈಗಾಗಲೇ ಒಲಿಂಪಿಕ್ಸ್, ಐಸಿಸಿ ಟಿ20 ವಿಶ್ವಕಪ್, ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳನ್ನು ಕೊರೋನಾ ನುಂಗಿ ನೀರು ಕುಡಿದಿದೆ. ಇದೀಗ ಭಾರತದಲ್ಲಿ ನಡೆಯಬೇಕಿದ್ದ ಮತ್ತೊಂದು ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ ಕೊರೋನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ.

ಸೆಪ್ಟೆಂಬರ್‌-ಅಕ್ಟೋ​ಬರ್‌ನಲ್ಲಿ ಭಾರ​ತ​ದಲ್ಲಿ ನಡೆ​ಯ​ಬೇ​ಕಿದ್ದ ಇಂಗ್ಲೆಂಡ್‌ ವಿರು​ದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರ​ಣಿ​ಯನ್ನು 2021ಕ್ಕೆ ಮುಂದೂ​ಡ​ಲಾ​ಗಿದೆ.

ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊ​ಳ್ಳ​ಲಾ​ಗಿದೆ ಎನ್ನುವ ಕಾರಣ ನೀಡ​ಲಾ​ಗಿದೆಯಾದ​ರೂ, ಸೆ.19ರಿಂದ ನ.10ರ ವರೆಗೂ ಐಪಿಎಲ್‌ ನಡೆ​ಯ​ಲಿರುವ ಕಾರಣ ಸರಣಿ ಮುಂದೂ​ಡ​ಲಾ​ಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೀಮಿತ ಓವರ್‌ಗಳ ಸರಣಿ ಕೊರೋನಾತಂಕದಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿತ್ತು.

ಇನ್ನು ಟಿ20 ವಿಶ್ವಕಪ್‌ಗೂ ಮುನ್ನ ನಡೆಸಲು ಉದ್ದೇಶಿಸಲಾಗಿದ್ದ ಏಷ್ಯಾಕಪ್ ಟಿ20 ಟೂರ್ನಿಯನ್ನು ಕೊರೋನಾ ಹೆಮ್ಮಾರಿ ಆಪೋಶನ ತೆಗೆದುಕೊಂಡಿತ್ತು.

ಈ ಎಲ್ಲಾ ಟೂರ್ನಿಗಳು ರದ್ದಾದ ಹಿನ್ನಲೆಯಲ್ಲಿ ಯುಎಇನಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸಲು ಬಿಸಿಸಿಐ ಮುಂದಾಗಿದೆ.

ಐಪಿ​ಎಲ್‌ ವೇಳೆ ಯಾವುದೇ ಅಂತಾ​ರಾ​ಷ್ಟ್ರೀಯ ಸರ​ಣಿ​ಗ​ಳು ನಡೆ​ಸ​ದಂತೆ ಬಿಸಿಸಿಐ ಎಲ್ಲಾ ಕ್ರಿಕೆಟ್‌ ಮಂಡ​ಳಿ​ಗಳ ಜತೆ ಮಾತು​ಕತೆ ನಡೆ​ಸಿದೆ ಎನ್ನ​ಲಾ​ಗಿದೆ.

ಈಗಾಗಲೇ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಸೇರಿದಂತೆ ಹಲವು ಕ್ರಿಕೆಟ್ ಮಂಡಳಿಗಳು ತಮ್ಮ ದೇಶದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಲು NOC(ನಿರಾಪೇಕ್ಷಣ ಪತ್ರ) ನೀಡಿವೆ.

loader