- Home
- Sports
- Cricket
- ದಿನೇಶ್ ಕಾರ್ತಿಕ್ ದೀಪಿಕಾ ಪಲ್ಲಿಕಲ್ ಅವರನ್ನು ಎರಡೆರಡು ಬಾರಿ ಮದುವೆಯಾಗಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ದಿನೇಶ್ ಕಾರ್ತಿಕ್ ದೀಪಿಕಾ ಪಲ್ಲಿಕಲ್ ಅವರನ್ನು ಎರಡೆರಡು ಬಾರಿ ಮದುವೆಯಾಗಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಪ್ರಖ್ಯಾತ ಸ್ಕ್ವಾಷ್ ಪಟು ದೀಪಿಕಾ ಪಲ್ಲಿಕಲ್ ಇಂದು ತಮ್ಮ 10ನೇ ವೆಡ್ಡಿಂಗ್ ಆ್ಯನಿವರ್ಷರಿ ಸೆಲಿಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಬನ್ನಿ ನಾವಿಂದು ಈ ತಾರಾ ಜೋಡಿಯ ಮದುವೆಯ ಇಂಟ್ರೆಸ್ಟಿಂಗ್ ಡೀಟೈಲ್ಸ್ ತಿಳಿಯೋಣ.

ಮೊದಲ ಮದುವೆಯಿಂದ ಮೋಸ ಹೋದ ಬಳಿಕ ದಿನೇಶ್ ಕಾರ್ತಿಕ್ ಸಂಪೂರ್ಣವಾಗಿ ಕುಸಿದು ಹೋಗಿದ್ದರು. ಈ ಸಂದರ್ಭದಲ್ಲಿ ಜಿಮ್‌ನಲ್ಲಿ ಸ್ಕ್ವಾಷ್ ಪಟು ದೀಪಿಕಾ ಪಲ್ಲಿಕಲ್ ಅವರ ಪರಿಚಯವಾಯಿತು.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಸ್ಕ್ವಾಷ್ ಪಟು ದೀಪಿಕಾ ಪಲ್ಲಿಕಲ್ 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿರಿದರು. ಈ ಜೋಡಿ ಎರಡೆರಡು ಬಾರಿ ಮದುವೆಯಾಗಿದ್ದು, ಬಹುತೇಕ ಮಂದಿಗೆ ಗೊತ್ತಿಲ್ಲ.
ಪರಿಚಯ ಸ್ನೇಹಕ್ಕೆ ತಿರುಗಿ, ಆ ಬಳಿಕ ಪ್ರೀತಿಯಾಗಿ ಬದಲಾಯಿತು. ನಂತರ 2015ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೆ ಇವರ ಮದುವೆ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ.
ದಿನೇಶ್ ಕಾರ್ತಿಕ್ ಕೇವಲ ಎರಡು ದಿನಗಳ ಅಂತರದಲ್ಲಿ ದೀಪಿಕಾ ಪಲ್ಲಿಕ್ಕಲ್ ಅವರನ್ನು ಎರಡೆರಡು ಬಾರಿ ಮದುವೆಯಾದರು. ಮದುವೆ ಪೋಟೋಗಳು ಸಾಮಾಜಿಕ ಕಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ 2013ರಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಇದಾದ ಬಳಿಕ 2015ರಲ್ಲಿ ಮೊದಲಿಗೆ ಕ್ರಿಶ್ಚಿಯನ್ ಆ ಬಳಿಕ ಹಿಂದೂ ಸಂಪ್ರದಾಯದಂತೆ ಮದುವೆಯಾದರು.
ದಿನೇಶ್ ಕಾರ್ತಿಕ್ 18 ಆಗಸ್ಟ್ 2015ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಇದಾದ ಎರಡು ದಿನಗಳ ಬಳಿಕ ಆಗಸ್ಟ್ 20ರಂದು ಹಿಂದೂ ಸಂಪ್ರದಾಯದ ತೆಲುಗು ನಾಯ್ಡು ಸಂಪ್ರದಾಯದಂತೆ ಮದುವೆಯಾದರು.
ಇದಕ್ಕೆ ಕಾರಣ ದಿನೇಶ್ ಕಾರ್ತಿಕ್ ಹಿಂದು ಹಾಗೂ ದೀಪಿಕಾ ಪಲ್ಲಿಕಲ್ ಕ್ರಿಶ್ಚಿಯನ್. ಈ ಕಾರಣಕ್ಕಾಗಿ ಈ ತಾರಾ ಜೋಡಿ ಎರಡು ದಿನಗಳಲ್ಲಿ ಎರಡು ಸಂಪ್ರದಾಯದಂತೆ ಎರಡೆರಡು ಬಾರಿ ಮದುವೆಯಾದರು.
ಅಂದಹಾಗೆ ಇಂದು ಈ ತಾರಾ ಜೋಡಿ 10ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದು, ದೀಪಿಕಾ ಪಲ್ಲಿಕಲ್, ತಮ್ಮ ಪತಿಗೆ ವೆಡ್ಡಿಂಗ್ ಆ್ಯನಿವರ್ಷರಿಗೆ ಶುಭಕೋರಿದ್ದಾರೆ.