- Home
- Sports
- Cricket
- ವೈಭವ್ ಸೂರ್ಯವಂಶಿಗಾಗಿ ಧೋನಿ ತಂದಿದ್ದ ರೊಟೇಶನ್ ಪಾಲಿಸಿ ತರಲು ಸೂಚಿಸಿದ ಬಿಸಿಸಿಐ ಮಾಜಿ ಸೆಲೆಕ್ಷರ್
ವೈಭವ್ ಸೂರ್ಯವಂಶಿಗಾಗಿ ಧೋನಿ ತಂದಿದ್ದ ರೊಟೇಶನ್ ಪಾಲಿಸಿ ತರಲು ಸೂಚಿಸಿದ ಬಿಸಿಸಿಐ ಮಾಜಿ ಸೆಲೆಕ್ಷರ್
ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡುವ ಕುರಿತು ಆಗ್ರಹ ಹೆಚ್ಚಾಗುತ್ತಿದೆ. ಇದರ ನಡುವೆ ಬಿಸಿಸಿಐ ಮಾಜಿ ಆಯ್ಕೆ ಸಮಿತಿ ಸದಸ್ಯ ಮಹತ್ವದ ಸೂಚನೆ ನೀಡಿದ್ದಾರೆ. ವೈಭವ್‌ಗಾಗಿ ಧೋನಿ ತಂದ ರೊಟೇಶನ್ ಪಾಲಿಸಲಿ ತರಲು ಸೂಚಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ತನ್ನಿ ರೊಟೇಶನ್ ಪಾಲಿಸಿ
ಐರ್ಲೆಂಡ್ ವಿರುದ್ಧದ 2 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗಲಿಲ್ಲ. ಇಂದಿನಿಂದ ಆರಂಭಗೊಳ್ಳುವ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲೂ ವೈಭವ್‌ಗೆ ಅವಕಾಶ ಸಿಗುವ ಸಾಧ್ಯತೆ ಕುರಿತು ಸ್ಪಷ್ಟತೆ ಇಲ್ಲ. ಆಡೋ ಹನ್ನೊಂದರ ಬಳಗದಲ್ಲಿ ವೈಭವ್‌ಗೆ ಅವಕಾಶ ನೀಡದಿರುವ ಕುರಿತು ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆ ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯ ಧೋನಿ ತಂದ ರೊಟೇಶನ್ ಪಾಲಿಸಿ ತಂದು ಅವಕಾಶ ನೀಡಲು ಸೂಚಿಸಿದ್ದಾರೆ.
ಧೋನಿ ತಂದಿದ್ದ ರೋಟೇಶನ್ ಪಾಲಿಸಿ
ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣದೀಪ್ ಸಿಂಗ್ ಖಡಕ್ ಸೂಚನೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯಬೇಕು ಅನ್ನೋ ಮ್ಯಾನೇಜ್ಮೆಂಟ್ ವಾದ ಸರಿಯಲ್ಲ. ಅದ್ಭುತ ಆಟಗಾರ ಬೆಂಚ್ ಕಾಯುವುದು ಸರಿಯಲ್ಲ. ಹೀಗಾಗಿ ಎಂಎಸ್ ಧೋನಿ ತಂದಿದ್ದ ರೊಟೇಶನ್ ಪಾಲಿಸಿ ತರಬೇಕು. ಈ ಮೂಲಕ ವೈಭವ್ ಸೂರ್ಯವಂಶಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶರಣದೀಪ್ ಸಿಂಗ್ ಹೇಳಿದ್ದಾರೆ.
ಹಿರಿಯರಿಗೆ ವಿಶ್ರಾಂತಿ ನೀಡಿ ವೈಭವ್ ಆಡಿಸಿ
ಐರ್ಲೆಂಡ್ ಸರಣಿಯಲ್ಲೇ ವೈಭವ್ ಸೂರ್ಯವಂಶಿ ಆಡಬೇಕಿತ್ತು. ಅದು ಆಗಲಿಲ್ಲ. ಇದೀಗ ತಡ ಮಾಡುವುದು ಸರಿಯಲ್ಲ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಾದರೂ ಆಡಿಸಲೇಬೇಕು. ಇದಕ್ಕಾಗಿ ರೋಟೇಶನ್ ಪಾಲಿಸಿ ತಂದು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕು ಎಂದು ದೀಪ್ ಸಲಹೆ ನೀಡಿದ್ದಾರೆ. ಬಲಿಷ್ಠ ತಂಡ ಕಟ್ಟುವ ಹಾಗೂ ಭವಿಷ್ಯದ ದೃಷ್ಟಿಯಿಂದ ರೊಟೇಶನ್ ಪಾಲಿಸಿ ಅನಿವಾರ್ಯ ಎಂದು ದೀಪ್ ಹೇಳಿದ್ದಾರೆ.
ಆಡಿಸಿ ನೋಡಿ, ಫಲಿತಾಂಶ ಗೊತ್ತಾಗುತ್ತೆ
ವೈಭವ್ ಸೂರ್ಯವಂಶಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುತ್ತಿದ್ದಾರೆ. ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾನೆ. ಹೀಗಾಗಿ ವೈಭವ್ ಪ್ರತಿಭೆ ಬಳಸಿಕೊಳ್ಳಲು ಇದೇ ಸೂಕ್ತ ಸಮಯ. ವೈಭವ್ ಕಾಯಿಸಿ ಅವಕಾಶ ಕೊಡುವುದರಲ್ಲಿ ಅರ್ಥವಿಲ್ಲ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವೈಭವ್ ಆಡಿಸಿದರೆ ಫಲಿತಾಂಶವೂ ಬದಲಾಗಲಿದೆ ಎಂದು ಶರಣದೀಪ್ ಸಿಂಗ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಏನಿದು ಧೋನಿ ತಂದ ರೊಟೇಶನ್ ಪಾಲಿಸಿ
2012ರ ವೇಳೆ ಎಂಎಸ್ ಧೋನಿ ರೋಟೇಶನ್ ಪಾಲಿಸಿ ಜಾರಿಗೆ ತಂದಿದ್ದರು. ಈ ಪಾಲಿಸಿ ಮೂಲಕ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲಾಗಿತ್ತು. ರೋಟೇಶನ್ ಮೂಲಕ ಒಬ್ಬೊಬ್ಬರಿಗೆ ಅವಕಾಶ ನೀಡಲಾಗಿತ್ತು. ಇದೇ ಪಾಲಿಸಿಯನ್ನು ಈಗ ಜಾರಿಗೆ ತರಲು ಶರಣದೀಪ್ ಸಿಂಗ್ ಆಗ್ರಹಿಸಿದ್ದಾರೆ.
ಇಂಗ್ಲೆಂಡ್ ಸರಣಿಯಲ್ಲಿ ವೈಭವ್‌ಗೆ ಸಿಗುತ್ತಾ ಅವಕಾಶ
ಐರ್ಲೆಂಡ್ ಸರಣಿಯಲ್ಲಿ ವೈಭವ್‌ಗೆ ಅವಕಾಶ ಸಿಕ್ಕಿಲ್ಲ ಅನ್ನೋ ಕಾರಣ ಇಂಗ್ಲೆಂಡ್ ಸರಣಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇಲ್ಲ. ಸರಣಿಯಲ್ಲಿ ಭಾರತ 3-0 ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡರೆ ಅಂತಿಮ 2 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ ಆರಂಭಿಕ ಪಂದ್ಯಗಳಲ್ಲಿ ವೈಭವ್ ಕಣಕ್ಕಿಳಿಯುವ ಸಾಧ್ಯತೆ ಇಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

