ಐಪಿಎಲ್ 2021; ಬಲಿಷ್ಠ ತಂಡ ಆಯ್ಕೆ ಮಾಡಿದ ಬ್ರಾಡ್ ಹಾಗ್; ಹರ್ಷಲ್‌ ಪಟೇಲ್‌ಗಿಲ್ಲ ಸ್ಥಾನ..!

First Published May 15, 2021, 3:51 PM IST

ಬೆಂಗಳೂರು: ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್‌ ಹಾಗ್‌ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಬಲಿಷ್ಠ ತಂಡವನ್ನು ಆಯ್ಕೆಮಾಡಿದ್ದಾರೆ. ಮೊದಲ 29 ಪಂದ್ಯಗಳಲ್ಲಿ ಪ್ರದರ್ಶನವನ್ನು ಗಮನಿಸಿ ಹಾಗ್ ತಂಡವನ್ನು ಆಯ್ಕೆ ಮಾಡಿದ್ದು, ಪರ್ಪಲ್ ಕ್ಯಾಪ್ ವಿಜೇತ ಆರ್‌ಸಿಬಿ ಡೆತ್ ಓವರ್‌ ಸ್ಪೆಷಲಿಸ್ಟ್ ಹರ್ಷಲ್‌ ಪಟೇಲ್‌ಗೆ ಸ್ಥಾನ ನೀಡಿಲ್ಲ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಬ್ರಾಡ್‌ ಹಾಗ್‌ ತಮ್ಮ ತಂಡದ ನಾಯಕನನ್ನಾಗಿ ರಿಷಭ್‌ ಪಂತ್ ಆಯ್ಕೆ ಮಾಡಿಕೊಂಡಿದ್ಧಾರೆ. ಇನ್ನುಳಿದಂತೆ ನಾಲ್ವರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ತಮ್ಮ ತಂಡದಲ್ಲಿ ಮಣೆ ಹಾಕಿದ್ದಾರೆ. ಕೋಲ್ಕತ ನೈಟ್‌ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಯಾವೊಬ್ಬ ಆಟಗಾರನಿಗೂ ಹಾಗ್ ಸ್ಥಾನ ನೀಡಿಲ್ಲ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಕೇವಲ ಮೂವರು ವಿದೇಶಿ ಆಟಗಾರರಿಗೆ ಮಾತ್ರ ಹಾಗ್ ತಮ್ಮ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಾರೆ.