- Home
- Sports
- Cricket
- Kavya Maran Wedding: ಕಾವ್ಯಾ ಮಾರನ್ ಮದುವೆಯಾಗಲಿರುವ ಅನಿರುದ್ಧ್ ರವಿಚಂದರ್ ಯಾರು? ರಜನಿಕಾಂತ್ಗೂ ಇವರಿಗೂ ಏನು ಸಂಬಂಧ?
Kavya Maran Wedding: ಕಾವ್ಯಾ ಮಾರನ್ ಮದುವೆಯಾಗಲಿರುವ ಅನಿರುದ್ಧ್ ರವಿಚಂದರ್ ಯಾರು? ರಜನಿಕಾಂತ್ಗೂ ಇವರಿಗೂ ಏನು ಸಂಬಂಧ?
ಚೆನ್ನೈ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಸಿಇಒ ಕಾವ್ಯಾ ಮಾರನ್ ಹಾಗೂ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಮದುವೆಯಲ್ಲಿ ಭಾಗಿಯಾಗಲು ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ತಮಿಳುನಾಡಿದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರು ಪರಿವಾರ ಸಮೇತರಾಗಿ ಗ್ರೀಸ್ಗೆ ಪ್ರಯಾಣ ಬೆಳೆಸಿದ್ದಾರೆ.

ಕಾವ್ಯಾ ಮಾರನ್ ವಿವಾಹ: ರಜನಿ, ಸ್ಟಾಲಿನ್ ಗ್ರೀಸ್ಗೆ ಪ್ರಯಾಣ
ಚೆನ್ನೈ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಸಿಇಒ ಕಾವ್ಯಾ ಮಾರನ್ ಹಾಗೂ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಮದುವೆಯಲ್ಲಿ ಭಾಗಿಯಾಗಲು ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ತಮಿಳುನಾಡಿದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರು ಪರಿವಾರ ಸಮೇತರಾಗಿ ಗ್ರೀಸ್ಗೆ ಪ್ರಯಾಣ ಬೆಳೆಸಿದ್ದಾರೆ.
✈️ Anirudh Wedding 🤵🏽💍 https://t.co/GlkEShgao4
— Christopher Kanagaraj (@Chrissuccess) November 9, 2026
ಕಾವ್ಯಾ ಮಾರನ್ ವಿವಾಹ: ರಜನಿಕಾಂತ್ ಸ್ಟಾಲಿನ್ ಬೀಗರು!
ಅನಿರುದ್ಧ್ ಅವರು ರಜನಿಕಾಂತ್ರ ಸೋದರಳಿಯ. ಅತ್ತ ಕಾವ್ಯಾ, ಸ್ಟಾಲಿನ್ರ ಸೋದರಸಂಬಂಧಿ ಆಗಿದ್ದು, ಸನ್ ಗ್ರೂಪ್ನ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ.
Maapillai veedu - Thalaivar off to Greece to #Anirudh wedding❤️🔥 https://t.co/J7woyMa0La
— Vikki | #CinemaMeter🎬 (@CinemaMeterOff) November 9, 2026
ಕಾವ್ಯಾ ಮಾರನ್ ವಿವಾಹ ಯಾವಾಗ? ದಿನಾಂಕ, ಸ್ಥಳ?
ನ.10 ಮತ್ತು 11ರಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಸ್ಟಾಲಿನ್, ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ರಜನೀಕಾಂತ್, ಅವರ ಪುತ್ರಿ ಐಶ್ವರ್ಯಾ, ಮೊದಲಾದವರು ಹೊರಟಿದ್ದು, ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕಂಡುಬಂದರು. ನ.21ರಂದು ಚೆನ್ನೈನಲ್ಲಿ ರಿಸೆಪ್ಷನ್ ನಡೆಯಲಿದೆ.
ವಿವಾಹ ಮಹೋತ್ಸವದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈ ನಡುವೆ ನೀಲಿ ಬಣ್ಣದಲ್ಲಿ ವಿನ್ಯಾಸಗೊಳಿಸಿರುವ ದಂಪತಿಗಳ ಆಮಂತ್ರಣ ಪೆಟ್ಟಿಗೆಯೂ ಎಲ್ಲರ ಗಮನ ಸೆಳೆದಿದೆ.. ಸ್ವಾಗತ ಆಮಂತ್ರಣ ಪತ್ರಿಕೆ(Welcome Invitation Card)ಗಳಲ್ಲಿ ಕೆಲಸ ಮಾಡಿದ ವಿನ್ಯಾಸಕಿ ರಂಜಿನಿ ಅಯ್ಯಂಗಾರ್, ಮಿಡ್-ಡೇ ಜೊತೆ ಈ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ಅನಿರುದ್ಧ್ ಮತ್ತು ಕಾವ್ಯಾ ವೈಯಕ್ತಿಕವಾಗಿ ವಿನ್ಯಾಸದಲ್ಲಿ ಭಾಗಿಯಾಗಿದ್ದಾರೆ ಎಂದು ಬಹಿರಂಗಪಡಿಸಿದರು.
Anirudh marriagekaga greece kelambitan thathi..tamilnadu marriage couples escape agitanga anirudh maatikitan https://t.co/YJl1FG5bGR
— சுள்ளான் சின்ன தத்தி 🔰⚔️ (@Bottleku10_ruva) November 9, 2026
ಕಾವ್ಯಾ ಮಾರನ್ ಮದುವೆಗೆ ಬರುವ ಗಣ್ಯ ಅತಿಥಿಗಳು
ಈ ಆರತಕ್ಷತೆ ಸಮಾರಂಭದಲ್ಲಿ ಮನರಂಜನೆ, ಕ್ರಿಕೆಟ್, ಬ್ಯುಸಿನೆಸ್ಮೆನ್ ಅಷ್ಟೇ ಅಲ್ಲದೆ ರಾಜಕೀಯ ಜಗತ್ತಿನ ಹಲವು ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮತ್ತು ಹಲವಾರು ಪ್ರಮುಖ ಚಲನಚಿತ್ರ ವ್ಯಕ್ತಿಗಳಿಗೂ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.













