ಲಾಕ್‌ಡೌನ್‌: ಮಾರಾಟಕ್ಕಿಲ್ಲ ದಾರಿ, ರಸ್ತೆ ತುಂಬೆಲ್ಲ ಚೆಲ್ಲಿದ ಹಸಿ ಮೆಣಸು

First Published 2, Apr 2020, 1:40 PM

ಕೊರೋನಾ ಸೋಂಕು ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಸಿ ಮೆಣಸು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ಮಡಿಕೇರಿಯ ನಿವೃತ್ತ ಯೋಧರೊಬ್ಬರು 7 ಕ್ವಿಂಟಾಲ್‌ ಹಸಿ ಮೆಣಸು ರಸ್ತೆಗೆ ಸುರಿದು ಪಟ್ಟಣಕ್ಕೆ ಬಂದವರಿಗೆ ಉಚಿತವಾಗಿ ನೀಡಿದ್ದಾರೆ. ಮತ್ತೊಂದೆಡೆ ಈ ಭಾಗದಲ್ಲಿ ಹಸಿ ಮೆಣಸು ಫಸಲು ಗಿಡದಲ್ಲೇ ಹಣ್ಣಾಗಿ ಕೊಳೆಯುತ್ತಿದೆ. ಇಲ್ಲಿವೆ ಫೋಟೋಸ್

ಸೊಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೊಸಮುನ್ಸಿಪಾಲ್ಟಿನಿವಾಸಿ ಮಾಜಿ ಯೋಧ ದೇವರಾಜ್‌ (ರವಿ) ಎಂಬುವರು ತನ್ನ ಒಂದು ಎಕರೆ ಜಮೀನಿನಲ್ಲಿ ಹಸಿ ಮೆಣಸು ಬೆಳೆಸಿದ್ದರು.

ಕೊರೋನಾ ಪರಿಣಾಮದಿಂದ ರೈತರಿಂದ ನೇರವಾಗಿ ಉತ್ತಮ ಬೆಲೆಗೆ ಖರೀದಿಸುವವರಿಲ್ಲದೆ, 7 ಕ್ವಿಂಟಾಲ್‌ ಮೆಣಸನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ್ದಾರೆ. ಇದನ್ನು ಜನ ಮುಗಿಬಿದ್ದು ಕೊಂಡು ಹೋದರು.

Chilly

Chilly

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಹಾರೆ ಹೊಸೂರು ಗ್ರಾಮದಲ್ಲಿ ಪರಮೇಶ, ಮಹೇಶ್‌, ಸೋಮ, ಜಯಂತ್‌ 4 ಮಂದಿ ಸೇರಿ ಒಂದು ಲಕ್ಷ ಮೆಣಸು ಗಿಡ ಬೆಳೆಸಿದ್ದರು. ಈಗಾಗಲೇ ಮೊದಲ ಬೆಳೆಯ 10 ಟನ್‌ ಫಸಲನ್ನು ಕೊಯ್ಲು ಮಾಡಲಾಗಿದೆ. ಆದರೆ ಈಗ ಮೆಣಸು ಹಣ್ಣಾಗಿ ಕೊಳೆಯುತ್ತಿದೆ. ಇನ್ನೂ ಹಲವು ಫಸಲು ಉಳಿದಿದೆ. ಆದ್ದರಿಂದ ಇದಕ್ಕೆ ಮಾರುಕಟ್ಟೆವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ರೈತರೊಬ್ಬರು ತಾವು ಬೆಳೆದ ಹೂಕೋಸಿನ ಗದ್ದೆಗೆ ಕುರಿಗಳನ್ನು ಬಿಟ್ಟು ಮೇಯಿಸಿದ್ದಾರೆ. ಸಾಗಾಟದ ವೆಚ್ಚ ಹೆಚ್ಚಾಗಿರುವುದರಿಂದ ಈ ರೀತಿ ಮಾಡಿದ್ದಾರೆ.

ಮಂಡ್ಯದಲ್ಲಿ ರೈತರೊಬ್ಬರು ಬೆಳೆದ ಕಲ್ಲಂಗಡಿ ಕಣ್ಣನ್ನು ಮಾರಲಾಗದೆ ಕೊನೆಗೆ ಅಷ್ಟೂ ಹಣ್ಣನ್ನು ನಾಶ ಮಾಡಿದ ಘಟನೆ ನಡೆದಿದೆ

loader