ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!
ಸ್ಯಾಂಡಲ್‌ವುಡ್ ಹೆಸರಾಂತ ನಟ ಕಮ್ ಬಿಗ್ ಬಾಸ್ ಸೀಸನ್-4 ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಆಹಾರಕ್ಕಾಗಿ ಕಷ್ಟ ಪಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ದಿನದ ಅಗತ್ಯ ವಸ್ತುಗಳನ್ನು 'ನಟ ಭಯಂಕರ' ಚಿತ್ರ ತಂಡದ ಜೊತೆ ಕೈ ಜೋಡಿಸಿ ವಿತರಿಸುತ್ತಿದ್ದಾರೆ.
'ನಟಭಯಂಕರ' ಚಿತ್ರ ತಂಡ ಅಗತ್ಯ ವಸ್ತುಗಳನ್ನು ಅಗತ್ಯವಿರುವವರಿಗೆ ವಿತರಿಸುತ್ತಿರುವ ಫೋಟೋಗಳಿವು.
ತುಮಕೂರಿನ ಡಿಸಿ ಅನುಮತಿ ಪಡೆದು, ಇಂಥದ್ದೊಂದು ಮಹತ್ಕಾರ್ಯಕ್ಕೆ ಮುಂದಾಗಿದೆ ತಂಡ.
ಅಗತ್ಯ ಸೇವೆ ಒದಗಿಸುವ ಅನುಮತಿ ಪಡೆದು, ತುಮಕೂರಿನ ಜನರಿಗೆ ಪ್ರಥಮ್ ಹಾಗೂ ಚಿತ್ರತಂಡ ಸಹಾಯ ಮಾಡುತ್ತಿದೆ.
ಸಹಾಯ ಮಾಡಲು ಈ ತಂಡ 13 ವಾಹನಗಳನ್ನು ಸಿದ್ದ ಪಡಿಸಿ ಕೊಂಡಿದೆ.
ಪ್ರತಿ ಮನೆ ಬಾಗಿಲಿಗೆ ಭೇಟಿ ನೀಡಿ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ ತಂಡ.
'ನಟ ಭಯಂಕರ' ಚಿತ್ರದ ಸಹ ನಿರ್ಮಾಪಕ ಲೀಲೇಶ್ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.
ಯಾರ ಕೈಯಲ್ಲಿ ದುಡ್ಡಿಲ್ಲದೆ ಜೀವನ ನಡೆಸಲು ಕಷ್ಟ ಅನುಭವಿಸುತ್ತಿದ್ದಾರೋ, ಅವರಿಗೆ ಅಗತ್ಯ ಆಹಾರ ವಸ್ತುಗಳನ್ನು ಪೂರೈಸುತ್ತಿದೆ ಈ ತಂಡ.
ಈ ನಡುವೆಯೇ ಕೊರೋನಾ ಎಫೆಕ್ಟ್‌ನಿಂದ ಒಳ್ಳೆ ಹುಡುಗ ಪ್ರಥಮ್ ತಮ್ಮ ಹುಟ್ಟೂರಿಗೆ ತೆರಳಿ ಕುರಿಗಳನ್ನೂ ಮೇಯಿಸುತ್ತಿದ್ದಾರೆ.
ಲಾಕ್‌ಡೌನ್ ಇರುವ ಕಾರಣ ಚಿತ್ರೀಕರಣ ರದ್ದಾಗಿದೆ. ತಮ್ಮ ಊರಿನಲ್ಲಿ, ದನ ಮೇಯಿಸಿ, ಹಾಲು ಕರೆಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಪ್ರಥಮ್ ಸಮಾಜ ಸೇವೆ ಮಾಡುವುದರಲ್ಲೂ ಎತ್ತಿ ಕೈ.