ಚಿತ್ರಗಳು: ಐಸೋಲೇಶನ್ ವಾರ್ಡ್‌ಗೆ ಶ್ರೀರಾಮುಲು ಭೇಟಿ, ವೈದ್ಯರಿಗೆ ತಲೆ ಬಾಗಿಸಿ ನಮಸ್ಕಾರ
ಕೊರೋನಾ ಸೋಂತರು ಅಂದ್ರೆ ದೂರ ಓಡಿ ಹೋಗು ಪರಿಸ್ಥಿತಿ ಕರ್ನಾಟಕದಲ್ಲಿ ಎದುರಾಗಿದೆ. ಇದರ ಮಧ್ಯೆ ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರುಬಳ್ಳಾರಿಯ ಜಿಲ್ಲಾಸ್ಪತ್ರೆಯ Covid19 Isolation Wardಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ, ಸೌಕರ್ಯಗಳ ಪರಿಶೀಲನೆ ನಡೆಸಿದರು. ವೇಳೆ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ, ನಾಡಿನ ಜನರ ಹಿತ ಕಾಯಲು ವೈಯಕ್ತಿಕ ಜೀವನವನ್ನು ಬದಿಗೊತ್ತಿ, ಹಗಲಿರುಳು ಸಲ್ಲಿಸುತ್ತಿರುವ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಆರೋಗ್ಯ ಸಚಿವ ಶ್ರೀರಾಮುಲು ಅವರು ಖುದ್ದು ಬಳ್ಳಾರಿಯ ಕೊರೋನಾ ಐಸೋಲೇಶನ್ ವಾರ್ಡ್‌ಗೆ ಭೇಟಿ ನೀಡಿದರು.
ಶ್ರೀರಾಮುಲು ಅವರು ಸಂಪೂರ್ಣ ಸುರಕ್ಷಿತ ಮಾಸ್ಕ್, ಡ್ರೆಸ್ ಹಾಗೂ ಗ್ಲೌಸ್ ಧರಿಸಿ ವಾರ್ಡ್‌ಗೆ ಭೇಟಿ ಕೊಟ್ಟರು
ಇದೇ ವೇಳೆ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಸೋಂಕಿತರಿಗೆ ಯಾವುದೇ ಆತಂಕ್ಕೆ ಒಳಗಾಗುವುದು ಬೇಡ ಎಂದು ದೈರ್ಯ ಹೇಳಿದರು.
ಹಾಗೆ ಆಸ್ಪತ್ರೆಯ ವೈದ್ಯರ ಜತೆಗೆ ಸಭೆ ನಡೆಸಿ ಕೊರೋನಾ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರತು ಚರ್ಚೆ ನಡೆಸಿದರು.
ಸ್ಯಾನಿಟೈಸರ್ ಮೂಲಕ ಕೈ ವಾಶ್ ಮಾಡಿಕೊಂಡ ರಾಮುಲು
ಆಸ್ಪತ್ರಗೆ ಬಂದ ತಕ್ಷಣವೇ ಶ್ರೀರಾಮುಲು ಅವರು ವೈದ್ಯರಿಗೆ ತಲೆ ಬಾಗಿಸಿ ನಮಸ್ಕರಿಸಿರುವುದು ವಿಶೇಷ
ಇದೇ ವೇಳೆ ರಾಮುಲು ವೈರಸ್ ತಡೆಗಟ್ಟಲು ರಚಿಸಲಾಗಿರುವ ಟಾಸ್ಕ್ ಫೋರ್ಟ್ ತಂಡದ ಜತೆ ಮಾಹಿತಿ ಪಡೆದರು.