ಕೊರೋನಾ ಅವತಾರ, ಈ ಪ್ರಾಣಿಗಳ ದುರವಸ್ಥೆ ಕೇಳುವವರು ಯಾರು?

First Published 29, Mar 2020, 9:38 PM

ಕೋವಿಡ್ 19ನಿಂದಾಗಿ ಉಂಟಾಗಿರುವ ಸಂಕಷ್ಟಕ್ಕೆ ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಸಿಕ್ಕಿ ಹಾಕಿಕೊಂಡಿದ್ದು, ನಗರದಲ್ಲಿನ ಹಲವು ಪೆಟ್ ಶಾಪ್ನಲ್ಲಿ ಆಹಾರವಿಲ್ಲದೇ ಬಂಧಿಯಾಗಿರುವ ಪಶು ಮತ್ತು ಪ್ರಾಣಿಗಳ ನೆರವಿಗೆ ಪ್ರಾಣಿ ದಯಾ ಸಂಘದ ಸ್ವಯಂ ಸೇವಕರು ಹಾಗೂ ಬಿಬಿಎಂಪಿ ಕೈ ಜೋಡಿಸಿದ್ದಾರೆ. ಬಳಲಿರುವ ಪ್ರಾಣಿಗಳಿಗೆ ಆಹಾರ ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

ಈ ವಿಷಯವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಪಶು ಕಲ್ಯಾಣ ಮಂಡಳಿ ಸದಸ್ಯ ಶಿವಾನಂದ ಡಂಬಳ್. "ಈಗಾಗಲೇ ನಗರದಲ್ಲಿರುವ ಪ್ರಾಣ/ಪಕ್ಷಿಗಳನ್ನ ರಕ್ಷಿಸುವ ನಿಟ್ಟಿನಲ್ಲಿ ಹಲವು ಪ್ರಾಣಿ ದಯಾ ಸಂಘಗಳಾದ ಸಿಯುಪಿಎ, ಪಿಎಫ್ಎ, ಎಸ್ಪಿಸಿಎ ಮತ್ತಿತರ ಸಂಸ್ಥೆಗಳು ಆಹಾರ ಒದಗಿಸುವುದಕ್ಕೆ ಬಿಬಿಎಂಪಿ ನೆರವಿಗೆ ಮುಂದೆ ಬಂದಿದೆ ಎಂದು ತಿಳಿಸಿದರು.

ಬೆಂಗಳೂರನ್ನ ನಾಲ್ಕು ಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗವನ್ನೂ ಒಂದೊಂದು ಸಂಸ್ಥೆಗಳಿಗೆ ವಹಿಸಿ ಕೊಡಲಾಗುತ್ತಿದ್ದು, ಆ ಭಾಗದಲ್ಲಿನ ಪ್ರಾಣಿ/ಪಕ್ಷಿಗಳೊಇಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಳಗ್ಗೆ 7 ರಿಂದ 9.30 ಮತ್ತು ಸಂಜೆ 4 ರಿಂದ 6ರ ಮಧ್ಯೆ ಈ ಸ್ವಯಂ ಸೇವಕರು ಪ್ರಾಣಿಗಳಿಗೆ ಆಹಾರ ಒದಗಿಸಲಿದ್ದಾರೆ. ಈ ಕಾರ್ಯಕ್ಕೆ ಬಿಬಿಎಂಪಿ ನೆರವು ನೀಡಲಿದ್ದು, ಪ್ರತಿ ವಿಭಾಗದಲ್ಲಿಯೂ ಸಿದ್ಧಗೊಳ್ಳುವ ಆಹಾರದ ಶುಚಿತ್ವ ಹಾಗೂ ಗುಣಮಟ್ಟವನ್ನ ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಲಾಗುತ್ತದೆ.

ವಾಸ್ತವವಾಗಿ ಸದ್ಯದ ಗಂಭೀರ ಸಮಸ್ಯೆಯೆಂದರೆ ನಗರದ ಹಲವು ಪೆಟ್ ಶಾಪ್ ಮಾಲೀಕರು ಬಂದ್ ಮಾಡಿಕೊಂಡು ಹೋಗಿದ್ದು, ಒಳಗಡೆ ಇರುವ ಅನೇಕ ಪ್ರಾಣಿ ಪಕ್ಷಿಗಳು ಆಹಾರವಿಲ್ಲದೇ ತೀವ್ರ ಸಂಕಷ್ಟಕ್ಕೆ ಸಿಲುಕೊಂಡಿರುವ ಸಾಧ್ಯತೆಗಳಿವೆ.

ಲಾಕ್ ಡೌನ್ ಘೋಷಣೆಯಾದಾಗಿನಿಂದ ಈ ಶಾಪ್ ಗಳನ್ನು ತೆರೆದಿಲ್ಲ ಮತ್ತು ಒಳಗಡೆಯಿರುವ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿಲ್ಲ ಎಂದು ಅನೇಕ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ತತ್ಕ್ಷಣ ಆ ಶಾಪ್ ಗಳನ್ನೆಲ್ಲಾ ಗುರುತಿಸಿ ಅಲ್ಲಿ ಸಿಲುಕಿಕೊಂಡಿರುವ ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ಒದಗಿಸುವ ಕೆಲಸ ಆಗಬೇಕಿದೆ.

ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿಯ ಪೆಟ್ ಶಾಪ್ ನಲ್ಲಿ ಪರಿತಪಿಸುತ್ತಿದ್ದ ಪ್ರಾಣಿ, ಪಕ್ಷಿಗಳ ಚಿತ್ರಣ ಕಣ್ಣಿಗೆ ಬಿತ್ತು.

ಆ ನಂತರದಲ್ಲಿ ಕೋರಮಂಗಲದಲ್ಲಿನ ಗೋಶಾಲೆಗೂ ಅಧಿಕಾರಿಗಳ ತಂಡ ಭೇಟಿ ಕೊಟ್ಟಿತ್ತು. ಅಲ್ಲಿರುವ ಸಾವಿರಾರು ದನ ಕರುಗಳಿಗೆ ಸಧ್ಯದ ಮಟ್ಟಿಗೆ ಆಹಾರ ಒದಗಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಅಲ್ಲಿನ ವ್ಯವಸ್ಥಾಪಕರು ತಿಳಿಸಿದರು. ಆದರೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಬಾಧಿಸಬಹುದು. ಹೀಗಾಗಿ ಸರ್ಕಾರದಿಂದ ಅಗತ್ಯವಿರುವಷ್ಟು ಮೇವು, ಆಹಾರ ದೊರಕುವಂತಾದರೆ ಒಳಿತು ಎಂದು ಮನವಿ ಮಾಡಿಕೊಳ್ಳಲಾಯಿತು.

ಪರಿಸರ ಮತ್ತು ಪಶು ಕಾರ್ಯಕರ್ತ ಅರುಣ್ ಪ್ರಸಾದ್ ಮಾತನಾಡಿ,  ಇಂಥಹ ಸಮಯದಲ್ಲಿ ಸಾರ್ವಜನಿಕರ ಸ್ಪಂದನೆ ತುಂಬಾ ಮುಖ್ಯವಾಗಿದೆ. ಹಸಿದ ಪ್ರಾಣಿ ಪಕ್ಷಿಗಳನ್ನ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ, ನೀರು ಒದಗಿಸಿ, ಅವುಗಳು ಹಸಿವೆಯಿಂದ ಸಾವನ್ನಪ್ಪದಂತೆ ನೋಡಿಕೊಳ್ಳಬೇಕಿದೆ ಎಂದರು.

ನಗರದ ಹಲವೆಡೆ ಪ್ರಾಣಿ, ಪಕ್ಷಿಗಳಿಗೆ ಆಹಾರ ಒದಗಿಸಲು ಹಲವರು ಸಿದ್ಧರಿದ್ದಾರೆ. ಆದರೆ ಕಫ್ರ್ಯೂದಿಂದಾಗಿ ಪೊಲೀಸ್ ಬಂದೋಬಸ್ತ್ ಬಿಗಿಯಾಗಿರುವುದರಿಂದ ಈ ಕಾರ್ಯಕ್ಕೆ ಸಾಕಷ್ಟು ಅಡಚಣೆಯಾಗುತ್ತಿದೆ. ಅನುಮತಿ ಪತ್ರ/ಪಾಸ್ ಇಲ್ಲದಿರುವ ಕಾರಣ ಹಲವೆಡೆ ಕಾರ್ಯಕರ್ತರನ್ನ ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ.

ಹೀಗಾಗಿ ಈ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಪಾಸ್ ಒದಗಿಸುವುದು ಮತ್ತು ಆಹಾರ ಒದಗಿಸಲು ಅನುವು ಮಾಡಿಕೊಡಬೇಕು ಎಂಬ ಮನವಿ ಮಾಡಿಕೊಂಡರು.

ಈ ಎಲ್ಲ ಸಮಸ್ಯೆಗಳಿಗೆ ಬಿಬಿಎಂಪಿ ಕಡೆಯಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನ ನೀಡಲಾಗುವುದು. ಪ್ರಾಣಿ ಹಾಗೂ ಪಕ್ಷಿಗಳ ಸಂರಕ್ಷಣೆಯ ವಿಚಾರದಲ್ಲಿ ಬಿಬಿಎಂಪಿ ಆಸಕ್ತರ ಜೊತೆ ಕೈ ಜೋಡಿಸಲು ಸಿದ್ಧವಿದೆ ಎಂದು ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಶಶಿಕುಮಾರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ನಂದಿನಿ, ಸಿಯುಪಿಎ ಕಾರ್ಯಕರ್ತ ಡಾ. ಶಿವಾನಂದ ಕಳಂಬಿ ಇನ್ನು ಕೆಲ ಪ್ರಾಣಿದಯಾ ಸಂಘಗಳ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಆಹಾರವಿಲ್ಲದೇ ಪ್ರಾಣಿಗಳು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕೆಲಸ ಮೆಚ್ಚಲೇಬೇಕು

ಪ್ರಾಣಿಗಳಿಗೂ ಆಹಾರ ನೀಡುವುದು ನಮ್ಮ ಹೊಣೆ

ಪ್ರಾಣಿಗಳಿಗೂ ಆಹಾರ ನೀಡುವುದು ನಮ್ಮ ಹೊಣೆ

loader