10 ನೇ ತರಗತಿಯಲ್ಲಿದ್ದಾಗ ಫಸ್ಟ್ ರಿಲೆಷನ್‌ಶಿಪ್ ಹೊಂದಿದ್ದ ಕೈರಾ ಅಡ್ವಾಣಿ!
ಕೈರಾ ಅಡ್ವಾಣಿ ಬಾಲಿವುಡ್‌ನಲ್ಲಿ ನೆಲೆಯೂರುತ್ತಿದ್ದಾರೆ. ಈ ದಿನಗಳಲ್ಲಿ ಈಕೆಯ ಪರ್ಸನಲ್ ಲೈಫ್ ಚರ್ಚೆಯಲ್ಲಿದೆ. ಪ್ರಸ್ತುತ ಕೈರಾ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಟಿ 10ನೇ ತರಗತಿಯಲ್ಲಿ ಮೊದಲ ಬಾರಿಗೆ ಪ್ರೀತಿ ಮಾಡಿದ್ದರು ಹೇಳಿಕೊಂಡಿದ್ದಾರೆ
ಕಿಯಾರಾ ಅಡ್ವಾಣಿ ತಮ್ಮ ಮನಮೋಹಕ ಲುಕ್ ಹಾಗೂ ನಟನೆಯಿಂದ ಫೇಮಸ್ ಆಗಿದ್ದಾರೆ.
ಪ್ರಸ್ತುತ ಅವರ ಹೆಸರು ಸಹನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕೇಳಿಬರುತ್ತಿದೆ.
ಕಿಯಾರಾ ಒಮ್ಮೆ ತನ್ನ ಮೊದಲ ರಿಲೆಷನ್‌ಶಿಪ್ ಬಗ್ಗೆ ಕೆಲವು ರಹಸ್ಯಗಳನ್ನು ಬಹಿರಂಗ ಪಡಿಸಿದ್ದರು.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಡೇಟಿಂಗ್ ವದಂತಿಗಳು ಈಗ ಸ್ವಲ್ಪ ಸಮಯದಿಂದ ಹೊರಬರುತ್ತಿವೆ.
ನಟಿ ತಾನು 10 ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದರು.
ಕಿಯಾರಾ ತಾನು 10 ನೇ ತರಗತಿಯಲ್ಲಿದ್ದಾಗ ಮೊದಲ ಬಾರಿ ಆಫೇರ್ ಹೊಂದಿದ್ದರು ಮತ್ತು ಅವರು ಫೋನ್‌ನಲ್ಲಿ ಮಾತಾನಾಡುವಾಗ ಅವರ ತಾಯಿಯ ಬಳಿ ಸಿಕ್ಕಿಹಾಕಿ ಕೊಂಡರು ಎಂದು ರೀವಿಲ್ ಮಾಡಿದ ನಟಿ.
ಬೋರ್ಡ್ ಪರೀಕ್ಷೆಗಳು ಹತ್ತಿರ ಇರುವುದರಿಂದ ಓದಿನ ಬಗ್ಗೆ ಹೆಚ್ಚು ಗಮನಹರಿಸಲು ತಾಯಿ ಗದರಿಸಿದ ವಿಷಯವನ್ನು ಸಹ ಕೈರಾ ಹಂಚಿಕೊಂಡರು.
ಕೈರಾ ಅಡ್ವಾಣಿಯ ತಾಯಿ ಮತ್ತು ತಂದೆ ಪ್ರೇಮ ವಿವಾಹವಾಗಿದ್ದು. ಆ ಕಾರಣದಿಂದ ಅವರು ಈ ಬಗ್ಗೆ ತುಂಬಾ ಓಪನ್ ಆಗಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅವರ ಹೆತ್ತವರನ್ನು ತನ್ನ ಮನೆಗೆ ಡಿನ್ನರ್‌ಗೆ ಆಹ್ವಾನಿಸಿದ್ದರು ಕೈರಾ ಎಂದು ವರದಿಗಳು ಹೇಳುತ್ತವೆ