ದಿಶಾ ಪಟಾನಿ ಮುಂಬೈಗೆ ಬಂದಾಗ ಕೈಯಲ್ಲಿ ಇದ್ದದ್ದು ಕೇವಲ 500 ರೂ. ಅಂತೆ!

First Published Jun 15, 2020, 11:28 AM IST

ಸಿನಿಮಾಗಳಲ್ಲಿ ತನ್ನ ಗ್ಲಾಮರಸ್‌ ಲುಕ್‌ಗೆ ಚರ್ಚೆಯಾಯುತ್ತಿರುತ್ತಾರೆ ನಟಿ ದಿಶಾ ಪಟಾನಿ. ಬರೇಲಿಯ ನಿವಾಸಿಯಾಗಿರುವ ದಿಶಾ ನಿಜ ಜೀವನದಲ್ಲಿಯೂ ಬೋಲ್ಡ್‌ ಲುಕ್‌ಗೆ ಹೆಸುರವಾಸಿ. ಆಗಾಗ್ಗೆ ಮನಮೋಹಕ ನೋಟದಲ್ಲಿ ಕಾಣುವ ದಿಶಾರ ಚಲನಚಿತ್ರ ಪ್ರಯಾಣ ಸುಲಭವಾಗಿರಲಿಲ್ಲ. ಈ ನಟಿ ಬರೇಲಿಯಿಂದ ಮುಂಬೈಗೆ ಹೋದಾಗ, ಕೇವಲ 500 ರೂಪಾಯಿಗಳನ್ನು ಹೊಂದಿದ್ದರಂತೆ. ಸ್ವತಃ ಅವರೇ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಾನು ಏಕಾಂಗಿಯಾಗಿ ವಾಸಿಸುತ್ತಿದ್ದೆ ಮತ್ತು ಕೆಲಸ ಮಾಡುತ್ತಿದ್ದೆ, ಆದರೆ ಎಂದಿಗೂ ಕುಟುಂಬದಿಂದ ಸಹಾಯವನ್ನು ಕೇಳಲಿಲ್ಲ ಎಂದಿದ್ದಾರೆ ದಿಶಾ ಪಟಾನಿ.