ರೊಮ್ಯಾಂಟಿಕ್ ಫೋಟೋ ಮೂಲಕ ಮುದ್ದಿನ ಪತ್ನಿಗೆ ಪ್ರೀತಿಯ ಬರ್ತಡೇ ವಿಶ್; ವಿದೇಶದಲ್ಲಿ ಕತ್ರಿನಾ-ವಿಕ್ಕಿ ಮಸ್ತ್ ಎಂಜಾಯ್
ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ವಿಕ್ಕಿ ಕೌಶಲ್ ಮುದ್ದಿನ ಪತ್ನಿ ಕತ್ರಿನಾ ಕೈಫ್‌ಗೆ ಪ್ರೀತಿಯ ಬರ್ತಡೆ ವಿಶ್ ಮಾಡಿದ್ದಾರೆ. ಇಬ್ಬರೂ ವಿದೇಶದಲ್ಲಿದ್ದೂ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.
ನಟಿ ಕತ್ರಿನಾ ಕೈಫ್ ಅವರಿಗೆ 40 ನೇ ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಖ್ಯಾತ ನಟ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಹುಟ್ಟುಹಬ್ಬವನ್ನು ವಿದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿ ಜೊತೆ ಎರಡು ದಿನಗಳ ಮುಂಚೆಯೇ ವಿದೇಶಕ್ಕೆ ಹಾರಿದ್ದ ವಿಕ್ಕಿ ಕೌಶಲ್ ವಿಕ್ಕಿ ಜೋಡಿ ಮಸ್ತ್ ಮಜಾ ಮಾಡುತ್ತಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಜೋಡಿ ಬೀಚ್‌ನಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಮುದ್ದಿನ ಪತ್ನಿಗೆ ವಿಕ್ಕಿ ಕೌಶಲ್ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯ ವಿಶ್ ಮಾಡಿದ್ದಾರೆ.
ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತಡೇ ಮೈ ಲವ್ ಎಂದು ಹೇಳಿದ್ದಾರೆ.
ಅಂದಹಾಗೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಇಬ್ಬರೂ ಎಲ್ಲಿಗೆ ಹೋಗಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿಲ್ಲ. ಬೀಚ್ ಬ್ಯಾಗ್ರೌಂಡ್ ನೋಡಿ ಮಾಲ್ಡೀವ್ಸ್ ಎಂದು ಹೇಳಲಾಗುತ್ತಿದೆ. ಆದರೆ ಎಲ್ಲಿಯೂ ರಿವೀಲ್ ಮಾಡಿಲ್ಲ.
ಕತ್ರಿನಾ ಕೈಫ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಜೊತೆಗೆ ಅನೇಕ ಗಣ್ಯರು ವಿಶ್ ಮಾಡುತ್ತಿದ್ದಾರೆ. ಬಾಲಿವುಡ್ ಬಹುತೇಕ ಸ್ಟಾರ್ಸ್ ಕತ್ರಿನಾಗೆ ಶುಭಾಶಯ ತಿಳಿಸಿದ್ದಾರೆ. ಕರೀನಾ, ಅನುಷ್ಕಾ, ಸೇರಿದಂತೆ ಅನೇಕ ಸ್ಟಾರ್ಸ್ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 2021 ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಇಬ್ಬರ ಮದುವೆಗೆ ಬಾಲಿವುಡ್‌ನ ಕೆಲವು ಗಣ್ಯರು ಮಾತ್ರ ಹಾಜರಾಗಿದ್ದರು. ಬಳಿಕ ಫೋಟೋಗಳನ್ನು ಶೇರ್ ಮಾಡಿ ಮದುವೆ ವಿಚಾರ ಅಧಕೃತಗೊಳಿಸಿದ್ದರು.