ಹೀಗೂ ಸೀರೆ ಉಡಬಹುದು ನೋಡಿ; ನಟಿ ಉರ್ಫಿಯ ಮತ್ತೊಂದು ಹಾಟ್ ಅವತಾರ
ಕಿರುತೆರೆ ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಕಿರುತೆರೆ ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಉರ್ಫಿಯ ಹಾಟ್ ಅವತಾರ ಕಂಡು ಪಡ್ಡೆ ಹುಡುಗರು ನಿದ್ದೆ ಗೆಟ್ಟಿದ್ದಾರೆ.
ಇದೀಗ ಉರ್ಫಿ ಮತ್ತೊಂದು ಹಾಟ್ ಅವತಾರದ ಮೂಲಕ ಪಡ್ಡೆಗಳ ಮುಂದೆ ಬಂದಿದ್ದಾರೆ. ವಿಚಿತ್ರವಾಗಿ ಸೀರೆ ಧರಿಸುವ ಮೂಲಕ ಉರ್ಫಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹಾಟ್ ಸೀರೆ ಅವತಾರಕ್ಕೆ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಅನೇಕ ರೀತಿಯ ಬಟ್ಟೆ ಧರಿಸಿ ಓಡಾಡಿರುವ ಉರ್ಫಿ ಇತ್ತೀಚಿಗಷ್ಟೆ ಒಳ ಉಡುಪು ಧರಿಸಿದೆ ಕಾಣಿಸಿಕೊಂಡಿದ್ದರು. ಉರ್ಫಿ ಅವತಾರಕ್ಕೆ ನೆಟ್ಟಿಗರು ಕಂಗಾಲಾಗಿದ್ದರು. ಉಳಪುಡುಪು ಇಲ್ಲದೆ ಕಾಣಿಸಿಕೊಂಡಿದ್ದ ಉರ್ಫಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಸಮುದ್ರದಲ್ಲಿ ನಿಂತು ಗಾಳಿಗೆ ಮೈಯೊಡ್ಡಿರುವ ಉರ್ಫಿ ಸಮುದ್ರದ ಚಿಪ್ಪಿನ ಬಟ್ಟೆ ಧರಿಸಿದ್ದಾರೆ. ಉಳ ಉಡುಪು ಧರಿಸದೆ ಪಾರದರ್ಶಕ ಬಟ್ಟೆ ಸುತ್ತಿಕೊಂಡಿರುವ ಉರ್ಫಿ ಕ್ಯಾಮರಾಗೆ ಮುಂದೆ ಪೋಸ್ ನೀಡಿದ್ದಾರೆ. ಉರ್ಫಿಯ ಈ ಮತ್ತೊಂದು ವಿಚಿತ್ರ ಅವತಾರ ನೋಡಿ ನೆಟ್ಟಿಗರು ದಂಗಾಗಿದ್ದರು.
ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ದರ್ಶನ ನೀಡುತ್ತಾರೆ.
ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ಉರ್ಫಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉರ್ಫಿ ಜನ ಏನು ಹೇಳುತ್ತಾರೆ ಎನ್ನುವುದು ನನಗೆ ಮ್ಯಾಟರ್ ಆಗಿಲ್ಲ ಎಂದಿದ್ದರು.
ಉರ್ಫಿ ಜಾವೇದ್ ಮುಸ್ಲಿಂ ಕುಟುಂಬದಿಂದ ಬಂದವರು. ಉತ್ತರ ಪ್ರದೇಶದ ಉರ್ಫಿ ಈಗ ತನ್ನ ವಿಚಿತ್ರ ಉಡುಪಿನ ಮೂಲಕವೇ ಪ್ರಸಿದ್ಧರಾಗಿದ್ದಾರೆ. ಬಿಗ್ ಬಾಸ್ ಮತ್ತು ಕಿರುತೆರೆಯಲ್ಲಿ ಮಿಂಚಿದರೂ ಖ್ಯಾತಿಗಳಿಸಿದ್ದು ಮಾತ್ರ ವಿಚಿತ್ರ ಅವತಾರಗಳಿಂದ. ಎಷ್ಟು ಬಾರಿ ಟ್ರೋಲ್ ಆದರು ತಲೆಕೆಡಿಸಿಕೊಳ್ಳದ ಉರ್ಫಿ ಪದೇ ಪದೇ ವಿಚಿತ್ರ ಲುಕ್ ನಲ್ಲೇ ದರ್ಶನ ನೀಡುತ್ತಾರೆ.