- Home
- Entertainment
- Cine World
- ಗಂಧದಗುಡಿ Vs ಪುಷ್ಪಾ: ಫ್ಯಾನ್ಸ್ ವಾರ ನಡುವೆಯೇ ಪವನ್ ಕಲ್ಯಾಣ್‌ಗೆ ಬರ್ತ್‌ಡೆ ವಿಶ್ ಮಾಡಿದ ಅಲ್ಲು ಅರ್ಜುನ್
ಗಂಧದಗುಡಿ Vs ಪುಷ್ಪಾ: ಫ್ಯಾನ್ಸ್ ವಾರ ನಡುವೆಯೇ ಪವನ್ ಕಲ್ಯಾಣ್‌ಗೆ ಬರ್ತ್‌ಡೆ ವಿಶ್ ಮಾಡಿದ ಅಲ್ಲು ಅರ್ಜುನ್
ಬೆಂಗಳೂರಿಗೆ ಇತ್ತೀಚೆಗೆ ಭೇಟಿ ನೀಡಿದ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್, ಡಾ.ರಾಜ್‌ಕುಮಾರ್ ನಟನೆಯ ಗಂಧದಗುಡಿಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಬಗ್ಗೆ ಮಾತನಾಡಿ, ಇದೀಗ ಕಾಡುಗಳ್ಳನನ್ನೇ ಹೀರೋ ಮಾಡುವ ಚಿತ್ರಗಳು ಬರುತ್ತಿವೆ ಎನ್ನುವ ಮೂಲಕ ಪುಷ್ಪ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಅಲ್ಲು ಅರ್ಜುನ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಇದು ಟಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿ, ಸ್ಟಾರ್ಸ್ ವಾರ್ಸ್‌ಗೆ ಕಾರಣವಾಗಿತ್ತು. ಇದೀಗ ಪವನ್ ಕಲ್ಯಾಣ್ ಹುಟ್ಟಿದಬ್ಬಕ್ಕೆ ಅಲ್ಲು ಅರ್ಜುನ್ ವಿಶ್ ಮಾಡಿದ್ದು, ಗಲಾಟೆ ತುಸು ತಿಳಿಗೊಳಿಸಲು ಮುಂದಾಗಿದ್ದಾರೆ.

ಈ ದಿನ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಹಬ್ಬ. ತಮ್ಮ ಸ್ಟೈಲ್‌ನಿಂದ, ನಟನೆಯಿಂದ ಕೋಟಿಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿರುವ ಪವನ್ ಕಲ್ಯಾಣ್ (Pawan Kalyan) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟನ ಅಭಿಮಾನಿಗಲು ಎಲ್ಲೆಡೆ ಹುಟ್ಟಿದಬ್ಬ ಆಚರಿಸುತ್ತಿದ್ದು, ಈ ಸಲ ಆಂಧ್ರ ಪ್ರದೇಶ ಡಿಸಿಎಂ ಸಹ ಆಗಿರುವ ಕಲ್ಯಾಣ್‌ಗೆ ರಾಜಕಾರಣಿಗಳೂ ಶುಭ ಕೋರುತ್ತಿದ್ದಾರೆ.
ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಾರ್ಟಿಗೆ ಭರ್ಜರಿ ಸೀಟುಗಳು ಲಭಿಸಿದ್ದು, ಕೇಂದ್ರದಲ್ಲಿ ಮೋದಿ ಸರಕಾರಕ್ಕೆ, ರಾಜ್ಯದಲ್ಲಿ ಚಂದ್ರಬಾಬು ನೇತೃತ್ವದ ಸರಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್, ರಾಜಶೇಖರ ರೆಡ್ಡಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದು, ಪವನ್ ಕಲ್ಯಾಣ್ ವಿರೋಧಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದು ಆಂಧ್ರದಲ್ಲಿ ಫ್ಯಾನ್ಸ್ ವಾರ್‌ಗೆ ಸಾಕ್ಷಿಯಾಗಿತ್ತು. ಅದಕ್ಕೆ ಕುಮ್ಮಕ್ಕು ನೀಡುವಂತೆ ಬೆಂಗಳೂರಿನಲ್ಲಿ ಪವನ್ ಕಲ್ಯಾಣ್ ನೀಡಿದ ಹೇಳಿಕೆ, ಉರಿಯುವ ಬೆಂಕಿಗೆ ತುಪ್ಪು ಸುರಿದಂತಾಗಿತ್ತು. ಈ ಎಲ್ಲ ಗೋಜಿನ ನಡುವೆಯೇ ಪವನ್‌ಗೆ ಅಲ್ಲು ಹುಟ್ಟುಹಬ್ಬದ ಶುಭ ಕೋರಿದ್ದು, ಸ್ಥಿತಿಯನ್ನು ತುಸು ತಿಳಿಗೊಳಿಸಿದೆ.
ಸಿನಿ ತಾರೆಗಳು ಪವನ್ ಕಲ್ಯಾಣ್‌ಗೆ ಹುಟ್ಟು ಹಬ್ಬದ ಶುಭ ಕೋರಿದ್ದು, ದರ್ಶಕುಡು ರಾಘವೇಂದ್ರ ಸಹ ಜನರ ಹೃದಯ ಗೆದ್ದ ನೇತಾರನಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು ಎಂದಿದ್ದಾರೆ.
'ಒನ್ ಆ್ಯಂಡ್ ಓನ್ಲಿ ಪವರ್‌ಸ್ಟಾರ್, ಆಂಧ್ರಪ್ರದೇಶ್ ಉಪ ಮುಖ್ಯಮಂತ್ರಿ ಪವನ್‌ಕಲ್ಯಾಣ್ ಅವರಿಗೆ ಹುಟ್ಟು ಹಬ್ಬದ ಶುಭಾಶಗಳು. ಅಂದು ಕೊಂಡಂತೆ ವಿಜಯ ದೇವತೆ ಒಲಿಯುತ್ತಿರಲಿ. ಸದಾ ಆನಂದದ ಬಾಳು ನಿಮ್ಮದಾಗಲೆಂದು ಬನ್ನಿ ವಾಸು ಶುಭ ಕೋರಿದ್ದಾರೆ.
ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ, ಮತ್ತೊಬ್ಬ ಸ್ಟಾರ್ ನಟನಿಲ್ಲದಂತೆ ಬೆಳೆದ ಪವನ್ ಕಲ್ಯಾಣ್, ಇದೀಗ ರಾಜಕೀಯದಲ್ಲಿ ತಮ್ಮದೇ ಶೈಲಿಯಲ್ಲಿ ಎತ್ತರೆತ್ತರಕ್ಕೆ ಪ್ರಗತಿ ಸಾಧಿಸುತ್ತಿದ್ದು, ನಟಿನಿಗೆ ಶುಭವಾಗಲೆಂದು ತೆಲಗು ಚಿತ್ರರಂಗದ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.