ರಾಜಮೌಳಿ ಸಿನಿಮಾಗೆ ಮಹೇಶ್ ಬಾಬು ಪಡೆಯುವ ಸಂಭಾವನೆಯಲ್ಲಿದೆ ಬಿಗ್ ಟ್ವಿಸ್ಟ್: ಟಾಲಿವುಡ್ ಪ್ರಿನ್ಸ್ ಪ್ಲಾನ್ ಏನು?
ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಸಿನಿಮಾ ಶೀಘ್ರದಲ್ಲೇ ಶುರುವಾಗಲಿದೆ. ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಮಹೇಶ್ ಬಾಬು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ? ಇದರಲ್ಲಿರುವ ಟ್ವಿಸ್ಟ್ ಏನು?
ಸೂಪರ್‌ಸ್ಟಾರ್ ಮಹೇಶ್ ಬಾಬು ಪ್ಯಾನ್ ವರ್ಲ್ಡ್ ಸಿನಿಮಾ ಶೀಘ್ರದಲ್ಲೇ ಆರಂಭವಾಗಲಿದೆ. ಮಹೇಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಮಾತ್ರ ಸದ್ದಿಲ್ಲದೆ ಇದೆ.
ಈ ಸಿನಿಮಾದಲ್ಲಿ ಮಹೇಶ್ ಬಾಬು ಪಾತ್ರ, ಕಥೆ, ಸಾಹಸಗಳು, ಚಿತ್ರೀಕರಣ ಸ್ಥಳಗಳು, ಹಾಲಿವುಡ್ ಶೈಲಿ ಆಕ್ಷನ್ಸ್.. ಹೀಗೆ ನಾನಾ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ವೈರಲ್ ಆಗುತ್ತಿವೆ. ರಾಜಮೌಳಿ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಚರ್ಚೆಯಲ್ಲಿದೆ.
ಮಹೇಶ್ ಬಾಬು ಸಂಭಾವನೆ ವಿಭಿನ್ನವಾಗಿರುತ್ತದೆ. ಕೆಲವು ಸಿನಿಮಾಗಳಿಗೆ ಸಂಭಾವನೆ ಪಡೆದರೆ, ಇನ್ನು ಕೆಲವು ಸಿನಿಮಾಗಳ ಲಾಭದಲ್ಲಿ ಪಾಲು ಪಡೆಯುತ್ತಾರೆ. ಕೆಲವು ಸಿನಿಮಾಗಳನ್ನು ಅವರೇ ನಿರ್ಮಿಸುತ್ತಾರೆ. 'ಸರಿಲೇರು ನೀಕೆವ್ವರು', 'ಸರ್ಕಾರು ವಾರಿ ಪಾಟ', 'ಶ್ರೀಮಂತುಡು', 'ಬ್ರಹ್ಮೋತ್ಸವ' ಚಿತ್ರಗಳಿಗೂ ಇದೇ ಮಾದರಿಯನ್ನು ಅನುಸರಿಸಿದ್ದಾರೆ.
'ಬ್ರಹ್ಮೋತ್ಸವ' ಸಿನಿಮಾ ಹೊರತುಪಡಿಸಿ ಎಲ್ಲಾ ಸಿನಿಮಾಗಳಿಂದ ಲಾಭ ಗಳಿಸಿದ್ದಾರೆ. ಈ ಸಿನಿಮಾ ಮಾತ್ರ ಡಿಸಾಸ್ಟರ್ ಆಗಿ ನಷ್ಟ ಅನುಭವಿಸಿದರು. ಇನ್ನು ರಾಜಮೌಳಿ ಸಿನಿಮಾಗೆ ಸಂಭಾವನೆ ಮಹೇಶ್ ಬಾಬು ಪಡೆಯುತ್ತಿಲ್ಲ ಎನ್ನಲಾಗಿದೆ. ಈ ಚಿತ್ರ ಪ್ಯಾನ್ ವರ್ಲ್ಡ್ ಹಿಟ್ ಆಗುತ್ತದೆ ಎಂಬ ವಿಶ್ವಾಸ ಮಹೇಶ್‌ಗೆ ಇದೆ.
ನಿರ್ಮಾಪಕರು ಹೀರೋ ಮತ್ತು ಚಿತ್ರತಂಡದ ಖರ್ಚುಗಳನ್ನು ಭರಿಸುವುದರಿಂದ, ಸಿನಿಮಾ ಬಿಡುಗಡೆಯಾದ ನಂತರ ಬರುವ ಲಾಭದಲ್ಲಿ ಪಾಲು ಪಡೆಯಲು ಮಹೇಶ್ ಬಯಸುತ್ತಿದ್ದಾರಂತೆ. ಈವರೆಗೆ ಮಹೇಶ್‌ಗೆ 70 ಕೋಟಿ ರೂ. ಸಂಭಾವನೆ ಸಿಗುತ್ತಿತ್ತು. ರಾಜಮೌಳಿ ಸಿನಿಮಾದಿಂದ 250 ಕೋಟಿ ರೂ. ಸಿಗುವ ಸಾಧ್ಯತೆ ಇದೆ.
ಮಹೇಶ್ ಬಾಬು ಮುಂದೆ 300-500 ಕೋಟಿ ರೂ. ಸಂಭಾವನೆ ಪಡೆಯುವ ಹೀರೋ ಆದರೂ ಅಚ್ಚರಿಯಿಲ್ಲ. ರಾಜಮೌಳಿ ಸಿನಿಮಾ ಗೆದ್ದರೆ, ಪ್ಯಾನ್ ಇಂಡಿಯಾ ಸ್ಟಾರ್‌ಗಳನ್ನೂ ಹಿಂದಿಕ್ಕಬಹುದು. ಚಿತ್ರದ ಪೂರ್ವ ನಿರ್ಮಾಣ ಕಾರ್ಯ ಮುಗಿದಿದೆ ಎನ್ನಲಾಗಿದೆ. ಮಹೇಶ್ ಬಾಬು ಹಾಲಿವುಡ್ ಹೀರೋ ರೀತಿಯಲ್ಲಿ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ. ಆ ಲುಕ್ ಇನ್ನೂ ಬಹಿರಂಗವಾಗಿಲ್ಲ.