ಮಾಧುರಿ ದೀಕ್ಷಿತ್ ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿದ್ರು ಈ ಗಾಯಕ!
ಬಾಲಿವುಡ್‌ನ ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ 90ರ ದಶಕದಲ್ಲಿ ಸಾಕಷ್ಟು ಜನರ ನಿದ್ರೆಗೆಡಿಸಿದ ಚೆಲುವೆ. ಮಾಧುರಿ ತನ್ನ ಮುದ್ದಾದ ನಗುವಿನಿಂದ ಈಗಲೂ ಲಕ್ಷಾಂತರ ಹೃದಯಗಳನ್ನು ಆಳುತ್ತಾರೆ. ಸಂಜಯ್ ದತ್‌ನಿಂದ ಅಜಯ್ ಜಡೇಜಾ ವರೆಗೆ ಹಲವರು ಮಾಧುರಿ ದೀಕ್ಷಿತ್ ಅವರನ್ನು ಮದುವೆಯಾಗಲು ಬಯಸಿದ್ದರು. ಆದರೆ ಮಾಧುರಿ ದೀಕ್ಷಿತ್‌ನನ್ನು ಮದುವೆಯಾಗಲು ಒಬ್ಬರು ತಿರಸ್ಕರಿಸಿದ್ದರು. ಯಾರು ಗೊತ್ತಾ ಅವರು? ಇಲ್ಲಿದೆ ವಿವರ .

ವಾಸ್ತವವಾಗಿ ಸಾಂಪ್ರದಾಯಿಕ ಮಹಾರಾಷ್ಟ್ರದ ಕುಟುಂಬಕ್ಕೆ ಸೇರಿದ ಮಾಧುರಿ ದೀಕ್ಷಿತ್ ಸಿನಿಮಾಗಳಲ್ಲಿ ಕೆಲಸ ಮಾಡಬೇಕೆಂದು ಅವರ ಹೆತ್ತವರು ಎಂದಿಗೂ ಬಯಸಲಿಲ್ಲ. ಮಾಧುರಿಯ ತಂದೆ ಮಗಳಿಗೆ ಸಣ್ಣ ವಯಸ್ಸಿನಲ್ಲೇ ಒಳ್ಳೆಯ ಹುಡುಗನನ್ನು ಹುಡುಕತೊಡಗಿದರು
ಅನೇಕ ಹುಡುಗರನ್ನು ನೋಡಿದ ನಂತರ ಮಾಧುರಿಯ ತಂದೆ ಗಾಯಕ ಸುರೇಶ್ ವಾಡ್ಕರ್ ಅವರನ್ನು ಆರಿಸಿದ್ದರು.
ಸುರೇಶ್ ಸಹ ಮಹಾರಾಷ್ಟ್ರದ ಕುಟುಂಬದವರಾಗಿದ್ದರಿಂದ ಮತ್ತು ನಟನೆಯ ಬದಲು ಗಾಯನ ಕ್ಷೇತ್ರದಲ್ಲಿದ್ದರಿಂದ ನಟಿಯ ತಂದೆ ಮಗಳಿಗೆ ಸೂಕ್ತ ವರ ಎಂದು ಇಷ್ಟಪಟ್ಟರು.
ಮಾಧುರಿಗಿಂತ ಸುರೇಶ್ ವಾಡ್ಕರ್ ಸುಮಾರು 12 ವರ್ಷ ಹಿರಿಯರು. ಹುಡುಗಿ ತುಂಬಾ ತೆಳ್ಳಗಿದ್ದಾಳೆ ಎಂದು ಹೇಳಿ ಮದುವೆಯ ಪ್ರಸ್ತಾಪ ತಿರಸ್ಕರಿಸಿದರು. ಆಗ ಮಾಧುರಿ ಇನ್ನೂ ಸಿನಿಮಾಕ್ಕೆ ಕಾಲಿಟ್ಟಿರಲಿಲ್ಲ ಮತ್ತು ತುಂಬಾ ತೆಳ್ಳಗಿದ್ದರು.
ಸುರೇಶ್ ವಾಡ್ಕರ್ ಈ ಸಂಬಂಧವನ್ನು ತಿರಸ್ಕರಿಸಿದ ಕೆಲವು ವರ್ಷಗಳ ನಂತರ ಮಾಧುರಿ ದೀಕ್ಷಿತ್ 1984 ರಲ್ಲಿ 'ಅಬೋಧ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
'ತೇಜಾಬ್' ಸಿನಿಮಾದ ಯಶಸ್ಸಿನ ನಂತರ, ಮಾಧುರಿ ಸಾಲಾಗಿ ಹಿಟ್ ಫಿಲ್ಮಂಗಳನ್ನು ನೀಡಿದ್ದರು.
ವೃತ್ತಿಜೀವನವನ್ನು ಆರಂಭಿಸಿದ 15 ವರ್ಷಗಳ ನಂತರ ಅಕ್ಟೋಬರ್ 17, 1999 ರಂದು ಕ್ಯಾಲಿಫೋರ್ನಿಯಾದ ಹೃದಯ ಶಸ್ತ್ರಚಿಕಿತ್ಸಕ ಶ್ರೀರಾಮ್ ಮಾಧವ್ ನೆನೆ ಅವರನ್ನು ವಿವಾಹವಾದರು.
ನೆನೆ ಕೂಡ ಮರಾಠಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಮದುವೆಯ ನಂತರ, ಮಾಧುರಿ 10 ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಾಗಿದ್ದರು. ನಂತರ 2011 ರಲ್ಲಿ, ಅವರು ಕುಟುಂಬದೊಂದಿಗೆ ಭಾರತಕ್ಕೆ ಮರಳಿದರು.
2003 ರಲ್ಲಿ ಮಾಧುರಿ ಹಿರಿಯ ಮಗ ಆರಿನ್ ಮತ್ತು 2005 ರಲ್ಲಿ ಕಿರಿಯ ಮಗ ರಿಯಾನ್‌ಗೆ ಜನ್ಮ ನೀಡಿದರು.
ಮಾಧುರಿ ದೀಕ್ಷಿತ್ ಕೊನೆಯದಾಗಿ 2019 ರ 'ಕಲಾಂಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸಂಜಯ್ ದತ್ ಜೊತೆಗೆ ಕೆಲಸ ಮಾಡಿದರು.
ತಮ್ಮ 37 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಮಾಧುರಿ ಪ್ರಸ್ತುತ ಡ್ಯಾನ್ಸ್ ದೀವಾನೆ ಶೋ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.