ತಂದೆ ಸೈಫ್‌ ಬೆನ್ನ ಮೇಲೆ ಮೋಜು ಮಸ್ತಿ ಮಾಡುತ್ತಿರುವ ತೈಮೂರ್‌

First Published Jun 7, 2020, 1:17 PM IST

ಕರೀನಾ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ ಮುದ್ದು ಮಗ ತೈಮೂರ್‌ ಆಲಿ ಖಾನ್‌ ಬಿ-ಟೌನ್‌ನ ಫೇವರೇಟ್‌ ಹಾಗೂ ಕ್ಯೂಟ್‌ ಕಿಡ್‌. ಕೊರೋನಾ ಹಾಗೂ ಲಾಕ್‌ಡೌನ್ ನಡುವೆ ಬಾಲಿವುಡ್ ನಟಿ ತಾಯಿ ಕರೀನಾ ಮಗ ತೈಮೂರ್‌ನ ಫನ್‌ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪಪ್ಪಾ ಸೈಫ್‌ನ ಬೆನ್ನ ಮೇಲೆ ಮೋಜು ಮಸ್ತಿ ಮಾಡುತ್ತಿರುವುದು ಇದರಲ್ಲಿ ಕಂಡುಬರುತ್ತದೆ. ಲಾಕ್‌ಡೌನ್‌ನಲ್ಲಿ, ತೈಮೂರ್ ತನ್ನ ಹೆತ್ತವರೊಂದಿಗೆ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾನೆ. ಈ ಹಿಂದೆ ಕರೀನಾ ಮಗನ ಹಲವು ಫೋಟೋಗಳನ್ನು ಫೋಸ್ಟ್‌ ಮಾಡಿದ್ದು ಗಿಡ ನೆಡುತ್ತಿರುವ, ಪೈಂಟ್‌ ಮಾಡುತ್ತಿರುವ ಹಾಗೂ ಅಪ್ಪ ಅಮ್ಮನ ಜೊತೆ ಮನೆಯಲ್ಲಿ ಪುಟಾಣಿ ತೈಮೂರ್‌ ಎಂಜಾಯ್‌ ಮಾಡುತ್ತಿರುವುದು  ಕಂಡುಬರುತ್ತದೆ.