- Home
- Entertainment
- Cine World
- ದಕ್ಷಿಣ ಭಾರತದ ಟಾಪ್ ನಟಿಯರು ಏನು ಓದ್ಕೊಂಡಿದ್ದಾರೆ ಗೊತ್ತಾ? ವೈದ್ಯೆಯಾಗಿದ್ರೂ ಈಕೆ ನಟಿಯಾದ್ದೇಕೆ?
ದಕ್ಷಿಣ ಭಾರತದ ಟಾಪ್ ನಟಿಯರು ಏನು ಓದ್ಕೊಂಡಿದ್ದಾರೆ ಗೊತ್ತಾ? ವೈದ್ಯೆಯಾಗಿದ್ರೂ ಈಕೆ ನಟಿಯಾದ್ದೇಕೆ?
ಪ್ರತಿನಿತ್ಯ ನಾವು ಸಿನಿಮಾ, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಹ ದಕ್ಷಿಣ ಭಾರತದ ಟಾಪ್ ನಟಿಯರ ವಯಸ್ಸು, ಊರಿನ ವಿಚಾರ ಗೊತ್ತಿರುತ್ತದೆ. ಆದರೆ, ಅವರ ಶೈಕ್ಷಣಿಕ ಅರ್ಹತೆಗಳೇನು? ಏನು ಓದಿಕೊಂಡಿದ್ದಾರೆ ಎಂಬುದು ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ..

ತೆಲುಗು ಸಿನಿಮಾ ಕ್ಷೇತ್ರದ ಬೇಡಿಕೆ ನಟಿ ಹಾಗೂ ಇತ್ತೀಚಿನ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಾ ನಟನೆಯಲ್ಲೂ ತೊಡಗಿಸಿಕೊಂಡಿರುವ ಸಮಂತಾ ಬಿ.ಕಾಂ ಮಾಡಿಕೊಂಡಿದ್ದಾಳೆ.
ಭಾರತೀಯ ಸಿನಿಮಾದ ಸೆಕ್ಸಿಯಸ್ಟ್ ನಟಿ ಹಾಗೂ ನೂವು ಕಾವಾಲಯ್ಯ ಎಂದು ಪ್ರಸಿದ್ಧಿಯಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ಕೇವಲ ಬಿಎ ಓದಿಕೊಂಡಿದ್ದಾರೆ.
ಬಾಹುಬಲಿ ಹಾಗೂ ಅರುಂಧತಿ ಸಿನಿಮಾದ ಮೂಲಕ ಅತ್ಯಂತ ಭರವಸೆ ಮೂಡಿಸಿದ ನಟಿ ಅನುಷ್ಕಾ ಶೆಟ್ಟಿ ಅವರು ಮೂಲ ಕನ್ನಡತಿಯಾಗಿದ್ದಾರೆ. ತೆಲುಗು ಸಿನಿಮಾದ ಬೇಡಿಕೆ ನಟಿ ಅನುಷ್ಕಾ ಶೆಟ್ಟಿ ಬಿಸಿಎ ಶಿಕ್ಷಣ ಪಡೆದಿದ್ದಾರೆ.
ಮಗಧೀರ ಸಿನಿಮಾದ ಬೆಡಗಿ ಕಾಜಲ್ ಅಗರ್‌ವಾಲ್ ಅವರು ಮಾಸ್ ಮೀಡಿಯಾದಲ್ಲಿ ಪದವಿಯನ್ನು ಪಡೆದಿದ್ದಾರೆ. ಈಗ ನಟನೆಯಲ್ಲಿಯೇ ಜೀವನ ಮುಂದುವರೆಸುತ್ತಿದ್ದಾರೆ.
ದಕ್ಷಿಣದ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಯನತಾರಾ ಕೇವಲ ಬಿಎ ಇಂಗ್ಲೀಷ್ ಲಿಟರೇಚರ್ ಮಾಡಿಕೊಂಡಿದ್ದಾರೆ. ಆದರೂ, 20ಕ್ಕೂ ಹೆಚ್ಚು ವರ್ಷಗಳ ಕಾಲ ಬಹುಬೇಡಿಕೆ ನಟಿ ಆಗಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಅವರು ಬಿ.ಎಸ್ಸಿ ಮ್ಯಾಥಮ್ಯಾಟಿಕ್ಸ್ ಮಾಡಿಕೊಂಡಿದ್ದಾರೆ. ಆದರೆ, ತಮ್ಮ ನಟನಾ ಶೈಲಿಯಿಂದಾಗಿ ಓದನ್ನು ಮೊಟಕುಗೊಳಿಸಿ ಸಿನಿಮಾದಲ್ಲಿಯೇ ಜೀವನ ಕಟ್ಟಿಕೊಂಡಿದ್ದಾರೆ.
ಸಿನಿಮಾ ಕ್ಷೇತ್ರಕ್ಕೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟಿರುವ ಅನುಪಮಾ ಪರಮೇಶ್ವರನ್ ಅವರು ನಟನೆಯೊಂದಿಗೆ ಬಿಎ ಕಮ್ಯೂನಿಕೇಷನ್ ಮಾಡಿಕೊಂಡಿದ್ದಾರೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಬೇಡಿಕೆ ನಟಿಯಾಗಿದ್ದಾರೆ. ರಶ್ಮಿಕಾ ಸೈಕಾಲಜಿಯಲ್ಲಿ ಪದವಿಯನ್ನು ಗಳಿಸಿದ್ದಾರೆ. ಹೀಗಾಗಿ, ಅಭಿಮಾನಿಗಳಿಗೂ ಹೆಚ್ಚು ಪ್ರೀತಿ ಪಾತ್ರಳಾಗಿ ನಡೆದುಕೊಳ್ಳುತ್ತಿದ್ದಾರೆ.
ಪೂಜಾ ಹೆಗ್ಡೆ ಅವರು ಮಾಸ್ಟರ್ ಆಫ್ ಕಾಮರ್ಸ್ ಮಾಡಿಕೊಂಡಿದ್ದಾರೆ. ಪೂಜಾ ಅವರು ಅಪ್ಪಿ ತಪ್ಪಿಯೂ ಲೆಕ್ಕದಲ್ಲಿ ವೀಕ್ ಎಂದು ಊಹಿಸಿಕೊಳ್ಳಬೇಡಿ..
ದಕ್ಷಿಣದ ಟಾಪ್ ಅಂಡ್ ಕ್ಯೂಟ್ ನಟಿ ಸಾಯಿ ಪಲ್ಲವಿ ಓದಿಕೊಂಡಿದ್ದು, ಎಂಬಿಬಿಎಸ್ ಆಗಿದ್ದರೂ ನಟನೆಯಲ್ಲಿ ಭಾರಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.