ಭಾಗ್ ಮಿಲ್ಖಾ ಭಾಗ್ ಸಿನಿಮಾಕ್ಕೆ ಸೋನಮ್ ಪಡೆದ ಫೀಸ್ ಕೇಳಿದರೆ ಶಾಕ್ ಆಗುತ್ತೀರಾ!
2013ರ ಬಾಲಿವುಡ್ ಸಿನಿಮಾ ಭಾಗ್ ಮಿಲ್ಖಾ ಭಾಗ್ ಸಿನಿಮಾ ನೆನಪಿದೆಯೇ? ಇದರಲ್ಲಿ ಫರ್ಹಾನ್ ಆಖ್ತರ್ ಜೊತೆ ಸೋನಮ್ ಕಪೂರ್ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಟಿಸಲು ಸೋನಮ್ ಚಾರ್ಜ್ ಮಾಡಿದ ಸಂಭಾವನೆ ಎಷ್ಟು ಗೊತ್ತಾ? ನಟಿ ತೆಗದು ಕೊಂಡ ಫೀಸ್ ಕೇಳಿದರೆ ಆಶ್ಚರ್ಯವಾಗುತ್ತೆ!
2013 ರಲ್ಲಿ, ಬಾಲಿವುಡ್ ನಟಿ ಸೋನಂ ಕಪೂರ್ ಅವರು ಮಿಲ್ಖಾ ಸಿಂಗ್ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾ ಭಾಗ್ ಮಿಲ್ಕಾ ಭಾಗ್‌ನಲ್ಲಿ ಬಿರೊ ಪಾತ್ರದಲ್ಲಿ ಫರ್ಹಾನ್ ಅಖ್ತರ್ ಜೊತೆ ನಟಿಸಿದ್ದರು.
ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ಭಾಗ್ ಮಿಲ್ಕಾ ಭಾಗ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಭಾರತೀಯ ಅಥ್ಲೆಟಿಕ್ ಮಿಲ್ಕಾ ಸಿಂಗ್ ಜೀವನ ಆಧಾರಿತ ಈ ಚಿತ್ರ ಇದೀಗ ನೀರಜ್ ಚೋಪ್ರಾ ಅವರು ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಸಂದರ್ಭದಲ್ಲಿ ಹೆಚ್ಚು ಚರ್ಚೆಯಲ್ಲಿದೆ. ಭಾರತ ಒಲಂಪಿಕ್ಸ್ ಅಥ್ಲೆಟಿಕ್ಸ್‌ವಲ್ಲಿ ಚಿನ್ನ ಗೆಲ್ಲಬೇಕೆಂಬ ಕನಸು ಸಿಗ್ ಅವರದ್ದಾಗಿತ್ತು. 2208ರಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದ ನಂತರ ಇದೀಗ ಜಾವೆಲಿನ್‌ವಲ್ಲಿ ಸ್ವರ್ಣ ಪದಕ ಗೆದ್ದ ನೀರಜ್ ಚೋಪ್ರಾ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದು, ಮಿಲ್ಕಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ. ಆದ್ದರಿಂದ ಅವರು ಇದೀಗ ನೀರಜ್ ಚೋಪ್ರಾರಷ್ಟೇ ಹೆಚ್ಚು ಸುದ್ದಿಯಲ್ಲಿದ್ದಾರೆ.
ಬಾಲಿವುಡ್ ನಿರ್ದೇಶಕ ರಾಕೇಶ್ ಓಂಪ್ರಕಾಶ್ ತಮ್ಮ ಆತ್ಮಚರಿತ್ರೆಯಾದ ದಿ ಸ್ಟ್ರೇಂಜರ್ ಇನ್ ದಿ ಮಿರರ್‌ನಲ್ಲಿ ತಮ್ಮ ಚಲನಚಿತ್ರ ನಿರ್ಮಾಣದ ಪ್ರಯಾಣದ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ.
ಅದರಲ್ಲಿ ಭಾಗ್ ಮಿಲ್ಖಾ ಭಾಗ್ ಸಿನಿಮಾದ ಸೋನಂ ಕಪೂರ್ ಪಾತ್ರ ಮತ್ತು ಅವರ ಸಂಭಾವನೆಯನ್ನು ಸಹ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಫ್ಯಾಷನ್ ಐಕಾನ್ ಎಂದೇ ಖ್ಯಾತರಾದ ಸೋನಮ್ ಕಪೂರ್ ಈ ಚಿತ್ರದಲ್ಲಿ ನಟಿಯಾಗಿ ನಟಿಸಿದ್ದರು. ವಿಭಿನ್ನ ಪಾತ್ರಗಳ ಮೂಲಕವೇ ಹೆಸರು ಮಾಡಿರುವ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಗಳು ಈ ಚಿತ್ರದಲ್ಲಿಯೂ ಅದ್ಭುತವಾಗಿಯೇ ನಟಿಸಿದ್ದರು.
ಸೋನಮ್ ಹೇಗೆ ಭಾಗ ಮಿಲ್ಖಾ ಭಾಗವನ್ನು ಕೇವಲ 11 ರೂಪಾಯಿಗೆ ಮಾಡಲು ಒಪ್ಪಿಕೊಂಡರು ಎಂದು ಅವರು ಪುಸ್ತಕದಲ್ಲಿ ಬರೆದಿದ್ದಾರೆ.
ಸೋನಮ್ ಈ ಹಿಂದೆ 2009 ರ ದೆಹಲಿ 6 ಸಿನಿಮಾದಲ್ಲಿ ರಾಕೇಶ್ ಜೊತೆ ಕೆಲಸ ಮಾಡಿದ್ದರು ಮತ್ತು ಇಬ್ಬರು ಒಟ್ಟಿಗೆ ಕೆಲಸ ಮಾಡುವುದನ್ನು ಎಂಜಾಯ್ ಮಾಡಿದ್ದರು. ಆದರಿಂದ ರಾಕೇಶ್ ತನ್ನ ಮುಂದಿನ ಸಿನಿಮಾ ಭಾಗ್ ಮಿಲ್ಖಾ ಭಾಗ್‌ದಲ್ಲಿ ಮತ್ತೆ ಸೋನಮ್ ಜೊತೆ ಕೆಲಸ ಮಾಡಲು ನಿರ್ಧರಿಸಿದರು.
ಈ ಚಿತ್ರವು ಸಂಪೂರ್ಣವಾಗಿ ಮಿಲ್ಖಾ ಸಿಂಗ್ ಮೇಲೆ ಕೇಂದ್ರಿಕೃತವಾಗಿರುವುದರಿಂದ ಸೋನಮ್ ಪಾತ್ರ ತುಂಬಾ ಕಡಿಮೆ ಇದೆ.
ಬಾಲಿವುಡ್ ಹಂಗಾಮದ ಪ್ರಕಾರ, ರಾಕೇಶ್ ಒಮ್ಮೆ ಸೋನಂ ಚಿತ್ರದಲ್ಲಿ ಕಾಣಿಸಿಕೊಂಡಾಗಲೆಲ್ಲಾ ಪರದೆಯ ಮೇಲೆ ಬೆಳಕು ಮೂಡುತ್ತದೆ ಎಂದು ಹೇಳಿದ್ದರಂತೆ.
ಈ ಸಿನಿಮಾ ದೇಶದ ವಿಭಜನೆಯಿಂದ ಬದುಕುಳಿದವರ ಕರಾಳ ಬಾಲ್ಯವನ್ನು ಹೊಂದಿದೆ ಮತ್ತು ಈ ಚಿತ್ರವು ಪ್ರೇಮಕಥೆಯಲ್ಲ ಎಂದು ಸೋನಮ್ ಅರ್ಥಮಾಡಿಕೊಂಡರು ಎಂದು ಅವರು ತಮ್ಮ ಪುಸ್ತಕದಲ್ಲಿ ಸಹ ನಟಿಯನ್ನು ಅವರನ್ನು ಹೊಗಳಿದ್ದಾರೆ.
ನಾವಿಬ್ಬರೂ ದೆಹಲಿ 6 ಸಿನಿಮಾದ ಜೊತೆ ಅದ್ಭುತ ಪ್ರಯಾಣವನ್ನು ಹಂಚಿಕೊಂಡೆವು. ಚಿತ್ರೀಕರಣಕ್ಕೆ ಕೇವಲ 7 ದಿನಗಳ ಸಾಕು ಎಂದು ಹೇಳಿದ ಸೋನಮ್ , ಈ ದೇಶದ ವಿಭಜನೆ ಮತ್ತು ಮಿಲ್ಖಾ ಸಿಂಗ್ ಅವರ ಬಗ್ಗೆ ಹೇಳಲು ಪ್ರಯತ್ನಿಸಿದ್ದಕ್ಕಾಗಿ ಅವರು ನಮ್ಮನ್ನು ಹೊಗಳಿದಳು. ಹಾಗಾಗಿ ಆಕೆಯೂ ಚಿತ್ರ ಕೊಡುಗೆ ನೀಡಲು ಬಯಸಿ ಕೇವಲ 11 ರೂ. ಸಂಭಾವನೆ ಸ್ವೀಕರಿಸಲು ನಿರ್ಧರಿಸದಳು ಎಂದು ಹೇಳಿದ್ದಾರೆ ರಾಕೇಶ್ ಓಂಪ್ರಕಾಶ್ ಮೆಹ್ರಾ.