ಶಿಲ್ಪಾ ಶೆಟ್ಟಿಗೆ ಹುಟ್ಟಿದಬ್ಬದ ಸಂಭ್ರಮ, ಕತ್ರೀನಾ, ರಣವೀರ್ ಸಿಂಗ್ ಏನು ಮಾಡುತ್ತಿದ್ದಾರೆ?

First Published Jun 11, 2021, 11:05 AM IST

ಬಾಲಿವುಡ್‌ನ ನಟಿ ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿಗೆ 46 ವರ್ಷಗಳ ಸಂಭ್ರಮ. ಅವರ ಬರ್ತ್‌ಡೇಯಂದು ಶಿಲ್ಪಾ ಪತಿ ರಾಜ್ ಕುಂದ್ರಾ, ಮಗ ವಯಾನ್ ಮತ್ತು ತಂಗಿ ಶಮಿತಾ ಶೆಟ್ಟಿ ಜೊತೆ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಫೋಟೋಗ್ರಾಫರ್ಸ್‌ಗೆ ಶಿಲ್ಪಾ ಫ್ಲೈಯಿಂಗ್ ಕಿಸ್ ನೀಡಿ ನಂತರ, ಕೇಕ್ ಕಟ್‌ ಮಾಡಿ ಎಲ್ಲರಿಗೂ ಹಂಚಿದರು. ಮತ್ತೊಂದೆಡೆ, ನಿರ್ದೇಶಕ ಜೋಯಾ ಅಖ್ತರ್ ಅವರ ಮನೆಯ ಹೊರಗೆ ಕತ್ರಿನಾ ಕೈಫ್, ರಣವೀರ್ ಸಿಂಗ್, ಶ್ವೇತಾ ಬಚ್ಚನ್ ಅವರು ಕಾಣಿಸಿಕೊಂಡಿದ್ದಾರೆ.