ಬ್ರೇಕ್ ಪಡೆಯುವ ಮೊದಲು ಸಮಂತಾ ಟೆಂಪಲ್ ರನ್: ಗೋಲ್ಡನ್ ಟೆಂಪಲ್‌ನಲ್ಲಿ ಸ್ಯಾಮ್
ನಟಿ ಸಮಂತಾ ರುತ್ ಪ್ರಭು ನಟನೆಗೆ ಬ್ರೇಕ್ ಪಡೆಯಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬ್ರೇಕ್ ಪಡೆಯುವ ಮೊದಲು ಸಮಂತಾ ಟೆಂಪಲ್ ರನ್ ಮಾಡುತ್ತಿದ್ದಾರೆ.
ಸೌತ್ ಸುಂದರಿ ಸಮಂತಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಸಿಟಾಡೆಲ್ ಮತ್ತು ಖುಷಿ ಸಿನಿಮಾಗಳನ್ನು ಮುಗಿಸಿರುವ ಸಮಂತಾ ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ.
ಸಮಂತಾಗೆ ಮತ್ತೆ ಅನಾರೋಗ್ಯ ಕಾಡುತ್ತಿದೆ. ಮೈಯೋಸಿಟಿಸ್ ನಿಂದ ಬಳಲುತ್ತಿದ್ದ ಸಮಂತಾ ಚೇತರಿಸಿಕೊಳ್ಳುತ್ತಿದ್ದರು. ಚಿಕಿತ್ಸೆ ಪಡೆಯುತ್ತಲೆ ಶೂಟಿಂಗ್‌ಗಳಲ್ಲಿ ಭಾಗಿಯಾಗುತ್ತಿದ್ದರು. ಎರಡು ಸಿನಿಮಾಗಳ ಶೂಟಿಂಗ್ ಮುಗಿಸಿದ್ದಾರೆ.
ಸದ್ಯ ಚಿತ್ರೀಕರಣ ಮುಗಿಸಿರುವ ಸಮಂತಾ ನಟನೆಗೆ ಬ್ರೇಕ್ ಪಡೆಯಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ದೀರ್ಘ ಸಮಯ ಬ್ರೇಕ್ ಪಡೆದು ಸಂಪೂರ್ಣ ಗುಣಮುಖರಾಗಿ ಮತ್ತೆ ವಾಪಾಸ್ ಆಗಲಿದ್ದಾರೆ. ಹಾಗಾಗಿಯೇ ಸಮಂತಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.
ನಟನೆಗೆ ಬ್ರೇಕ್ ಪಡೆಯುವ ಮುನ್ನ ಸಮಂತಾ ಟೆಂಪಲ್ ರನ್ ಮಾಡುತ್ತಿದ್ದಾರೆ. ಕೆಲವು ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ವಿಶೇಷ ಪೂಜೆ ಮಾಡುತ್ತಿದ್ದಾರೆ.
ಸದ್ಯ ಸಮಂತಾ ವೆಲ್ಲೂರಿನ ಪ್ರಸಿದ್ಧ ದೇವಸ್ಥಾನ ಶ್ರೀ ಲಕ್ಷ್ಮೀ ನಾರಾಯಣಿ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಜೊತೆಯಲ್ಲಿ ನಿರ್ಮಾಪಕ ಜಗದೀಶ್ ಪಳನಿಸಾಮಿ ಕೂಡ ಇದ್ದರು.
ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಿತ್ತಾಳೆ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ದೇವನಗರಿ ಸೂಟ್ ಇತ್ತಾಗಿತ್ತು. ಇದರ ಬೆಲೆ 21500 ರೂಪಾಯಿ ಎಂದು ಹೇಳಲಾಗಿದೆ.