ಭಾಗ್ಯಶ್ರೀ ಜೊತೆ ಲಿಪ್‌ಲಾಕ್‌ಗೆ ನೋ ಎಂದಿದ್ದ ಸಲ್ಮಾನ್‌ ಖಾನ್‌

First Published 30, May 2020, 7:25 PM

ಯುವ ಜನತೆಯಲ್ಲಿ ಕಿಚ್ಚು ಹತ್ತಿಸಿದ್ದ ಮೇನೆ ಪ್ಯಾರ್ ಕಿಯಾ ಭಾಗ್ಯಶ್ರೀ ಹಾಗೂ ಸಲ್ಮಾನ್‌ ಖಾನ್‌ ಇಬ್ಬರನ್ನೂ ಬಾಲಿವುಡ್‌‌ಗೆ ಪರಿಚಸಿದ ಸಿನಿಮಾ ಆಗಿದೆ. ನಂತರ ಸಲ್ಲುಬಾಯ್‌ ಹಿಟ್‌ ಸಿನಿಮಾಗಳನ್ನು ನೀಡುತ್ತಾ ಬಾಲಿವುಡ್‌ನ ಸೂಪರ್‌ಸ್ಟಾರ್‌ ಪಟ್ಟಗಿಟ್ಟಿಸಿಕೊಂಡರೆ, ಭಾಗ್ಯಶ್ರೀ ಸಿನಿಮಾದಿಂದ ಹಿಂದೆ ಸರಿದರು. ಕುಟುಂಬದೊಂದಿಗೆ ಎಂಜಾಯ್‌ ಮಾಡುತ್ತಿದ್ದ ನಟಿ ಈಗ ಶೀಘ್ರದಲ್ಲೇ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಆದ್ಯಾಗೂ, 1989ರ ಚಲನಚಿತ್ರ ಮೇನೆ ಪ್ಯಾರ್ ಕಿಯಾಕ್ಕೆ ಸಂಬಂಧಿಸಿದ ಘಟನೆಯೊಂದು ವೈರಲ್‌ ಆಗುತ್ತಿದೆ. ಇದನ್ನು  ಸ್ವತಃ ಚಿತ್ರದ ನಟಿ ಭಾಗ್ಯಶ್ರೀ ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಏನದು?

ಮೈನೆ ಪ್ಯಾರ್ ಕಿಯಾ' ಚಿತ್ರ ಸಲ್ಮಾನ್ ಮತ್ತು ಭಾಗ್ಯಶ್ರೀ ಇಬ್ಬರನ್ನೂ ರಾತ್ರೋರಾತ್ರಿ ತಾರೆಯರನ್ನಾಗಿ ಮಾಡಿತು. ಇವರಿಬ್ಬರ ಜೋಡಿಯು ಕೂಡ ದೊಡ್ಡ ಹಿಟ್ ಆಗಿತ್ತು.

ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ  ಮೈನೆ ಪ್ಯಾರ್ ಕಿಯಾದಿಂದ ಒಟ್ಟಿಗೆ ಕೆರಿಯರ್‌ ಶುರು ಮಾಡಿದವರು, ಚಿತ್ರ ಸೂಪರ್‌ ಹಿಟ್‌ ಆಗಿದ್ದರೂ ಭಾಗ್ಯಶ್ರೀ ಮುಂದೆ ಚಿತ್ರಗಳಲ್ಲಿ ಕೆಲಸ ಮಾಡಲಿಲ್ಲ.

ಸಲ್ಮಾನ್ ಬಾಲಿವುಡ್ ಸೂಪರ್ ಸ್ಟಾರ್ ಆದರೆ ಭಾಗ್ಯಶ್ರೀ ಮರೆಯಾಗಿದ್ದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ ಮೂಲಕ ಈಗ ಅವರು ಮತ್ತೆ ತೆರೆಗೆ ಮರಳುತ್ತಿದ್ದಾರೆ.

ಮೈನೆ ಪ್ಯಾರ್ ಕಿಯಾ ಚಿತ್ರೀಕರಣದ ಸಮಯದಲ್ಲಿನ ಫೋಟೋಶೂಟ್‌ನ ಘಟನೆಯನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರೀಕರಣದ ಮೊದಲು ಫೋಟೋಗ್ರಾಫರ್, ಭಾಗ್ಯಶ್ರೀ ಮತ್ತು ಸಲ್ಮಾನ್‌ರ ಕೆಲವು ಹಾಟ್ ಫೋಟೋಗಳನ್ನು ತೆಗೆದುಕೊಳ್ಳಲು ಬಯಸಿದ್ದರು. ಸಲ್ಮಾನ್‌ರನ್ನು ಬದಿಗೆ ಕರೆದೊಯ್ದು ನನ್ನನ್ನು ಹಿಡಿದು ಕೊಂಡು ಸ್ಮೂಚ್ ಮಾಡಲು ಹೇಳಿದರು, ಅವರ ಮಾತು ನನಗೆ ಕೇಳಿಸುತ್ತಿತು. - ಭಾಗ್ಯಶ್ರೀ

ನನಗೆ ತುಂಬಾ ಭಯವಾಯಿತು. ಆದರೆ ಸಲ್ಮಾನ್ ಉತ್ತರವನ್ನು ಕೇಳಿ ನನಗೆ ಸಮಾಧಾನವಾಯಿತು. ಸಲ್ಮಾನ್  ಹಾಗೆ ಮಾಡಲು ನಿರಾಕರಿಸಿದರು. ಭಾಗ್ಯಶ್ರೀ ಅವರ ಅನುಮತಿಯಿಲ್ಲದೆ ಈ ರೀತಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿದರು.

ಇದನ್ನು ಕೇಳಿ ಅವರು ತುಂಬಾ ಸಂತೋಷಪಟ್ಟರು ಮತ್ತು ಸಲ್ಮಾನ್ ಅವರೊಂದಿಗೆ ಕೆಲಸ ಮಾಡುವ ಮೂಲಕ ಅವರು ಸುರಕ್ಷಿತರು ಎಂದು ಭಾವಿಸಿದರು ಎಂದು ಭಾಗ್ಯಶ್ರೀ ತಮ್ಮ ಹಳೆ ನೆನಪು ಹಂಚಿಕೊಂಡಿದ್ದಾರೆ.

ಈ ಚಿತ್ರದ ಶೂಟಿಂಗ್ ಸಮಯದಲ್ಲೇ ಭಾಗ್ಯಶ್ರೀ ತನ್ನ ಬಾಯ್‌ಫ್ರೆಂಡ್‌ ಜೊತೆ ದೇವಸ್ಥಾನದಲ್ಲಿ ವಿವಾಹವಾದರು. ಸಲ್ಮಾನ್, ಚಲನಚಿತ್ರ ನಿರ್ದೇಶಕ ಸೂರಜ್‌ಚಂದ್ ಬರ್ಜತ್ಯ ಮತ್ತು ಕೆಲವು ಸಿಬ್ಬಂದಿ ಸದಸ್ಯರು ಈ ವಿವಾಹದಲ್ಲಿ ಭಾಗವಹಿಸಿದ್ದರು.

ನಿಮಗೆ ಗೊತ್ತಾ ಸಿನಿಮಾಕ್ಕೆ ಬಂದು ನಾಲ್ಕು ದಶಕ ಕಳೆದರೂ ಕಿಸ್ಸಿಂಗ್‌ ಸೀನ್‌ಗಳಲ್ಲಿ ಕಾಣಿಸಿಕೊಳ್ಳದ ನಟ ಅಂದರೆ ಸಲ್ಮಾನ್‌ ಖಾನ್‌.

ಅಫ್‌ ಸ್ಕ್ರೀನ್‌ನಲ್ಲಿ ಬ್ಯಾಡ್‌ಬಾಯ್‌ ಎಂದೇ ಖ್ಯಾತಿಯಾಗಿರುವ ಈ ನಟ ತೆರೆ ಮೇಲೆ ರೊಮ್ಯಾನ್ಸ್‌ ಮಾಡಿದ್ದು ಕಡಿಮೆಯೇ.

ಎಲ್ಲಾ ರೀತಿಯ ಪಾತ್ರಗಳಿಗೂ ಸೈ ಎನ್ನುವ ಬಾಡಿಗಾರ್ಡ್‌, ಇಂಟಿಮೇಟ್‌ ದೃಶ್ಯಗಳಿಂದ ಮಾತ್ರ ಸದಾ ದೂರ. ಹಾಕಿದ ಶರ್ಟ್ ಬಿಚ್ಚಲು ಮಾತ್ರ ಸದಾ ಮುಂದಿರುತ್ತಾರೆ.

ನನ್ನ ಚಿತ್ರಗಳನ್ನು ಕುಟುಂಬದವರು ಒಟ್ಟಿಗೆ ಕುಳಿತು ನೋಡಲಿ ಹಾಗಾಗಿ ಸಭ್ಯತೆ ಮೀರಿದ ಸೀನ್‌ಗಳು ಬೇಡ ಎಂದು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು ಭಜರಂಗಿ ಬಾಯ್‌ಜಾನ್‌.

loader